ಲಾಭದತ್ತ ನಮ್ಮ ಮೆಟ್ರೋ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಈ ಆರ್ಥಿಕ ವರ್ಷದಲ್ಲಿ ಲಾಭದತ್ತ ಮುನ್ನಡೆಯುತ್ತಿದೆ
ಬಿಎಂಆರ್ಸಿಎಲ್ ನಷ್ಟ ಈ ಆರ್ಥಿಕ ವರ್ಷದ 50% ನಷ್ಟು ಕಡಿಮೆಯಾಗಿದೆ
ಬಿಎಂಆರ್ಸಿಎಲ್ ನಷ್ಟ ಈ ಆರ್ಥಿಕ ವರ್ಷದ 50% ನಷ್ಟು ಕಡಿಮೆಯಾಗಿದೆ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಈ ಆರ್ಥಿಕ ವರ್ಷದಲ್ಲಿ ಲಾಭದತ್ತ ಮುನ್ನಡೆಯುತ್ತಿದೆ. ಮಾರ್ಚ್ 2017 ರ ಅಂತ್ಯದ ವೇಳೆಗೆ ಇದು 27.52 ಕೋಟಿ ರೂ. ದಾಯ ಗಳಿಸಿದ್ದು ಈ ಹಿಂದಿನ ಹಣಕಾಸು ವರ್ಷಕ್ಕಿಂತಲೂ ಇದು ಶೇ. 50 ರಷ್ಟು ಹೆಚ್ಚಿದೆ. ಇದೀಗ ಬಿಡುಗಡೆಯಾದ ಮೆಟ್ರೋ ನಿಗಮದ ಆಡಿಟ್ ಪೊಅಲಿತಾಂಶವು ಈ ಕುರಿತಂತೆ ಬೆಳಕು ಚೆಲ್ಲಿದೆ. 
ಏಪ್ರಿಲ್ 30, 2016 ರಂದು ಪೂರ್ವ ಪಶ್ಚಿಮ ರೈಲು ಸೇವೆ  ಅಂಡರ್ಗ್ರೌಂಡ್ ಕಾರಿಡಾರ್ ಉದ್ಘಾಟನೆಯ ನಂತರ ಬಿಡುಗಡೆಯಾದ  ಮೊದಲ ಪೂರ್ಣ ಪ್ರಮಾಣದ ವಾರ್ಷಿಕ ಮೌಲ್ಯಮಾಪನ ಇದಾಗಿದೆ. 
"ಇದೊಂದು ಸಂತೋಷದಾಯಕ ಸುದ್ದಿ. 2015-2016ರ ಹಣಕಾಸು ವರ್ಷದಲ್ಲಿ 60.35 ಕೋಟಿ ರೂ.ಗಳ ನಷ್ಟದೊಂದಿಗೆ ಹೋಲಿಸಿದರೆ ಇದು ಕಳೆದ ಹಣಕಾಸು ವರ್ಷಕ್ಕಿಂತ (2014-2015) 82% ಸುಧಾರಣೆ ಕಂಡಿದೆ. 2016-2017 ರಲ್ಲಿ ಸುಮಾರು 28 ಕೋಟಿ ಆದಾಯ ಬಂದಿದೆ" ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಯಾಣಿಕರ ಸಂಖ್ಯೆ ಪ್ರತಿ ದಿನವೂ 1.6 ಲಕ್ಷ ದಷ್ಟಿದ್ದು . "ಸಂಪೂರ್ಣ ಹಂತ-ಜೂನ್ ಜೂನ್ 18 ರಿಂದ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭಿಸಿದೆ ಮತ್ತು ದಿನಕ್ಕೆ 3.2 ಲಕ್ಷಪ್ರಯಾಣಿಕರನ್ನು ತಲುಪುವ ಗುರಿ ಹೊಂದಲಾಗಿತ್ತು.  ಈ ಅವಧಿಅಯಲ್ಲಿ ನಿಗಮವು ಇಷ್ಟು ದಿನ ಅನುಭವಿಸುತ್ತಿದ್ದ ನಷ್ಟದ ಪರಿಮಾಣ ಸಾಕಷ್ಟು ತಗ್ಗಿರುವುದನ್ನು ನಾವು ಕಾಣಬಹುದಾಗಿದೆ" ಅವರು ತಿಳಿಸಿದರು. .
ಬಿಎಂಆರ್ ಸಿ ಎಲ್ ಒಂದು ನಿಲ್ದಾಣದಲ್ಲಿ ಕಂಡುಬರುವ ಜನಸಂದಣಿಯ ಆಧಾರದ ಮೇಲೆ  10% ಮತ್ತು 15% ರ ಶುಲ್ಕವನ್ನು ಹೆಚ್ಚಿಸುವ ಗುರಿ ಹೊಂದಿದೆ. 
ಮಾರ್ಚ್ 31, 2017 ರ ಫಲಿತಾಂಶಗಳ ಪ್ರಕಾರ, ಒಟ್ಟಾರೆ ಆದಾಯ 130 ಕೋಟಿ ರೂ. ಇದು ಮಾರ್ಚ್ 2016 ರ ಫಲಿತಾಂಶದ (44.97 ಕೋಟಿ ರೂ.) ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com