ರಾಜೀನಾಮೆ ನೀಡಿದ ಬಳಿಕ ರಮೇಶ್ ‘ಆಗಸ್ಟ್ 15ರಂದು ಮಡಿಕೇರಿ ಹಳೆಯ ಕೋಟೆ ಆವರಣದ ಸ್ವಾತಂತ್ರ್ಯ ದಿನಾಚರಣೆ ವೇದಿಕೆಯಲ್ಲಿ ನಡೆದ ಘಟನೆಯ ಸತ್ಯಾಂಶದ ವರದಿಯನ್ನೂ ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ. 40 ವರ್ಷದ ರಾಜಕೀಯ ಜೀವನದಲ್ಲಿ ಸಹೋದರಿಯ ಯೋಗಕ್ಷೇಮ ವಿಚಾರಿಸಿದ್ದು ಪಕ್ಷದ ದೃಷ್ಟಿಯಲ್ಲಿ ತಪ್ಪೆಂದರೆ ನನ್ನಂತಹ ಹಿರಿಯರು ಬದುಕುವುದು ಕಷ್ಟಕರ' ಎಂದು ದಿನೇಶ್ ಗುಂಡೂರಾವ್ ಅವರಿಗೆ ಬರೆದ ಪತ್ರದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.