ಯಂತ್ರೋಪಕರಣ ಖರೀದಿಯಲ್ಲಿ ವಂಚನೆ; ಸಿಎಂ ಸಿದ್ದರಾಮಯ್ಯ, ಜಾರ್ಜ್ ವಿರುದ್ಧ ಎಸಿಬಿಗೆ ದೂರು

ಯಂತ್ರೋಪಕರಣ ಖರೀದಿಯಲ್ಲಿ ಕೋಟ್ಯಂತರ ರೂ.ಕಿಕ್ ಬ್ಯಾಕ್ ಪಡೆದಿರುವುದಾಗಿ ಆರೋಪಿಸಿ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್, ಸಿದ್ದರಾಮಯ್ಯ ಹಾಗೂ ಕೆಜೆ ಜಾರ್ಜ್ ವಿರುದ್ಧ ಲೋಕಾಯುಕ್ತ, ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು  ಕೆಜೆ ಜಾರ್ಜ್
ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಕೆಜೆ ಜಾರ್ಜ್
ಬೆಂಗಳೂರು: ಮಹಾನಗರ ಪಾಲಿಕೆ ವಾಹನ, ಯಂತ್ರೋಪಕರಣ ಖರೀದಿಯಲ್ಲಿ ಕೋಟ್ಯಂತರ ರೂ.ಕಿಕ್ ಬ್ಯಾಕ್ ಪಡೆದಿರುವುದಾಗಿ ಆರೋಪಿಸಿ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆಜೆ ಜಾರ್ಜ್ ವಿರುದ್ಧ ಲೋಕಾಯುಕ್ತ, ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ.
ಬಿಬಿಎಂಪಿ ಕಸ ಗುಡಿಸುವ ಪಾಲಿಕೆ ವಾಹನ, ಯಂತ್ರೋಪಕರಣ ಖರೀದಿಯಲ್ಲಿ ವಂಚನೆ ನಡೆದಿರುವುದಾಗಿ ರಮೇಶ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಎಸಿಎಂಎಂ ಕೋರ್ಟ್ ನಲ್ಲಿಯೂ ದೂರು ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.
ಇದರೊಡನೆ ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ಸಹ ಅವ್ಯವಹಾರವಾಗಿದೆ ಇದರ ಕುರಿತಂತೆಯೂ ತನಿಖೆ ಆಗುಉವುದು ಅಗತ್ಯ ಎಂದು ರಮೇಶ್ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com