ಚನ್ನಪಟ್ಟಣ ಸಮೀಪ ಕೇರಳ ಬಸ್ ಹತ್ತಿ ಪ್ರಯಾಣಿಕರ ದರೋಡೆ ಮಾಡಿದ ನಾಲ್ವರು ಮುಸುಕುಧಾರಿಗಳು

ಬಸ್ ಪ್ರಯಾಣ ಪ್ರಯಾಣಿಕರಿಗೆ ದುಸ್ವಪ್ನದಂತೆ ಕಾಡಿದ ಘಟನೆ ಚನ್ನಪಟ್ಟಣ ಹತ್ತಿರ ನಿನ್ನೆ ನಸುಕಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಸ್ ಪ್ರಯಾಣ ಪ್ರಯಾಣಿಕರಿಗೆ ದುಸ್ವಪ್ನದಂತೆ ಕಾಡಿದ ಘಟನೆ ಚನ್ನಪಟ್ಟಣ ಹತ್ತಿರ ನಿನ್ನೆ ನಸುಕಿನ ಜಾವ ನಡೆದಿದೆ. 
ನಿನ್ನೆ ನಸುಕಿನ ಜಾವ ಚನ್ನಪಟ್ಟಣ ಹತ್ತಿರ ಕೇರಳ ರಾಜ್ಯ ರಸ್ತೆ ಸಾ ರಿಗೆ ಬಸ್ಸಿನ ಮೇಲೆ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಬಸ್ಸಿನ ಪ್ರಯಾಣಿಕರ ಮೇಲೆ ಕುಡಗೋಲಿನಿಂದ ದಾಳಿ ಮಾಡಲು ಆರಂಭಿಸಿದರು.ಬಸ್ಸಿನಲ್ಲಿ 27 ಮಂದಿ ಪ್ರಯಾಣಿಕರಿದ್ದರು.
ಕೇರಳದ ಕೋಝಿಕ್ಕೋಡ್ ನಿಂದ ಬಸ್ಸು ಬೆಂಗಳೂರಿಗೆ ಬರುತ್ತಿತ್ತು. ನಸುಕಿನ ಜಾವ 2.30ರ ವೇಳೆಗೆ ಚನ್ನಪಟ್ಟಣ ಹತ್ತಿರ ಬಸ್ಸನ್ನು ಚಾಲಕ ಜಮಾಲುದ್ದೀನ್  ನಿಲ್ಲಿಸಿದ್ದರು. ಆಗ ಇದ್ದಕ್ಕಿದ್ದಂತೆ ನಾಲ್ವರು ಮುಸುಕುಧಾರಿಗಳು ಬೈಕಿನಲ್ಲಿ ಬಸ್ ಬಳಿಗೆ ಬಂದರು. ಕನ್ನಡದಲ್ಲಿ ಮಾತನಾಡುತ್ತಿದ್ದ ನಾಲ್ವರು ಬಸ್ಸು ಎಲ್ಲಿಗೆ ಹೋಗುತ್ತದೆ ಎಂದು ಚಾಲಕನ ಬಳಿ ಕೇಳಿದರು.
ಇಬ್ಬರು ಮುಸುಕುಧಾರಿಗಳು ಪ್ರಯಾಣಿಕರಂತೆ ವರ್ತಿಸಿ ಬಸ್ ಹತ್ತಿದರು. ಬಸ್ ಗೆ ಹತ್ತಿದ ಕೂಡಲೇ ಕುಡಗೋಲುಗಳನ್ನು ತಮ್ಮ ಚೀಲದಿಂದ ತೆಗೆದು ಪ್ರಯಾಣಿಕರನ್ನು ಗದರಿಸಿ ತಮ್ಮಲ್ಲಿರುವ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಬೆದರಿಕೆ ಹಾಕಿದರು. ಒಬ್ಬ ಮುಸುಕುಧಾರಿ ಇಬ್ಬರು ಮಹಿಳೆಯರಿಂದ ಸುಮಾರು 18 ಕೆಜಿ ಚಿನ್ನಾಭರಣಗಳನ್ನು ಕದ್ದುಕೊಂಡನು.
ಈ ಮಧ್ಯೆ ಬಹಿರ್ದೆಸೆಗೆಂದು ಹೋಗಿದ್ದ ಯುವಕ ಮರಳಿ ಬಂದಾಗ ಅಲ್ಲಿ ನಿಂತಿದ್ದ ಮತ್ತೊಬ್ಬ ಮುಸುಕುಧಾರಿ ಯುವಕನ ಕುತ್ತಿಗೆ ಹತ್ತಿರ ಕುಡುಗೋಲನ್ನು ತೋರಿಸಿ ಅವನ ಬಳಿಯಿದ್ದ ವಾಲೆಟ್ ಮತ್ತು ಬ್ಯಾಗನ್ನು ಕಿತ್ತುಕೊಂಡನು. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಚಾಲಕ ಜಮಾಲುದ್ದೀನ್, ಪೊಲೀಸ್ ಠಾಣೆ 100 ಮೀಟರ್ ದೂರದಲ್ಲಿತ್ತು. ಆದರೂ ಒಬ್ಬ ಪ್ರಯಾಣಿಕ ಬಂದಿಲ್ಲದ ಕಾರಣ ಆತನ ಸಹ ಪ್ರಯಾಣಿಕ ನಿಲ್ಲುವಂತೆ ಹೇಳಿದರು. ಹೀಗಾಗಿ ನನಗೆ ಬಸ್ಸು ನಿಲ್ಲಿಸಬೇಕಾಯಿತು. ಆಗ ದರೋಡೆಕೋರರು ಹೊರಗೆ ಹಾರಿದರು. ನಂತರ ದರೋಡೆಕೋರರು ತಮ್ಮ ಬೈಕ್ ನಲ್ಲಿ ಪರಾರಿಯಾದರು ಎಂದು ವಿವರಿಸಿದರು.
ಪ್ರಯಾಣಿಕರಿಗೆ ಯಾರಿಗೂ ಗಾಯಗಳಾಗಿಲ್ಲ. ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com