ವಿಟಿಯು ಪರೀಕ್ಷಾ ನಿಯಮಾವಳಿಗಳ ವಿರುದ್ದ ವಿದ್ಯಾರ್ಥಿಗಳ ಪ್ರತಿಭಟನೆ

ರಾಜ್ಯದಾದ್ಯಂತದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 1,200 ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಶುಕ್ರವಾರ ರ್ಯಾಲಿ ನಡೆಸಿದರು
ವಿಟಿಯು ಪರೀಕ್ಷಾ ನಿಯಮಾವಳಿಗಳ ವಿರುದ್ದ ವಿದ್ಯಾರ್ತ್ಘಿಗಳ ಪ್ರತಿಭಟನೆ
ವಿಟಿಯು ಪರೀಕ್ಷಾ ನಿಯಮಾವಳಿಗಳ ವಿರುದ್ದ ವಿದ್ಯಾರ್ತ್ಘಿಗಳ ಪ್ರತಿಭಟನೆ
Updated on
ಬೆಂಗಳೂರು: ರಾಜ್ಯದಾದ್ಯಂತದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 1,200 ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಶುಕ್ರವಾರ ರ್ಯಾಲಿ ನಡೆಸಿದರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿ.ಟಿ.ಯು.)ಸಿಬಿಸಿಎಸ್ ಚಾಯ್ಸ್-ಬೇಸ್ಡ್ ಕ್ರೆಡಿಟ್ ಸಿಸ್ಟಮ್) ವಿದ್ಯಾರ್ಥಿಗಳಿಗೆ ಮತ್ತು ಎರಡು ವರ್ಷಗಳ ಹಿಂದಿನ ಪೂರಕ ಪರೀಕ್ಷಾ ನಿಯಮವನ್ನು ತೆಗೆದು ಹಾಕಬೇಕೆಂದು ಅವರು ಬೇಡಿಕೆ ಇಟ್ಟಿದ್ದರು. ಬೆಂಗಳೂರಿನಲ್ಲಿ ರ್ಯಾಲಿ ನಡೆಸಿದಂತೆಯೇ ರಾಜ್ಯದ ಇತರೆ 14 ಜಿಲ್ಲೆಗಳಲ್ಲಿಯೂ ವಿಟಿಯು ವಿರುದ್ದ ಏಕಕಾಲದಲಿ ರ್ಯಾಲಿ ನಡೆಸಲಾಯಿತು.
ಕೆ.ಆರ್.ಸರ್ಕಲ್ನಲ್ಲಿ ಯುನಿವರ್ಸಿಟಿ ವಿಶ್ವೇಶ್ವರಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ) ಯಲ್ಲಿ ಕೊನೆಗೊಂಡಿತು. ಇದನ್ನು ವಿ.ಟಿ.ಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಏಡ್ಸ್ ಸೊಸೈಟಿಯಿಂದ ಜಂಟಿಯಾಗಿ ಸಂಗಾತೀಶೀಡ್ಡಾಊ. 
"ಡಿಸೆಂಬರ್ 2016 ಪರೀಕ್ಷೆ ಫಲಿತಾಂಶಗಳ ಘೋಷಣೆ ಐದು ತಿಂಗಳ ಕಾಲ ವಿಳಂಬವಾಯಿತು. ಅನೇಕ ವಿದ್ಯಾರ್ಥಿಗಳ ಫಲಿತಾಂಶಗಳು ತಡೆಹಿಡಿಯಲ್ಪಟ್ಟವು. ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು, ಮರುಪರಿಶೀಲನೆ ಫಲಿತಾಂಶಗಳು ಮತ್ತು ತಡೆಹಿಡಿಯಲ್ಪಟ್ಟ ಫಲಿತಾಂಶಗಳನ್ನು ಘೋಷಿಸಲಾಯಿತು. ಫಲಿತಾಂಶಗಳ ಕುರಿತ ಅನಿಶ್ಚಿತತೆಯು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸುತ್ತದೆ "ಎಂದು ಪ್ರತಿಭಟನಾಕಾರರಲ್ಲಿ ಒಬ್ಬರು ಹೇಳಿದರು.
ರ್ಯಾಲಿಯ ನಂತರ, ಹಿರಿಯ ಲೇಖಕ ಪ್ರೊಫೆಸರ್ ಪಿ.ವಿ. ನಾರಾಯಣ ಅವರು, "ವಿದ್ಯಾರ್ಥಿಗಳು ತರಗತಿಗಳಿಗೆ ಹೋಗುವುದಕ್ಕಿಂತ ಬದಲಾಗಿ ಬೀದಿಗಳಲ್ಲಿದ್ದಾರೆ ಇದು ದುರದೃಷ್ಟಕರ, ವಿಶ್ವವಿದ್ಯಾನಿಲಯದ ಬೇಜವಾಬ್ದಾರಿಯಿಂದ ಈ ರೀತಿ ಅವ್ಯವಸ್ಥೆ ಉಂಟಾಗಿದೆ."ಎಂದರು. 
ಸುಮಾರು 50 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು, ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಮೂರು ತಿಂಗಳುಗಳಲ್ಲಿ 16 ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಿತ್ತು.  ಹೆಚ್ಚಿನ ಸೆಮಿಸ್ಟರ್ ಪರೀಕ್ಷೆಗಳ ಪುನಃ ಮೌಲ್ಯಮಾಪನ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ಮಾಡಿದ ವಿಳಂಬದ ಕಾರಣ. ಅನೇಕ ವಿದ್ಯಾರ್ಥಿಗಳು ಪೂರಕ ಮತ್ತು ಆಫ್-ಸೆಮಿಸ್ಟರ್ ಪರೀಕ್ಷೆಗಳನ್ನು ಒಟ್ಟಾಗಿ ಬರೆಯಬೇಕಾಗಿ ಬಂದಿತ್ತು.
ಎಂಜಿನಿಯರಿಂಗ್ ವಿದ್ಯಾರ್ಥಿಯಾದ ಸಾಹಿತ್ಯ ಹೇಳುವಂತೆ , "ವಿಟಿಯುಗೆ ಸಂಬಂಧಿಸಿರುವ ಕಾಲೇಜುಗಳಲ್ಲಿ ನಾವು ಪ್ರತಿ ದಿನ ಹೊಸ ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ವರ್ಷ, ತರಗತಿಗಳು ಆರಂಭಗೊಂಡವು ಆದರೆ ಕಾಲೇಜುಗಳು ಸಿಬಿಸಿಎಸ್ ವಿದ್ಯಾರ್ಥಿಗಳು ಮತ್ತು ಸಿಬಿಸಿಎಸ್ ಅಲ್ಲದ ವಿದ್ಯಾರ್ಥಿಗಳಿಗೆ ಸಮಾನ ವರ್ಗದಲ್ಲಿ ಪರೀಕ್ಷೆ  ನಡೆಸುತ್ತಿಲ್ಲ. ಅನೇಕ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಭಾಗವಾಗಿರದೆ ಇದ್ದರೂ ಸಹ ತರಗತಿಗಳಲ್ಲಿ ಕುಳಿತುಕೊಳ್ಳಲು ಹೇಳಲಾಗುತ್ತದೆ "ಇದೀಗ, ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಬರೆಯಲು ವಿಟಿಯು ನಲ್ಲಿ ಯಾವುದೇ ಆಯ್ಕೆಗಳಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com