ಇಂದಿರಾ ಕ್ಯಾಂಟೀನ್ ಹಿಂದಿಕ್ಕಿದ ಅಪ್ಪಾಜಿ ಕ್ಯಾಂಟೀನ್: ರೇಟೂ, ಟೇಸ್ಟೂ ಎರಡೂ ಬೆಸ್ಟ್!

ನಗರದ ಎಲ್ಲಾ ಪ್ರದೇಶಗಳಲ್ಲಿ ಈಗ ಇಂದಿರಾ ಕ್ಯಾಂಟೀನ್ ನದ್ದೇ ಹವಾ, ಆದರೆ ಹನುಮಂತನಗರದಲ್ಲಿ ಪರಿಸ್ಥಿತಿ ತೀರಾ ವಿಭಿನ್ನ...
ಅಪ್ಪಾಜಿ ಕ್ಯಾಂಟೀನ್
ಅಪ್ಪಾಜಿ ಕ್ಯಾಂಟೀನ್
ಬೆಂಗಳೂರು: ನಗರದ ಎಲ್ಲಾ ಪ್ರದೇಶಗಳಲ್ಲಿ ಈಗ ಇಂದಿರಾ ಕ್ಯಾಂಟೀನ್ ನದ್ದೇ ಹವಾ, ಆದರೆ ಹನುಮಂತನಗರದಲ್ಲಿ ಪರಿಸ್ಥಿತಿ ತೀರಾ ವಿಭಿನ್ನ. ಜೆಡಿಎಸ್ ಮುಖಂಡ ಶರವಣ ಸ್ಥಾಪಿಸಿರುವ ದೇವೇಗೌಡರ ಹೆಸರಿನ ಅಪ್ಪಾಜಿ ಕ್ಯಾಂಟೀನ್ ಹೆಚ್ಚು ಫೇಮಸ್ ಆಗಿದೆ.
ಪ್ರತಿದಿನ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಕಡಿಮೆ ಬೆಲೆಗೆ ಪ್ರತಿದಿನ 1ಸಾವಿರ ಮುಂದಿ ಊಟ ತಿಂಡಿ ಸೇವಿಸುತ್ತಿದ್ದಾರೆ. ಸಿಟಿ ಎಕ್ಸ್ ಪ್ರೆಸ್ ಹನುಮಂತನಗರ ವಾರ್ಡ್ ನಲ್ಲಿರುವ ಎರಡು ಕ್ಯಾಂಟೀನ್ ಗಳಿಗೆ ಭೇಟಿ ನೀಡಿತ್ತು,  ಹೆಚ್ಚಿನ ಜನ ಅಪ್ಪಾಜಿ ಕ್ಯಾಂಟೀನ್ ಮುದ್ದೆ ಊಟದ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಣ್ಣ ಕ್ಯೂ ಹೊರತು ಪಡಿಸಿದರೇ ಇಲ್ಲಿ ನೀಡುವ ಆಹಾರ ಕ್ವಾಲಿಟಿ ಮತ್ತು ಆರೋಗ್ಯಕರವಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ಆಹಾರ ನೀಡುವುದರಿಂದ ಹೆಚ್ಚಿನ ಜನರು ಅಪ್ಪಾಜಿ ಕ್ಯಾಂಟೀನ್ ನೆಡೆ ಆಕರ್ಷಿತರಾಗುತ್ತಿದ್ದಾರೆ. ರಾಗಿ ಮುದ್ದೆ ಮತ್ತು ತಟ್ಟೆ ಇಡ್ಲಿ  ಅಪ್ಪಾಜಿ ಕ್ಯಾಂಟೀನ್ ನಲ್ಲಿ ಫೇಮಸ್. 
ಕಡಿಮೆ ಖರ್ಚಿನಲ್ಲಿ ತಿನ್ನುವವರು ಹಾಗೂ ರುಚಿಗೆ ಹೆಚ್ಚು ಮಹತ್ವ ಕೊಡದ ಕಚೇರಿಗೆ ತೆರಳುವವರು, ಶಾಲಾ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಬೆಸ್ಟ್.
ಆದರೆ ಇಲ್ಲಿ ಪಾರ್ಸೆಲ್ ಸರ್ವೀಸ್ ಮಾತ್ರ ಇಲ್ಲ, ಮೊದಲು ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವವರು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದರು. ಅವರಿಗಾಗಿನಾವು ಪಾರ್ಸೆಲ್ ನೀಡುತ್ತಿದ್ದೆವು, ಆದರೆ ಈಗ ಒಂದಕ್ಕಿಂತ ಹೆಚ್ಚನ ಪಾರ್ಸೆಲ್ ನೀಡುವುದಿಲ್ಲ ಎಂದು ಹನುಮಂತ ನಗರದ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ನಾಗೇಶ್ ಹೇಳುತ್ತಾರೆ. 
ಆದರೆ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಈ ಮೊದಲು ಪಾರ್ಸೆಲ್ ನೀಡಲಾಗುತ್ತಿತ್ತು. ಕೆಲವರು 10 -15 ತಟ್ಟೆ ಇಡ್ಲಿ ಮತ್ತು 10 ಪ್ಲೇಟ್ ರೈಸ್ ಬಾತ್ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದಾಗಿ, ಕೇವಲ 20 ನಿಮಿಷಗಳಲ್ಲಿ ತಿಂಡಿ ಖಾಲಿಯಾಗುತ್ತಿತ್ತು, ನಂತರ ಬಂದ ಹಲವರು ಖಾಲಿ ಹೊಟ್ಟೆಯಲ್ಲಿ ಹಿಂದಿರುಗತ್ತಿದ್ದರು. ಹೀಗಾಗಿ ಪಾರ್ಸೆಲ್ ಸೇವೆ ಸ್ಥಗಿತಗೊಳಿಸಿದೆವು ಎಂದು ಅಪ್ಪಾಜಿ ಕ್ಯಾಂಟೀನ್ ಸಿಬ್ಬಂದಿ ವೆಂಕಟೇಶ್ ಹೇಳುತ್ತಾರೆ. 
ಇನ್ನೂ ಅಪ್ಪಾಜಿ ಕ್ಯಾಂಟೀನ್ ಆರಂಭವಾದ ಮೇಲೆ ಸ್ಥಳೀಯ ದರ್ಶಿನಿಗಳಲ್ಲಿ ಬ್ಯುಸಿನೆಸ್ ಕಡಿಮೆಯಾಗಿದೆ, ಶೇ.30-40 ರಷ್ಟು ವ್ಯವಹಾರ ಕುಸಿದಿದೆ ಎಂದು ಸ್ಥಳೀಯ ಹೊಟೇಲ್ ನಲ್ಲಿ ಕೆಲಸ ಮಾಡುವ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ, 
ಕಳೆದ ಒಂದು ತಿಂಗಳಿಂದ ಅಂದರೆ ಇಂದಿರಾ ಕ್ಯಾಂಟೀನ್ ಆರಂಭವಾಗುವ ಮುನ್ನ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿದ್ದಕ್ಕೆ ಕೆಲವರು  ಇದನ್ನು ರಾಜಕೀಯ ಲಾಭಕ್ಕಾಗಿ ತೆರೆಯಲಾಗಿದೆ ಎಂದು ಆರೋಪಿಸಿದ್ದರು. ಮೆನು ಮತ್ತು ದರ ನಿಗದಿಯ ಬಗ್ಗೆ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಜನಕ್ಕೆ ಬೇಕಾಗಿರುವುದು ಊಟ, ಅದೂ ಕಡಿಮೆ ಬೆಲೆಗೆ ಹೆಚ್ಚಿನ ಊಟ ರಾಜಕೀಯ ಮೈಲೇಜ್ ಅವರಿಗೆ ಅವಶ್ಯಕತೆಯಿಲ್ಲ,
ಬೆಳಗ್ಗೆ  7 ಗಂಟೆಗೆ ಅಪ್ಪಾಜಿ ಕ್ಯಾಂಟೀನ್ ಮುಂದೆ ಜನ ಸಾಲುಗಟ್ಟಿ ನಿಂತಿರುತ್ತಾರೆ, ನಂತರ 7.30 ಕ್ಕೆ ಕ್ಯಾಂಟೀನ್ ಆರಂಭವಾಗುತ್ತದೆ. ಶ್ರೀನಗರದ 50 ಅಡಿ ರಸ್ತೆಯಲ್ಲಿ ಪ್ರಮುಖವಾಗಿ ಆಟೋ ಡ್ರೈವರ್, ಸೇಲ್ಸ್ ಎಕ್ಸಿ ಕ್ಯೂಟಿವ್ಸ ಮತ್ತು ದಿನಗೂಲಿ ನೌಕರರು, ಸಾಲುಗಟ್ಟಿ ನಿಂತಿರುತ್ತಾರೆ. ಇದರಿಂದ ಕೆಲವೊಮ್ಮ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ,  ಬೆಳಗ್ಗೆ 7.30 ರಿಂದ 9 ಗಂಟೆವರೆಗೆ ಉಪಹಾರ, ಮಧ್ಯಾಹ್ನ 1ರಿಂದ ಮೂರುಗಂಟೆ ವರೆಗೆ ಊಟ ಇರುತ್ತದೆ, ಇಲ್ಲಿನ ಆಹಾರ ಗುಣಮಟ್ಟ ಚೆನ್ನಾಗಿರುತ್ತದೆ. ಹೀಗಾಗಿ ಕಾಯುವುದರಿಂದ ಯಾವುದೇ  ಸಮಸ್ಯೆಯಿಲ್ಲ ಎಂದು ಆಟೋ ಚಾಲಕ ರಾಜೇಶ್ ಅಭಿಪ್ರಾಯ.
ಇಂದಿರಾ ಕ್ಯಾಂಟೀನ್ ನಲ್ಲಿ ಅತಿ ಕಡಿಮೆ ಬೆಲೆಗೆ ಆಹಾರ ಸಿಗುವುದರಿಂಗ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಇಂದಿರಾ ಕ್ಯಾಂಟೀನ್ ಹೆಚ್ಚು ಪ್ರಿಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com