ಬೆಂಗಳೂರು: 7,800 ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ಮುಂದಾಗಿರುವ ಬಿಡಿಎ

ಆನ್ ಲೈನ್ ಹರಾಜಿಗೆ ಜನರಿಂದ ನೀರಸ ಪ್ರತಿಕ್ರಿಯೆ ಬಂದಿದ್ದರಿಂದ 7,800 ಮೂಲೆ ನಿವೇಶನಗಳನ್ನು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆನ್ ಲೈನ್ ಹರಾಜಿಗೆ ಜನರಿಂದ ನೀರಸ ಪ್ರತಿಕ್ರಿಯೆ ಬಂದಿದ್ದರಿಂದ 7,800 ಮೂಲೆ ನಿವೇಶನಗಳನ್ನು(corner site) ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಅಲ್ಲದೆ ವಾಣಿಜ್ಯ ಸಂಸ್ಥೆಗಳಿಗೆ ಬಾಡಿಗೆಗೆ ನೀಡಲು ಕೂಡ ಬಿಡಿಎ ಯೋಚಿಸುತ್ತಿದೆ. 
ಬಿಡಿಎ ಇ-ಹರಾಜು ವಿಧಾನವನ್ನು ಕಳೆದ ದಶಕದಿಂದ ನೀಡುತ್ತಾ ಬಂದಿದೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಡಿಎ ಕಾರ್ಯದರ್ಶಿ ಬಸವರಾಜು, ಬಹಿರಂಗ ಹರಾಜು ಪ್ರಕ್ರಿಯೆಗೆ ಅನುಮತಿ ನೀಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನೋಟುಗಳ ಅಮಾನ್ಯತೆ ನಂತರ ಮೂಲೆ ನಿವೇಶನಗಳ ಮಾರಾಟದಲ್ಲಿ ಕುಂಠಿತವಾಗಿದೆ. ಅದಕ್ಕೂ ಮುಂಚೆ ಮೂಲೆ ನಿವೇಶನಗಳಿಗೆ ಭಾರೀ ಬೇಡಿಕೆಯಿತ್ತು ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತಲುಪಲು ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮಾಡಲಾಗುತ್ತಿದ್ದು,ನಿವೇಶನಗಳು ಹೆಚ್ಚು ಮಾರಾಟವಾಗುವ ವಿಶ್ವಾಸವಿದೆ. ಸಾಮಾನ್ಯವಾಗಿ ಬಿಡಿಎ ನಿವೇಶನಗಳನ್ನು ಬಹಿರಂಗ ಲಾಟರಿ ವಿಧಾನದ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ ಮೂಲೆ ನಿವೇಶನಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಅದನ್ನು ಬಹಿರಂಗ ಹರಾಜು ಮಾಡಲಾಗುತ್ತಿರಲಿಲ್ಲ. ಆನ್ ಲೈನ್ ಮೂಲಕ ಹರಾಜು ಹಾಕಲಾಗುತ್ತಿತ್ತು. ಆದರೆ ಈ ವರ್ಷ ಜನರಿಂದ ಅದಕ್ಕೆ ಪ್ರತಿಕ್ರಿಯೆ ಕಡಿಮೆಯಾಗಿದೆ. ಹೀಗಾಗಿ ಬಹಿರಂಗ ಹರಾಜಿಗೆ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.
ಇಂತಹ ಮೂಲೆ ನಿವೇಶನಗಳು ಕೆಂಗೇರಿ, ಬನಶಂಕರಿ, ಜ್ಞಾನಭಾರತಿ, ವಿಶ್ವಭಾರತಿ, ಅಂಜನಾಪುರ, ಹೆಚ್ ಬಿಆರ್ ಲೇ ಔಟ್, ಒಎಂಬಿಆರ್ ಲೇ ಔಟ್ ಮೊದಲಾದ ಕಡೆಗಳಲ್ಲಿ ಇವೆ. ಉತ್ತಮ ಗಾಳಿ, ಬೆಳಕು ಮತ್ತು ರಸ್ತೆಗೆ ಹತ್ತಿರವಿರುವುದರಿಂದ ಇತರ ಬಿಡಿಎ ನಿವೇಶನಗಳಿಗಿಂತ ಶೇಕಡಾ 20ರಷ್ಟು ಹೆಚ್ಚು ಬೆಲೆಯಿರುತ್ತದೆ. 
ಪ್ರತಿ 15 ದಿನಗಳಿಗೊಮ್ಮೆ 40ರಿಂದ 50 ಮೂಲೆ ನಿವೇಶನಗಳ ಇ-ಹರಾಜಿನ ಬಗ್ಗೆ ಜಾಹಿರಾತು ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com