ಕಾಲುವೆಗೆ ಬಿದ್ದ ಆಟೋ: ಮೈಸೂರಿನಲ್ಲಿ ಮೂವರು ಮಕ್ಕಳ ಸಾವು

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ....
ಕಾಲುವೆಗೆ ಉರುಳಿ ಬಿದ್ದ ಆಟೋ
ಕಾಲುವೆಗೆ ಉರುಳಿ ಬಿದ್ದ ಆಟೋ
Updated on
ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಟಿ. ನರಸೀಪುರ ತಾಲೂಕಿನ ವಾಟಾಳ್ ಗ್ರಾಮದಲ್ಲಿ ನಡೆದಿದೆ.
ಗೂಡ್ಸ್ ಆಟೋದಲ್ಲಿ 15 ಮಂದಿಯನ್ನು ಕೂರಿಸಿಕೊಂಡು ಕರೆದೊಯ್ಯಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಆಟೋ ಕಬಿನಿ ಕಾಲುವೆಗೆ ಉರುಳಿಬಿದ್ದಿದೆ. ಪುಟ್ಟಿ(13). ಮಹದೇವ ಪ್ರಸಾದ್ (5) ಹಾಗೂ ಮತ್ತೊಬ್ಬ ಐದು ವರ್ಷದ ಬಾಲಕ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಚಾಮರಾಜನಗರದವರಾದ ಇವರೆಲ್ಲರು, ಟಿ. ನರಸಿಪುರದಲ್ಲಿರುವ ಕನ್ನಮ್ಮ ದೇವಿ  ದೇವಾಲಯಕ್ಕೆ ತೆರಳುತ್ತಿದ್ದರು.
ಗಾಯಗೊಂಡಿರುವ ಶೀಲಾಸ, ಮಹಾದೇವಮ್ಮ ಹಾಗೂ 2 ವರ್ಷದ ಬಾಲಕನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಗ್ರಾಮಸ್ಥರು ಮಕ್ಕಳ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಟಿ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com