ನನ್ನನ್ನು ಅಪಹರಿಸಲಾಗಿತ್ತು: ಎಚ್.ವೈ ಮೇಟಿ ಸಿಡಿ ಹಗರಣದ ಸಂತ್ರಸ್ತೆಯಿಂದ ದೂರು

ಮಾಜಿ ಸಚಿವ ಎಚ್.ವೈ ಮೇಟಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಡಿ ಬಿಡುಗಡೆಯಾದ ಮೇಲೆ ಮೇಟಿ ರಾಜಿನಾಮೆ ನೀಡಿ, ತನಿಖೆ ಪೂರ್ಣಗೊಂಡು ಸಿಐಡಿ ...
ಎಚ್.ವೈ ಮೇಟಿ
ಎಚ್.ವೈ ಮೇಟಿ
ಬೆಂಗಳೂರು: ಮಾಜಿ ಸಚಿವ ಎಚ್.ವೈ ಮೇಟಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಡಿ ಬಿಡುಗಡೆಯಾದ ಮೇಲೆ ಮೇಟಿ ರಾಜಿನಾಮೆ ನೀಡಿ, ತನಿಖೆ ಪೂರ್ಣಗೊಂಡು ಸಿಐಡಿ ಕ್ಲೀನ್ ಚಿಟ್ ನೀಡುವವರೆಗೂ ನನ್ನನ್ನು ಅಪಹರಿಸಿ ಇಡಲಾಗಿತ್ತು ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ನನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ, ಆದರೆ ಜೀವ ಬೆದರಿಕೆಯಿದ್ದ ಕಾರಣ ನಾನು ದೂರು ನೀಡಿರಲಿಲ್ಲ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿದ ಮೇಲೆ ಜನವರಿ 30 ರಂದು ವಿತಾರಣೆಗೆ ಹಾಜರಾಗುವಂತೆ ನನಗೆ ಸಮನ್ಸ್ ನೀಡಲಾಗಿತ್ತು,  ಅದರ ಹಿಂದಿನ ರಾತ್ರಿ ಅಂದರೆ ಜನವರಿ 29ರಂದು ಮೇಟಿ ಅವರ ಕೆಲವು ಬೆಂಬಲಿಗರು ನನ್ನ ಬಳಿ ಬಂದು ಸಿಐಡಿ ಅಧಿಕಾರಿಗಳು ತಯಾರಿಸಿದ್ದ ಪ್ರಶ್ನಾವಳಿಗಳಿಗೆ ನನ್ನಿಂದ ಉತ್ತರ ಬರೆಸಿಕೊಂಡರು. ಮಾರನೇ ದಿನ ನಾನು ಸಿಐಡಿ ಕಚೇರಿಗೆ ಹಾಜರಾದಾಗ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಹಾಗೂ ಮೇಟಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳದೇ ವಾಪಸ್ ಕಳುಹಿಸಿದರು. ನಂತರ ಕೆಲವು ದಿನಗಳ ಮೇಲೆ ಮೇಟಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು ಎಂದು ಆಕೆ ಹೇಳಿದ್ದಾರೆ.
2016ರ ಡಿಸೆಂಬರ್ ನಲ್ಲಿ ಪ್ರಕರಣ ಬೆಳಕಿಗೆ ಬಂದ ಮೇಲೆ ನನ್ನನ್ನು ಅಪಹರಿಸಲಾಗಿತ್ತು, ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು. ಜೂನ್ ನಲ್ಲಿ ನನ್ನನ್ನು ರಿಲೀಸ್ ಮಾಡಲಾಯಿತು, ಇನ್ನೂ ನನಗೆ ಜೀವ ಬೆದರಿಕೆಯಿದೆ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com