ಅತ್ಯಾಚಾರ ಪ್ರಕರಣದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಖುಲಾಸೆ

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್ ದೊರೆತಿದೆ.
ಹರತಾಳು ಹಾಲಪ್ಪ
ಹರತಾಳು ಹಾಲಪ್ಪ
Updated on
ಶಿವಮೊಗ್ಗ: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್ ದೊರೆತಿದೆ. 
ಆ.17 ರಂದು ತೀರ್ಪು ಪ್ರಕಟಿಸಿರುವ ಶಿವಮೊಗ್ಗದ 2 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ. ಬಿ.ಜಿ ರಮಾ ಹರತಾಳು ಹಾಲಪ್ಪ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ. ಪ್ರಕರಣದಿಂದ ಖುಲಾಸೆಗೊಂಡಿರುವ ಹರತಾಳು ಹಾಲಪ್ಪ ದೋಷಮುಕ್ತರಾಗಿದ್ದು ಕ್ಲೀನ್ ಚಿಟ್ ದೊರೆತಿದೆ. 
ಸತತ 7 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಶಿವಮೊಗ್ಗದ 2ನೇ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ರಮಾ ಅವರು ಅಂತಿಮ ತೀರ್ಪುನ್ನು ಪ್ರಕಟಿಸಿದ್ದಾರೆ.  2009ರ ನವೆಂಬರ್​ 26 ರಂದು ಹರತಾಳು ಹಾಲಪ್ಪ ತಮ್ಮ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿ ವೆಂಕಟೇಶಮೂರ್ತಿ ಹಾಗೂ ಪತ್ನಿ ಚಂದ್ರಾವತಿ 2010 ಮೇ 3 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆರೋಪ ಕೇಳಿಬಂದಿದ್ದರಿಂದ ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com