ಬೆಂಗಳೂರು: ಅರ್ಕಾವತಿ ಲೇ ಔಟ್ ನಲ್ಲಿ ಕೊನೆಗೂ 154 ಮಂದಿಗೆ ನಿವೇಶನ ಹಂಚಿಕೆ

ನಿವೇಶನ ಡಿನೋಟಿಫಿಕೇಶನ್ ಹಿನ್ನಲೆಯಲ್ಲಿ ಹಲವು ವರ್ಷಗಳವರೆಗೆ ಹೋರಾಟ ನಡೆಸಿದ್ದ ಅರ್ಕಾವತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅರ್ಕಾವತಿ ಲೇ ಔಟ್ ನಿವೇಶನ ಡಿನೋಟಿಫಿಕೇಶನ್ ಹಿನ್ನಲೆಯಲ್ಲಿ ಹಲವು ವರ್ಷಗಳವರೆಗೆ ಹೋರಾಟ ನಡೆಸಿದ್ದ ನಾಗರಿಕರಿಗೆ ಕೊನೆಗೂ ಸಮಾಧಾನದ ಸುದ್ದಿ ಸಿಕ್ಕಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊನ್ನೆ ಸೋಮವಾರ ಅರ್ಕಾವತಿ ಲೇ ಔಟ್ ನಲ್ಲಿ ನೋಂದಣಿ ಮಾಡಿಕೊಂಡಿದ್ದ ನಾಗರಿಕರಿಗೆ 154 ನಿವೇಶನಗಳನ್ನು ಹಂಚಿಕೆ ಮಾಡಲು ಒಪ್ಪಿಗೆ ನೀಡಿದೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಡಿಎ ಕಾರ್ಯದರ್ಶಿ ಬಸವರಾಜು, ಈ ಹಿಂದೆ ನಿವೇಶನಗಳನ್ನು ಕಳೆದುಕೊಂಡಿದ್ದ 154 ಮಂದಿಗೆ ಬದಲಿ ನಿವೇಶನಗಳನ್ನು ನೀಡಲಾಗುತ್ತಿದೆ. ನೋಂದಣಿಯಲ್ಲಿ ಹಿರಿತನವನ್ನು ನೋಡಿಕೊಂಡು ನಿವೇಶನಗಳನ್ನು ನೀಡಲಾಗುವುದು. ಈ ಹಿಂದೆ ನಿವೇಶನಗಳನ್ನು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಬಿಡಿಎ ಕೇಂದ್ರ ಕಚೇರಿಯಲ್ಲಿ ನಿವೇಶನ ನೋಂದಣಿ ಮಾಡಿಕೊಂಡವರಿಗೆ ಕಾರ್ಯದರ್ಶಿಗಳು ನಿನ್ನೆ ಆಶ್ವಾಸನೆ ನೀಡಿದ್ದಾರೆ ಎಂದು ಅರ್ಕಾವತಿ ಲೇ ಔಟ್ ನಿವೇಶನ ಹಂಚಿಕೆ ಹರಾಜು ವೇದಿಕೆಯ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
ಅರ್ಕಾವತಿ ಲೇ ಔಟ್ ದಾಸರಹಳ್ಳಿ, ಥಣಿಸಂದ್ರ, ಕೆ.ನಾರಾಯಣಪುರ, ಚಳ್ಳೆಕೆರೆ, ಬೈರತಿಖಾನ, ಗೆಡಲಹಳ್ಳಿ ಮತ್ತು ಪ್ರಚೇನಹಳ್ಳಿ, ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಸಂಪಿಗೆಹಳ್ಳಿ, ಶ್ರೀರಾಮ್ ಪುರ, ವೆಂಕಟೇಶಪುರ, ಹೆಣ್ಣೂರು, ಹೆಬ್ಬಾಳ ಮತ್ತು ನಾಗಾವರ, ಯಲಹಂಕ ಗ್ರಾಮಗಳಲ್ಲಿ ವಿತರಣೆಯಾಗಿದೆ. 2012ರಲ್ಲಿ ರಾಜ್ಯ ಸರ್ಕಾರ ಡಿನೋಟಿಫಿಕೇಶನ್ ಸರಣಿ ಆದೇಶ ಹೊರಡಿಸಿದ್ದರಿಂದ ಸುಮಾರು 3,500 ಮಂದಿ ನಿವೇಶನಗಳನ್ನು ಕಳೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com