ಪೇಜಾವರ ಶ್ರೀಗಳು ಕೆಎಂಸಿ ಗೆ ದಾಖಲು

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಇಂದು ಹರ್ನಿಯ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆ (ಕೆಎಂಸಿ) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು
ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು
Updated on
ಉಡುಪಿ:  ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಇಂದು ಹರ್ನಿಯ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆ (ಕೆಎಂಸಿ) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳ ಹಿಂದೆ ಸ್ವಾಮೀಜಿ ಅವರನ್ನು ಪರೀಕ್ಷಿಸಿದ್ದ ವೈದ್ಯರು ಹರ್ನಿಯಾ ಆಗಿರುವುದನ್ನು ತಿಳಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು.
ಇದುವರೆಗೆ ಆರೋಗ್ಯ ತಪಾಸಣೆಯನ್ನು ವೈದ್ಯರು ಮಠಕ್ಕೆ ಬಂದು ನಡೆಸುತ್ತಿದ್ದರು. ಸುಮಾರು ಒಂದು ವರ್ಷದಿಂದ  ಶ್ರೀಗಳಿಗೆ ಆರೋಗ್ಯದ ಸಮಸ್ಯೆ ಕಾಣುತ್ತಿತ್ತು. ಪೂಜಾ ಕೈಂಕರ್ಯಕ್ಕೆ ಅಡಚಣೆಯಾಗಲಿದೆ ಎಂಬ ಕಾರಣಕ್ಕೆ ಸ್ವಾಮೀಜಿ ಚಿಕಿತ್ಸೆಗೆ ತೆರಳಲು ಒಪ್ಪಿರಲಿಲ್ಲ. 
ಪರ್ಯಾಯ ಅವಧಿ ಮುಗಿಯುವವರೆಗೂ ಮುಂದೂಡುವ ಆಲೋಚನೆಯಲ್ಲಿದ್ದರು.ಆದರೆ ಸಮಸ್ಯೆ ಗಂಭೀರವಾದ ಕಾರಣದಿಂದ ನಿರ್ಲಕ್ಷಿಸುವುದು ಬೇಡ ಎಂದು ಇತರ ಮಠಾಧೀಶರೂ ಸಲಹೆ ಇತ್ತರು. ಹೀಗಾಗಿ ಸ್ವಾಮೀಜಿಗಳು ಹೆಚ್ಚುವರಿ ತಪಾಸಣೆ, ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಒಪ್ಪಿಕೊಂಡು ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಶ್ರೀಗಳು ವಾರದ ಕಾಲ ವಿಶ್ರಾತಿ ಪಡೆಯಲಿದ್ದ ಕಾರಣ ಮಠದಲ್ಲಿ ಪೂಜಾ ಕೈಂಕರ್ಯಗಳನ್ನು ಕಿರಿಯ ಶ್ರೀಗಳು ನೆರವೇರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com