ಮೈಸೂರು ದಸರಾದಲ್ಲಿ ವಸ್ತುಗಳು ಕಳೆದುಹೋದರೆ ಆನ್ ಲೈನ್ ನಲ್ಲಿ ದೂರು ನೀಡಿ

ಮೈಸೂರು ದಸರಾ ನೋಡಲು ಹೋಗಿ ಅಲ್ಲಿ ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮೈಸೂರು: ಮೈಸೂರು ದಸರಾ ನೋಡಲು ಹೋಗಿ ಅಲ್ಲಿ ನಿಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೆ ಗಾಬರಿಪಡಬೇಕಾಗಿಲ್ಲ. ಜಿಲ್ಲಾಡಳಿತದ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ದೂರು ದಾಖಲಿಸಬಹುದು. ಈ ಮೂಲಕ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಲಾಸ್ಟ್ ಅಂಡ್ ಫೌಂಡ್ ಎಂಬ ಹೆಸರಿನ ವ್ಯವಸ್ಥೆಯನ್ನು ವೆಬ್ ಸೈಟ್ ನಲ್ಲಿ ಅಳವಡಿಸಿದೆ.
ಪ್ರತಿವರ್ಷ ದಸರಾ ಹಬ್ಬಕ್ಕೆ ಮೈಸೂರಿಗೆ ಲಕ್ಷಾಂತರ ಜನರು ಬರುತ್ತಾರೆ. ಜನರ ನೂಕುನುಗ್ಗಲಿನಲ್ಲಿ ಹಲವರು ತಮ್ಮ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ಕಳೆದುಕೊಂಡವರ ವಸ್ತುಗಳನ್ನು ಹುಡುಕಲು ಜನಜಂಗುಳಿಯಲ್ಲಿ ಕಷ್ಟವಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಜನತೆಗೆ ವ್ಯವಸ್ಥೆ ಮಾಡಿಕೊಟ್ಟಿದೆ. ಸಾರ್ವಜನಿಕರು http://www.mysoredasara.gov.in ನಲ್ಲಿ ತಮ್ಮ ಕಳೆದು ಹೋದ ವಸ್ತುಗಳ ಬಗ್ಗೆ ದೂರು ಸಲ್ಲಿಸಬಹುದು.
ಹೇಗೆ ಕೆಲಸ ಮಾಡುತ್ತದೆ: ಒಬ್ಬ ವ್ಯಕ್ತಿಗೆ ಮೈಸೂರು ನಗರ ಸುತ್ತಮುತ್ತ ಯಾವುದಾದರೂ ವಸ್ತುಗಳು ಸಿಕ್ಕಿದರೆ ಅಥವಾ ಕಳೆದುಹೋದರೆ ಆ ಬಗ್ಗೆ mysoorudasara@gmail.comಗೆ ವಿವರ ಕಳುಹಿಸಬೇಕು. ತಕ್ಷಣದಲ್ಲಿಯೇ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತದೆ. ನಂತರ ದಸರಾ ಹಬ್ಬದ ಸಂಘಟಕರು ಇಮೇಲ್ ಕಳುಹಿಸಿದವರನ್ನು ಸಂಪರ್ಕಿಸುತ್ತಾರೆ. ಮೌಲ್ಯಯುತ ವಸ್ತುಗಳು ಸಿಕ್ಕಿದವರು ದಸರಾ ಆಯೋಜಕರಿಗೆ ನೀಡಬೇಕು.
 ಖಾಸಗಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಸಿ ಎಂಬುವವರು ಈ ವೆಬ್ ಸೈಟ್ ನ್ನು ಅಭಿವೃದ್ಧಿಪಡಿಸಿದ್ದಾರೆ. 
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ಈ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಜನರಿಗೆ ಒದಗಿಸುತ್ತಿದ್ದೇವೆ. ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳು ಸಿಕ್ಕಿದರೆ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದರು.
ದಸರಾದ ತ್ರಿಡಿ ಪ್ರದರ್ಶನ: 407 ವರ್ಷಗಳ ಇತಿಹಾಸವನ್ನು ಹೊಂದಿರುವ ದಸರಾ ಹಬ್ಬವನ್ನು ಈ ವರ್ಷ ಮೈಸೂರಿನ 133 ವರ್ಷಗಳ ಇತಿಹಾಸ ಹೊಂದಿರುವ ಟೌನ್ ಹಾಲ್ ಕಟ್ಟಡದಲ್ಲಿ ತ್ರಿಡಿ ತಂತ್ರಜ್ಞಾನ ಮೂಲಕ ಪರದೆ ಮೇಲೆ ಪ್ರದರ್ಶನ ಮಾಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.
ಆನ್ ಲೈನ್ ಅರ್ಜಿ: ದಸರಾ ಹಬ್ಬದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಈ ವರ್ಷ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ದಸರಾ ವೆಬ್ ಸೈಟ್ ನಲ್ಲಿ ಸಿಗುವ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿಗಳನ್ನು ದಸರಾ ಉಪ ಸಮಿತಿ ಪರಿಶೀಲಿಸಿ ಆಯ್ಕೆಗೊಂಡ ಕಲಾವಿದರ ಹೆಸರನ್ನು ಪ್ರಕಟಿಸುತ್ತದೆ. ಇನ್ನೊಂದು ವಾರದಲ್ಲಿ ಆನ್ ಲೈನ್ ಅರ್ಜಿಗಳು ಸಿಗುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com