ಅಂಕಪಟ್ಟಿಯಲ್ಲಿ ಲೋಪದೋಷ: ಎಸ್ಎಸ್ ಎಲ್ ಸಿ ದಾಖಲೆಗಳಿಂದ ವಿವರ ಪಡೆಯಲಿರುವ ಪಿಯು ಇಲಾಖೆ

ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಲೋಪದೋಷಗಳನ್ನು ತಪ್ಪಿಸಲು ಈ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಲೋಪದೋಷಗಳನ್ನು ತಪ್ಪಿಸಲು ಈ ವರ್ಷದಿಂದ ಪದವಿಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ವಿವರಗಳನ್ನು ಎಸ್ಎಸ್ಎಲ್ ಸಿ ಅಂಕಪಟ್ಟಿಯಿಂದ ಪಡೆದುಕೊಳ್ಳಲಿದೆ. 
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ದಾಖಲೆಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಾರ, ಇದು ದೋಷರಹಿತ ಅಂಕಪಟ್ಟಿಗಳನ್ನು ತಯಾರಿಸುವ ಕ್ರಮವಾಗಿದೆ. ಈ ವರ್ಷ ಶಿಕ್ಷಣ ಇಲಾಖೆ ದೋಷರಹಿತ ಅಂಕಪಟ್ಟಿಗಳ ಬಗ್ಗೆ ವಿದ್ಯಾರ್ಥಿಗಳಿಂದ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ. 
ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಹೆಸರಿನಲ್ಲಿ ಹಲವು ತಪ್ಪುಗಳಾಗುತ್ತವೆ. ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ವಿವರ ಅಪ್ ಲೋಡ್ ಮಾಡಲಾಗುತ್ತದೆ.ವಿದ್ಯಾರ್ಥಿಗಳ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ ಇರುವಂತೆ ಮತ್ತು ಶಾಲೆಯ ಪ್ರಾಂಶುಪಾಲರ ಬಳಿ ಇರುವ ವಿವರಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಏನಾದರೂ ಬದಲಾವಣೆ, ತಪ್ಪುಗಳಿದ್ದಲ್ಲಿ ಈ ಹಂತದಲ್ಲಿಯೇ ತಿದ್ದಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಿದ ನಂತರ ಬಂದರೆ ನಾವು ತಿದ್ದುಪಡಿಯನ್ನು ಮಾಡುವುದಿಲ್ಲ. ಈ ವರ್ಷ ದ್ವಿತೀಯ ಪಿಯುಸಿ ಅಂಕಪಟ್ಟ ವಿತರಿಸಿದ ನಂತರ ಅದರಲ್ಲಿ ಲೋಪದೋಷಗಳಿರುವ ಹಲವು ದೂರುಗಳು ಬಂದಿದ್ದವು. ಈ ತಪ್ಪುಗಳು ಪ್ರಥಮ ಪಿಯುಸಿ ಪ್ರವೇಶ ಸಂದರ್ಭದಲ್ಲಿಯೇ ಆಗಿದೆ. ಹೀಗಾಗಿ ಎಸ್ಎಸ್ಎಲ್ ಸಿ ಅಂಕಪಟ್ಟಿಗೆ ಹೋಲಿಸಿ ತಪ್ಪುಗಳನ್ನು ಸರಿಪಡಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com