ಪರಪ್ಪನ ಅಗ್ರಹಾರದ ಎರಡೂ ಬದಿಗಳಲ್ಲಿ 120ರಿಂದ 150 ಅಡಿ ಉದ್ದದ ಕಾರಿಡಾರ್ ನಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಇದನ್ನು ಶಶಿಕಲಾ ಅವರು ಮಾತ್ರ ಖಾಸಗಿಯಾಗಿ ಬಳಸುತ್ತಿದ್ದಾರೆ. ಕಾರಿಡಾರ್ ನಲ್ಲಿರುವ 5 ಘಟಕಗಳು ಶಶಿಕಲಾ ಅವರಿಗೆ ಮಾತ್ರ ಮೀಸಲಾಗಿದೆ. ಈ ಘಟಕಗಳಲ್ಲಿ ಶಶಿಕಲಾ ತಮ್ಮ ಬಟ್ಟೆ, ಬೆಡ್ ಗಳು, ಬೆಡ್ ಶೀಟ್, ಅಡುಗೆ ಮಾಡಲು ಪಾತ್ರೆಗಳು, ನೀರಿನ ಡಿಸ್ಪೆನ್ಸರ್, ಎಲೆಕ್ಟ್ರಿಕ್ ಇಂಡಕ್ಷನ್ ಸ್ಟೌವ್, ಟೇಬಲ್ ಇತ್ಯಾದಿಗಳನ್ನು ಇರಿಸಲಾಗಿದೆ. ಈ ವಿವರಗಳನ್ನೊಳಗೊಂಡ ಪತ್ರವನ್ನು ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ್ದಾರೆ.