ಮೈಸೂರಿನಲ್ಲಿ ಬಿ.ಇ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ: ಸ್ಟೇರಿಂಗ್ ತಿರುಗಿಸಿ ಕಾರು ನಿಲ್ಲಿಸಿದ ದಿಟ್ಟೆ !

ಸ್ಕಾರ್ಪಿಯೋ ಕಾರಿನಲ್ಲಿ ಬಂದ ವ್ಯಕ್ತಿಗಳಿಬ್ಬರು ಎಂಜನೀಯರಿಂಗ್ ವಿದ್ಯಾರ್ಥಿ ಅಪಹರಣಕ್ಕೆ ಯತ್ನಿಸಿ ವಿಫಲರಾಗಿದ್ದಾರೆ....
ವಿದ್ಯಾರ್ಥಿನಿ ರಮ್ಯಾ
ವಿದ್ಯಾರ್ಥಿನಿ ರಮ್ಯಾ
ಮೈಸೂರು: ಸ್ಕಾರ್ಪಿಯೋ ಕಾರಿನಲ್ಲಿ ಬಂದ ವ್ಯಕ್ತಿಗಳಿಬ್ಬರು ಎಂಜನೀಯರಿಂಗ್ ವಿದ್ಯಾರ್ಥಿ ಅಪಹರಣಕ್ಕೆ ಯತ್ನಿಸಿ ವಿಫಲರಾಗಿದ್ದಾರೆ.
ದೂರವಾಣಿ ಕರೆ ಮಾಡಿ ಚಿಕ್ಕಪ್ಪನಂತೆ ನಟಿಸಿದ ವ್ಯಕ್ತಿಯೊಬ್ಬ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ರಮ್ಯಾ (22) ಎಂಬುವರನ್ನು ನಂಜನಗೂಡಿಗೆ ಕರೆಸಿಕೊಂಡು ಅಪಹರಣಕ್ಕೆ ಯತ್ನಿಸಿದ್ದಾನೆ. 
ಮಂಡ್ಯ ಮೂಲದ ರಮ್ಯಾ ಚಾಮರಾಜನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 
ರಮ್ಯಾ ಚಿಕ್ಕಪ್ಪ ಸತೀಶ್ ಎಂಬುವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರೆ ಮಾಡಿದ ವ್ಯಕ್ತಿ ಚಿಕ್ಕಪ್ಪನಂತೆ ಪರಿಚಯ ಮಾಡಿಕೊಂಡು ತನ್ನನ್ನು ಭೇಟಿ ಮಾಡುವಂತೆ ಹೇಳಿದ್ದಾನೆ.
ಕಾರು ಹುಲ್ಲಹಳ್ಲಿ ಸರ್ಕಲ್ ಕಡೆಗೆ ತೆರಳದೇ ಮಹಾತ್ಮ ಗಾಂಧಿ ರಸ್ತೆಯ ಮೂಲಕ ಗುಂಡ್ಲುಪೇಟೆ ಕಡೆಗೆ ಸಾಗಿದೆ. ಮಾರ್ಗ ಮಧ್ಯದಲ್ಲಿ ಇಳಿದ ಮಹಿಳೆ ಆನಂತರ ಭೇಟಿಯಾಗುವುದಾಗಿ ಹೇಳಿ ಹೋಗಿದ್ದಾಳೆ. ಈ ವೇಳೆ ಚಾಲಕ ವೇಗವಾಗಿ ಮುಂದಕ್ಕೆ ಸಾಗಿದ್ದಾನೆ. ಅನುಮಾನಗೊಂಡ ರಮ್ಯಾ ಚಾಲಕನನ್ನು ಪ್ರಶ್ನಿಸಿದ್ದಾರೆ. ಆಗ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಡೋರ್‌ ಲಾಕ್‌ ಮಾಡಿದ್ದಾನೆ. ಪೊಲೀಸ್‌ ಕ್ವಾಟ್ರಸ್‌ ಬಳಿ  ರಮ್ಯಾ ಸ್ಟೇರಿಂಗ್‌ ಹಿಡಿದು ಎಡಕ್ಕೆ ತಿರುಗಿಸಿದ್ದಾರೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಾದಚಾರಿ ಮಾರ್ಗ ದಾಟಿ ಪೊದೆಯಲ್ಲಿ ನಿಂತಿದೆ. ಗಾಬರಿಗೊಂಡ ಚಾಲಕ ಪರಾರಿಯಾಗಿದ್ದಾನೆ. 
ಕಾರನ್ನು ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಸ್ ಐ ರವಿ, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದು, ಪ್ರಕರಣದಲ್ಲಿ ಯುವತಿಯ ಚಿಕ್ಕಪ್ಪನ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com