ಬ್ರಾಂಡ್ ಬೆಂಗಳೂರಿನ ಲೋಗೋ ಮಾದರಿಯನ್ನು ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

ಪ್ರವಾಸೋದ್ಯಮ ಇಲಾಖೆ ಭಾನುವಾರ ಬ್ರ್ಯಾಂಡ್ ಬೆಂಗಳೂರಿನ "ನಮ್ಮ ಬೆಂಗಳೂರು ಹಬ್ಬ"ದ ಮೊದಲ ಆವೃತ್ತಿಯ ಲೋಗೋ ಮಾದರಿಯನ್ನು ಪ್ರದರ್ಶಿಸಿತು,
ಬ್ರಾಂಡ್ ಬೆಂಗಳೂರು ಮಾದರಿ ಲೋಗೋ
ಬ್ರಾಂಡ್ ಬೆಂಗಳೂರು ಮಾದರಿ ಲೋಗೋ
Updated on
ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಭಾನುವಾರ ಬ್ರ್ಯಾಂಡ್ ಬೆಂಗಳೂರಿನ "ನಮ್ಮ ಬೆಂಗಳೂರು ಹಬ್ಬ"ದ ಮೊದಲ ಆವೃತ್ತಿಯ ಲೋಗೋ ಮಾದರಿಯನ್ನು ಪ್ರದರ್ಶಿಸಿತು, ಜತೆಗೆ ಇದಕ್ಕೆ  ಜನರಿಂದ ಪ್ರತಿಕ್ರಿಯೆಗಳಾನ್ನು ಆಹ್ವಾನಿಸಿತು.
ಸ್ಯಾಂಕಿ ಕೆರೆಯ ಕೊಳದ ಬಳಿ ಲೋಗೋದ ಕಟ್ಔಟ್ ನ್ನು ಹಾಕಲಾಗಿತ್ತು, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಲೋಗೋನ ಮುಂದೆ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂತು.
ಕಲಾತ್ಮಕ ರೂಪದಲ್ಲಿ ಬರೆದ 'ಐ ಲವ್ ಬೆಂಗಳೂರು'ಎನ್ನುವ ಲೋಗೋ  ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಮೆಚ್ಚುಗೆಯಾಗಿದ್ದು ಇದೀಗ ಜನರಿಂದ ಪ್ರತಿಕ್ಲ್ರಿಯೆಗಳನ್ನು ಆಹ್ವಾನಿಸಲಾಗಿದೆ  ಈ ತಿಂಗಳ ಪ್ರಾರಂಭದಲ್ಲಿ ಇಲಾಖೆಯು ಆಯೋಜಿಸಿದ್ದ ಸ್ಪರ್ಧೆಯಲ್ಲಿ 1,700 ಅಭ್ಯರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಆಯ್ಕೆಯಾದ ಲೋಗೋ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಮಂಜುಳ ಎನ್ ಅವರ ಪ್ರಕಾರ, ಚಿತ್ರಕಲಾ ಪರಿಷತ್ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನ ಕಲಾಕಾರರಿಂದ ಅನುಮೋದನೆ ಪಡೆದ ನಂತರ ಲೋಗೊವನ್ನು ಪ್ರದರ್ಶನಕ್ಕಾಗಿ ಪರಿಗಣಿಸಲಾಗಿದೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಈ ಕುರಿತು ಕೇಳಲು ಅವರು ತಕ್ಷಣ  "ಏಕೆ ಆಗಬಾರದು?" ಎಂದು ಪ್ರತಿಕ್ರಯಿಸಿದ್ದರು.
"ಬೆಂಗಳೂರಿಗೆ 480 ವರ್ಷಗಳ ಇತಿಹಾಸವಿದೆ. ನಗರದಲ್ಲಿ ತಿಳಿದುಕೊಳ್ಳಲು ತುಂಬಾ ಇದೆ. ನಗರದ ಬಗ್ಗೆ ಮಾತನಾಡುತ್ತಿರುವುದಕ್ಕಿಂತ, ಅನ್ವೇಷಿಸಲು ಹೆಚ್ಚು ವಿಷಯಗಳಿವೆ. ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರಕ್ಕೆ  ಬಂದಾಗ ನಾವು  ದೇಶದಲ್ಲಿ ನಾಲ್ಕನೆಯ ಅತ್ಯುತ್ತಮ ಸ್ಥಾನ ಹೊಂದಿದ್ದೇವೆ."ಎಂದು ಅವರು ಹೇಳಿದರು.
ಬ್ರಾಂಡ್ ಬೆಂಗಳೂರು ನಗರವನ್ನು ಸೃಷ್ಟಿಸುವುದು ಉತ್ತಮ ಆದಾಯ ಮೂಲವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. "ನಾವು ವಿಮಾನ ನಿಲ್ದಾಣದಲ್ಲಿ ವರ್ಷಕ್ಕೆ 22.5 ದಶಲಕ್ಷ ಪ್ರವಾಸಿಗರನ್ನು ನೋಡುತ್ತಿದ್ದೇವೆ. ಅವರು ನಗರಕ್ಕೆ ಭೇಟಿ ನೀಡಿದಾಗ ಪ್ರತಿಯೊಬ್ಬರೂ ಕನಿಷ್ಠ 100 ಡಾಲರ್ ಖರ್ಚು ಮಾಡುತ್ತಾರೆ ಎಂಬ ಕಲ್ಪನೆಯಿದೆ "ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com