ಸಾರ್ವಜನಿಕರ ಪ್ರಬಲ ವಿರೋಧಕ್ಕೆ ಮಣಿದ ಸರ್ಕಾರ: ಕೆರೆಗಳ ಡಿನೋಟಿಫೈ ವಿಷಯ ಕೈ ಬಿಡಲು ನಿರ್ಧಾರ

ಸಾರ್ವಜನಿಕರ ನಿರಂತರ ಪ್ರತಿಭಟನೆ ಹಾಗೂ ರಾಜ್ಯಪಾಲರ ಕಾಳಜಿಯ ಹಿನ್ನೆಲೆಯಲ್ಲಿ ಬತ್ತಿದ ಕೆರೆಗಳನ್ನು ಡಿನೋಟಿಫೈ ಮಾಡುವ ಪ್ರಸ್ತಾವನೆಯನ್ನು ಸರ್ಕಾರ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಸಾರ್ವಜನಿಕರ ನಿರಂತರ ಪ್ರತಿಭಟನೆ ಹಾಗೂ ರಾಜ್ಯಪಾಲರ ಕಾಳಜಿಯ ಹಿನ್ನೆಲೆಯಲ್ಲಿ ಬತ್ತಿದ ಕೆರೆಗಳನ್ನು ಡಿನೋಟಿಫೈ ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಟ್ಟಿದೆ.
ಈ ಸಂಬಂಧ  ರಾಜ್ಯಪಾಲ ವಜುಭಾಯ್‌ ವಾಲಾ ಅವರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ,  ವಿವಿಧ ಇಲಾಖೆಗಳ ಅಭಿಪ್ರಾಯ ಪರಿಶೀಲನೆ ನಂತರ ಕೆರೆಗಳ ಡಿನೋಟಿಫಿಕೇಷನ್ ವಿಚಾರ ಕೈ ಬಿಟ್ಟಿರುವುದಾಗಿ ಹೇಳಿದ್ದಾರೆ. ಈಗಿನ ಮತ್ತು ಭವಿಷ್ಯದ ಜನಾಂಗಕ್ಕೆ ಕೆರೆಗಳನ್ನು ಸಂರಕ್ಷಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.
ಭೂಕಂದಾಯ ಕಾಯ್ದೆಯ ಸೆಕ್ಷನ್‌ 68 ಕ್ಕೆ ತಿದ್ದುಪಡಿ ಮಾಡಲು ಪರಿಶೀಲನೆ ನಡೆದಿತ್ತು. ಈ ಬಗ್ಗೆ ಅಭಿಪ್ರಾಯ ಪಡೆಯಲು ಪ್ರಸ್ತಾವನೆಯನ್ನು ವಿವಿಧ ಇಲಾಖೆಗಳಿಗೆ ಕಳುಹಿಸಿದ್ದೆವು. ವಿವಿಧ ಇಲಾಖೆಗಳ ಅಭಿಪ್ರಾಯವನ್ನು ಪರಿಶೀಲಿಸಿದ ಬಳಿಕ ಪ್ರಸ್ತಾವನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ.  ಕೆರೆಗಳ ಮೇಲೆ ಸಾರ್ವಜನಿಕರಿಗೆ ಇರುವ ಹಕ್ಕನ್ನು ಬದಲಿಸುವ ಅಥವಾ ರದ್ದು ಪಡಿಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com