99% ರಷ್ಟು ಅತ್ಯಾಚಾರಗಳು ಮಹಿಳೆಯರ ಪರಿಚಯಸ್ಥರಿಂದಲೇ ಸಂಭವಿಸುತ್ತವೆ

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು ಇದರಲ್ಲಿ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಮಹಿಳೆಯರ ಪರಿಚಿತರೇ ಆಗಿರುತ್ತಾರೆ.
99% ರಷ್ಟು ಅತ್ಯಾಚಾರಗಳು ಮಹಿಳೆಯರ ಪರಿಚಯಸ್ಥರಿಂದಲೇ ಸಂಭವಿಸುತ್ತವೆ
99% ರಷ್ಟು ಅತ್ಯಾಚಾರಗಳು ಮಹಿಳೆಯರ ಪರಿಚಯಸ್ಥರಿಂದಲೇ ಸಂಭವಿಸುತ್ತವೆ
Updated on
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು ಇದರಲ್ಲಿ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಮಹಿಳೆಯರ ಪರಿಚಿತರೇ ಆಗಿರುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ ಸಿಆರ್ ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ 2016 ರ  ಅಂಕಿ ಅಂಶಗಳ ಪ್ರಕಾರ, 2014 - 16 ರ ನಡುವೆ, ಮಹಿಳೆಯರಿಗೆ ಪರಿಚಯ ವಿರುವವರಿಂದಲೇ ನಡೆದ ಲೈಂಗಿಕ ಕಿರುಕುಳದ ಪ್ರಕರಣಗಳು ಶೇ.86 ರಿಂದ 99.2 ಕ್ಕೆ ಏರಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ಅಪರಾಧಿಗಳು ನೆರೆಮನೆಯವರಾಗಿರುತ್ತಾರೆ ಅಥವಾ ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದವರಾಗಿರುತ್ತಾರೆ. 2016 ರಲ್ಲಿ ಬೆಳಕಿಗೆ ಬಂದ ಒಟ್ಟು 1,655 ಅತ್ಯಾಚಾರ ಪ್ರಕರಣಗಳಲ್ಲಿ, 1,642 ಪ್ರಕರಣಗಳು ಈ ವಿಭಾಗದಲ್ಲಿ ವರದಿಯಾಗಿದೆ.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ.ಎಸ್. ವಿಮಾಲಾ ಅವರು, ಜನರ ಮನಸ್ಸು ಬದಲಾಗಬೇಕು. ರಾತ್ರಿ ವೇಳೆ ಮಹಿಳೆ ಒಂಟಿಯಾಗಿ ತಿರುಗುತ್ತಾಳೆ ಎಂದ ಮಾತ್ರಕ್ಕೆ ಅತ್ಯಾಚಾರಾ ನಡೆಯುವುದಿಲ್ಲ. ನಾವೇ$ನು ಬೇಡಿಕೆ ಇಟ್ಟಿದ್ದೆವೋ ಅದನ್ನೇ ಈ ವರದಿಯೂ ಹೇಳಿದೆ. ಸಮಾಜದ ಜನರಲ್ಲಿ ಈ ಕುರಿತಂತೆ ಅರಿವು ಮೂಡಬೇಕಿದೆ ಎನ್ನುತ್ತಾರೆ. "ಭಾರತೀಯರಲ್ಲಿ ಹಿಂದಿನಿಂದ ಬಂದ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ಕಾರಣ ಮಹಿಳೆ ಬಗೆಗೆ ಇಂತಹಾ ಭಾವನೆಗಳು ಉಂಟಾಗುತ್ತಿದೆ. ಲಿಂಗ ಸಮಾನತೆ ಕುರಿತಂತೆ ಸಮಾಜದಲ್ಲಿ ಜಾಗೃತಿ ಮೂಡಬೇಕಿದೆ"ಮಾಜಿ ಡಿಜಿ ಮತ್ತು ಐಜಿಪಿ ಎಸ್ ಟಿ ರಮೇಶ್ ಹೇಳಿದರು.
"ಸಂಬಂಧಿಕರು ಅಥವಾ ಪರಿಚಿತರು ಅತ್ಯಾಚಾರವೆಸಗಿದಾಗ ಮಹಿಳೆಯರು ಅದರ ವಿರುದ್ಧ ದೂರು ನೀಡಲು ಹಿಂಜರಿಯುವುದರಿಂದ ಅತ್ಯಾಚಾರಿಗಳಿಗೆ ಈ ಮಾರ್ಗ ಅನುಕೂಲಕರವಾಗಿ ಪರಿಣಮಿಸಿದೆ"  ಮನೋವೈದ್ಯರಾದ  ಡಾ ಸತೀಶ್ ರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com