ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ಹಸಿರು ನಿಶಾನೆ

ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಕಾಲುವೆ....
ಭದ್ರಾ ಜಲಾಶಯ
ಭದ್ರಾ ಜಲಾಶಯ
ಬೆಂಗಳೂರು: ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿಸಿದೆ.
ಆದರೂ ಕೂಡ, ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಮತ್ತು ರಾಷ್ಟ್ರೀಯ ವನ್ಯಮೃಗ ಮಂಡಳಿಯ ಸದಸ್ಯ ಪ್ರೊ,ಆರ್. ಸುಕುಮಾರ್ ಅವರ ಸಲಹೆಯಂತೆ ಹಲವು ಉಪಶಮನ ಕ್ರಮಗಳನ್ನು ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ಶಿಫಾರಸು ಮಾಡಿದೆ.
ಸಾಂಪ್ರದಾಯಿಕ ಮುಕ್ತ ಕಾಲುವೆ ವ್ಯವಸ್ಥೆಯ ಜಾಗದಲ್ಲಿ ನೆಲದ್ವಾರದ ಪೈಪ್ ಲೈನ್ ವ್ಯವಸ್ಥೆಯನ್ನು ಬಳಸಲಾಗುತ್ತದೆ.ಯೋಜನೆಯ ಸ್ಥಳವು ಚಿರತೆ, ಆನೆ, ಹುಲಿ ಇತ್ಯಾದಿ ವನ್ಯಮೃಗಗಳ ವಾಸಸ್ಥಾನವಾಗಿದೆ. ಹೀಗಾಗಿ ಭೂಮಿಯೊಳಗೆ ಪೈಪ್ ಲೈನ್ ವ್ಯವಸ್ಥೆಯನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದು ರಾಷ್ಟ್ರೀಯ ವನ್ಯಮೃಗ ಮಂಡಳಿ ಹೇಳಿದೆ.
ಆದರೆ ಭದ್ರಾ ಮೇಲ್ದಂಡೆ ಯೋಜನೆಗೆ ಕೆಲವು ನಿರ್ಬಂಧ ಹೇರಲಾಗಿದೆ.  ಅವುಗಳೆಂದರೆ
-ಅರಣ್ಯ ಭೂಮಿಯ ಕಾನೂನು ಸ್ಥಿತಿ ಕಾಪಾಡಬೇಕು.
-ಮಣ್ಣಿನಲ್ಲಿ 1ರಿಂದ 2 ಮೀಟರ್ ಆಳದವರೆಗೆ ನೀರಾವರಿ ಪೈಪ್ ಲೈನ್ ಇರಬೇಕು.
-ಸ್ಥಳೀಯ ಸಸ್ಯವರ್ಗವನ್ನು ಕಾಪಾಡಬೇಕು.
-ವನ್ಯಜೀವಿ ಸಾವು ತಪ್ಪಿಸಲು ಹಳೆಯ ಕಾಲುವೆಯ ಮೇಲೆ ಇಳಿಜಾರು ವ್ಯವಸ್ಥೆ.
-ವನ್ಯಜೀವಿಗಳಿಗೆ ಸಾಧ್ಯವಾದಷ್ಟು ತೊಂದರೆ ಕೊಡಬಾರದು.
ಹಗಲು ಹೊತ್ತಿನಲ್ಲಿ ಸ್ಫೋಟಗಳನ್ನು ನಿಯಂತ್ರಿಸಬೇಕು.
-ರಾತ್ರಿ ವೇಳೆ ನಿರ್ಮಾಣ ಕೆಲಸ ಮಾಡಬಾರದು.
-ಅರಣ್ಯದೊಳಗೆ ರಾತ್ರಿ ಕಾರ್ಮಿಕರ ತಾಣವಿರಬಾರದು.
ಅರಣ್ಯ ಪ್ರದೇಶದ ಆಚೆ ಕಸ, ಅವಶೇಷಗಳನ್ನು ಎಸೆಯಬೇಕು.
-ಕಾರ್ಮಿಕ ವರ್ಗದ ನಿರ್ವಹಣೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com