ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಅವರ ಯೋಜನೆಯಂತೆ ಬನ್ನಂಜೆಯಿಂದ 9 ಕಿಲೋ ಮೀಟರ್ ದೂರದಲ್ಲಿರುವ ಆಲದ ಮರದ ಬುಡವನ್ನು ಕ್ರೇನ್ ಸಹಾಯದಿಂದ ಎತ್ತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೆಡಲಾಗಿದೆ. ಉಡುಪಿ ಅರಣ್ಯಾಧಿಕಾರಿ ಕ್ಲಿಫೊರ್ಡ್ ಲೊಬೊ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಮರದ ಸಾಗಾಟಕ್ಕೆ ಅನುವು ಮಾಡಿಕೊಡಲು ಅದನ್ನು ಅಲ್ಲಲ್ಲಿ ಕತ್ತರಿಸಲಾಯಿತು.