ಖಾಲಿಯಿರುವ 757 ವೈದ್ಯಕೀಯ ಸೀಟುಗಳು: ಮಾಪ್-ಅಪ್ ಸುತ್ತಿಗೆ ಕೆಇಎ ನಿರ್ಧಾರ

ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ನೂರಾರು ವೈದ್ಯಕೀಯ ಪದವಿ ಸೀಟುಗಳು ಖಾಲಿ ಉಳಿದಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ನೂರಾರು ವೈದ್ಯಕೀಯ ಪದವಿ ಸೀಟುಗಳು ಖಾಲಿ ಉಳಿದಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಕಿಅಂಶ ಪ್ರಕಾರ, ಈ ವರ್ಷ 757 ವೈದ್ಯಕೀಯ ಸೀಟುಗಳು ಖಾಲಿ ಉಳಿದಿವೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ವೈದ್ಯಕೀಯ ಸೀಟುಗಳು ಖಾಲಿ ಉಳಿದಿರಲಿಲ್ಲ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ.
ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ ತಡವಾಗಿದ್ದು ಇದಕ್ಕೆ ಕಾರಣ ಎಂದು ವೈದ್ಯಕೀಯ ವಲಯದ ಅಧಿಕಾರಿಗಳು ಮತ್ತು ತಜ್ಞರು ವಿಶ್ಲೇಷಿಸಿದ್ದಾರೆ.
ಈ ವರ್ಷ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಣೆ ಒಂದು ತಿಂಗಳು ತಡವಾದದ್ದರಿಂದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಅಥವಾ ಬೇರೆ ಕೋರ್ಸ್ ಗಳಿಗೆ ಸೇರಬೇಕಾದ ಅನಿವಾರ್ಯತೆಯುಂಟಾಯಿತು ಎಂದು ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳುತ್ತಾರೆ.
ಈ ಮಧ್ಯೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಪ್-ಅಪ್ ಸುತ್ತಿನಲ್ಲಿ ಖಾಲಿ ಉಳಿದಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ.ನೀಟ್ ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆಯ 2ನೇ ಕೊನೆ ಸುತ್ತು ಮಾಪ್ ಅಪ್ ಸುತ್ತು ಆಗಿದೆ. ಅಲ್ಲಿ ಕೂಡ ಸೀಟುಗಳನ್ನು ಯಾರೂ ಸ್ವೀಕರಿಸದಿದ್ದರೆ ಖಾಲಿಯಿರುವ ಸೀಟುಗಳನ್ನು ಮ್ಯಾನೇಜ್ ಮೆಂಟ್ ಸೀಟುಗಳಾಗಿ ಬದಲಾಯಿಸಲಾಗುತ್ತದೆ.
ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಕೂಡ ಒಟ್ಟು ಲಭ್ಯವಿರುವ 62,000 ಸೀಟುಗಳ ಪೈಕಿ 19,000 ಖಾಲಿಯಿವೆ. ಕಾಮೆಡ್-ಕೆಯಲ್ಲಿ ಕೂಡ ಈ ವರ್ಷ ಒಟ್ಟು 15,500 ಸೀಟುಗಳ ಪೈಕಿ 10,000 ಎಂಜಿನಿಯರಿಂಗ್ ಸೀಟುಗಳು ಇವೆ. ತಜ್ಞರ ಪ್ರಕಾರ, ಬೇಡಿಕೆಗಿಂತ ಅಧಿಕ ಸೀಟುಗಳ ಲಭ್ಯತೆ ಮತ್ತು ಇತ್ತೀಚೆಗೆ ಕಂಪೆನಿಗಳಲ್ಲಿ ಕೆಲಸದ ಕೊರತೆಯೇ ಇಷ್ಟೊಂದು ಪ್ರಮಾಣದಲ್ಲಿ ಎಂಜಿನಿಯರಿಂಗ್ ಸೀಟುಗಳು ಖಾಲಿಯಾಗಿರಲು ಕಾರಣವೆನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com