ಸಚಿವ ರಮೇಶ್ ಕುಮಾರ್ ವಿರುದ್ಧ ನಿಂದನೆ ನೊಟೀಸ್ ಹೊರಡಿಸಿದ ಹೈಕೋರ್ಟ್

ಆರೋಗ್ಯ ಸಚಿವ ರಮೇಶ್ ಕುಮಾರ್ ವಿರುದ್ಧ ಕರ್ನಾಟಕ ಹೈಕೋರ್ಟ್ ನಿಂದನೆ ನೊಟೀಸ್ ಹೊರಡಿಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎರಡು ಕೆರೆಗಳ ....
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಆರೋಗ್ಯ ಸಚಿವ ರಮೇಶ್ ಕುಮಾರ್ ವಿರುದ್ಧ ಕರ್ನಾಟಕ ಹೈಕೋರ್ಟ್ ನಿಂದನೆ ನೊಟೀಸ್ ಹೊರಡಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎರಡು ಕೆರೆಗಳ ಜಾಗದಲ್ಲಿ ಸರ್ಕಾರಿ ಸಮುದಾಯ ಭವನ ನಿರ್ಮಾಣ ಮಾಡದಂತೆ ಹಾಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿತ್ತು.
ವಿಚಾರಣೆ ನಡೆಸಿದ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಜಯಂತ್ ಪಟೇಲ್, ಮತ್ತು ಬಿ.ಎ ಪಟೇಲ್ ಕೋಲಾರ ಜಿಲ್ಲಾಧಿಕಾರಿ ಡಾ.ತ್ರಿಲೋಕ ಚಂದ್ರ ಮತ್ತು ಶ್ರೀನಿವಾಸಪುರ ತಹಶೀಲ್ದಾರ್ ರವಿ ಅವರಿಗೆ ನೊಟೀಸ್ ನೀಡಿದ್ದಾರೆ. 
ಜಿಕೆವಿಕೆ ಕೃಷಿ ವಿಜ್ಞಾನ ವಿವಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ.ಎನ್ ಸುಬ್ಬಾರೆಡ್ಡಿ, ಈ ಮೂವರ ವಿರುದ್ಧ ನ್ಯಾಯಾಂಗ ಆದೇಶ ಉಲ್ಲಂಘಿಸಿದ ನಿಂದನೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಫೋಟೋಗಳನ್ನು ಕೂಡ ಸಾಕ್ಷಿಯಾಗಿ ಒದಗಿಸಿದ್ದರು.
ಏಪ್ರಿಲ್ 18 ರಂದು ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ಕೆರೆಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಬೈರಪಳ್ಳಿ ಗ್ರಾಮದಲ್ಲಿರುವ ಒಂದು ಕೆರೆ 106.22 ಎಕರೆಯಿದ್ದು ಹಾಗೂ ಕೊಲ್ಲೂರು ಗ್ರಾಮದಲ್ಲಿರುವ ಕೆಲೆ 27.34 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಕೋರ್ಟ್ ಆದೇಶ ಏಪ್ರಿಲ್ 20 ರಂದು ತಹಶೀಲ್ದಾರ್ ಅವರಿಗೆ ತಲುಪಿತ್ತು. ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಕೆರೆಗಳ ಕಂದಾಯ ಭೂಮಿ ಬಳಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com