ಚ್ಎಎಲ್ ನಿರ್ಮಿತ ಹಾಕ್-ಐ ಯುದ್ಧ ವಿಮಾನವನ್ನು ಪರಿಶೀಲಿಸಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ
ರಾಜ್ಯ
ದೇಸಿ ನಿರ್ಮಿತ ಯುದ್ಧ ವಿಮಾನ ಹಾಕ್-ಐ ಸೇನೆಗೆ ಸೇರ್ಪಡೆ
ಮೊಟ್ಟಮೊದಲ ದೇಶಿ ನಿರ್ಮಿತ ಅತ್ಯಾಧುನಿಕ ಹಾಕ್-ಐ ಪೈಲಟ್ ತರಬೇತಿ ಯುದ್ಧ ವಿಮಾನವನ್ನು ರಕ್ಷಣಾ...
ಬೆಂಗಳೂರು: ಮೊಟ್ಟಮೊದಲ ದೇಶಿ ನಿರ್ಮಿತ ಅತ್ಯಾಧುನಿಕ ಹಾಕ್-ಐ ಪೈಲಟ್ ತರಬೇತಿ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ನಿನ್ನೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ದೇಶಕ್ಕೆ ಸಮರ್ಪಿಸಿದರು.
ಇದು ಹಾಕ್-132 ಯುದ್ಧ ವಿಮಾನಗಳ ದೇಶೀಯ ಅವತರಣಿಕೆ. ಬ್ರಿಟನ್ ನಲ್ಲಿ ನಿರ್ಮಾಣಗೊಳ್ಳುವ ಹಾಕ್-132 ಯುದ್ಧ ವಿಮಾನಗಳನ್ನು ಭಾರತ ತಂತ್ರಜ್ಞಾನ ಹಸ್ತಾಂತರ ಒಪ್ಪಂದ ಮೂಲಕ ಖರೀದಿಗೆ ಮುಂದಾಗಿತ್ತು. ಮೊದಲ ಹಂತರ ವಿಮಾನಗಳನ್ನು ಬ್ರಿಟನ್ ನ ಬಿಎಇ ಸಿಸ್ಟಮ್ಸ್ ನಿಂದ ನೇರವಾಗಿ ಭಾರತ ಖರೀದಿ ಮಾಡಿತ್ತು.
ಎರಡನೇ ಹಂತದಲ್ಲಿ ಈ ಯುದ್ಧ ವಿಮಾನ ನಿರ್ಮಾಣದ ತಂತ್ರಜ್ಞಾನ ಹಾಗೂ ನೆರವನ್ನು ಪಡೆದುಕೊಂಡ ಎಚ್ಎಎಲ್ ಇದೀಗ ಸಂಪೂರ್ಣ ದೇಶೀಯವಾಗಿ ಹಾಕ್ ಯುದ್ಧ ವಿಮಾನವನ್ನು ನಿರ್ಮಾಣ ಮಾಡಿದೆ.
ಎಚ್ಎಎಲ್ ನಿರ್ಮಿತ ಹಾಕ್-ಐ ಯುದ್ಧ ವಿಮಾನವು ಹಾಕ್ ಯುದ್ಧ ವಿಮಾನ ಸರಣಿಯಲ್ಲೇ ಅತ್ಯಂತ ಸುಧಾರಿತ ವಿಮಾನವಾಗಿದೆ.ದೇಶದ ರಕ್ಷಣಾ ವ್ಯವಸ್ಥೆಗೆ ತರಬೇತಿ ವಿಮಾನಗಳಾಗಿ ಹಾಕ್-ಐ ಸೇರ್ಪಡೆಗೊಳ್ಳಲಿದೆ. ಇದರಲ್ಲಿ ಬಳಸಲಾಗಿರುವ ಯಂತ್ರಾಂಶ, ತಂತ್ರಾಂಶಗಳೆಲ್ಲವೂ ಸಂಪೂರ್ಣ ದೇಸಿಯವಾಗಿದೆ. ಯುದ್ಧದಲ್ಲಿ ಪಾಲ್ಗೊಳ್ಳುವ ಪೈಲಟ್ ಗಳ ತರಬೇತಿಗೆ ಬಳಸುವ ವಿಮಾನ ಇದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ