ಮತೀಯ ಸಾಮರಸ್ಯದ ಸಂದೇಶ ಸಾರಲು ಹುಬ್ಬಳ್ಳಿ-ಧಾರವಾಡ ಪೊಲೀಸರಿಂದ ಕಾರ್ಟೂನ್ ತಂತ್ರ

ಕೋಮು ಸಾಮರಸ್ಯವನ್ನು ಕಾಯ್ದುಕೊಳ್ಳುವ ಸಾಧನವಾಗಿ ಕಾರ್ಟೂನ್! ಇದು ಹುಬ್ಬಳ್ಳಿ-ಧಾರವಾಡ ಪೋಲೀಸರ ಹೊಸ ಐಡಿಯಾ.
ಮತೀಯ ಸಾಮರಸ್ಯದ ಸಂದೇಶ ಸಾರಲು ಹುಬ್ಬಳ್ಳಿ-ಧಾರವಾಡ ಪೊಲೀಸರಿಂದ ಕಾರ್ಟೂನ್ ತಂತ್ರ
ಮತೀಯ ಸಾಮರಸ್ಯದ ಸಂದೇಶ ಸಾರಲು ಹುಬ್ಬಳ್ಳಿ-ಧಾರವಾಡ ಪೊಲೀಸರಿಂದ ಕಾರ್ಟೂನ್ ತಂತ್ರ
ಹುಬ್ಬಳ್ಳಿ: ಕೋಮು ಸಾಮರಸ್ಯವನ್ನು ಕಾಯ್ದುಕೊಳ್ಳುವ ಸಾಧನವಾಗಿ ಕಾರ್ಟೂನ್! ಇದು ಹುಬ್ಬಳ್ಳಿ-ಧಾರವಾಡ ಪೋಲೀಸರ ಹೊಸ ಐಡಿಯಾ. ಶಾಂತಿ ಸಂದೇಶವನ್ನು ಹರಡಲು ಅಲ್ಲಿನ ಪೋಲೀಸರು ಕಂಡುಕೊಂಡ ಹೊಸ ಮಾರ್ಗವಿದು. ಇದು ಪ್ರಜೆಗಳಿಗೂ ಸಾಕಷ್ಟು ಇಷ್ಟವಾಗಿದೆ. ಕುಂದಾಪುರದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರಿಂದ ರಚಿಸಲ್ಪಟ್ಟ ವ್ಯಂಗ್ಯಚಿತ್ರ ಸರಣಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಶಾಂತಿ ಮತ್ತು ಸಾಮರಸ್ಯದ ಮಹತ್ವದ ಬಗ್ಗೆ ಸಂದೇಶವನ್ನು ಹರಡಲು ಬಳಸಿಕೊಳ್ಳುತ್ತಿದ್ದಾರೆ. 
ಈದ್ ಮಿಲಾದ್ ಗೆ ಒಂದು ದಿನ ಮುಂಚಿತವಾಗಿ ಆಯುಕ್ತರು ತಮ್ಮ ಸಾಮಾಜಿಕ ಮಾಧ್ಯಮ ಸೈಟ್ ಗಳಲ್ಲಿ ಇಂತಹಾ ಕೆಲವು ಕಾರ್ಟೂನ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಬಹುಪಾಲು ವ್ಯಂಗ್ಯಚಿತ್ರಗಳು ಜೀವನದಲ್ಲಿ  ಶಾಂತಿ ಸಾಮರಸ್ಯದ ಪ್ರಾಮುಖ್ಯತೆ ಸಾರುತ್ತವೆ, ಇನ್ನು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳನ್ನು ಪೋಸ್ಟ್ ಹಾಕುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಬಿಂಬಿಸುತ್ತವೆ.
ವ್ಯಂಗ್ಯಚಿತ್ರ ಸರಣಿಯು ಹಿಂದೂ ಮತ್ತು ಮುಸ್ಲಿಮರೊಂದಿಗೆ ಮಹಾತ್ಮಾ ಗಾಂಧಿ ಇರುವ ಚಿತ್ರದಿಂದ ಪ್ರಾರಂಭವಾಗುತ್ತದೆ. ಚಿತ್ರದಲ್ಲಿ ಗಾಂಧಿ 'ಈಶ್ವರ ಅಲ್ಲಾ ತೆರೇ ನಾಮ್'ಎನ್ನುವಾಗ ಇತರರು ದೇಶದ ಪ್ರಗತಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದದ ಮಹತ್ವವನ್ನು ಕುರಿತು ಮಾತನಾಡುತ್ತಾರೆ.
"ಹುಬ್ಬಳ್ಳಿ ಕೋಮು ಘರ್ಷಣೆಗೆ ಹೆಸರುವಾಸಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗಮನಿಸಿದಾಗ ಪರಿಸ್ಥಿತಿಯು ಶಾಂತಿಯುತವಾಗಿದೆ. ಶಾಂತಿ ಸಭೆಗಳನ್ನು ನಿಯಮಿತವಾಗಿ ನಡೆಸುವುದು, ಜತೆಗೆ ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪೊಲೀಸ್ ಕೂಡ ಶ್ರಮಿಸುತ್ತಿದೆ. ವ್ಯಂಗ್ಯಚಿತ್ರಗಳು ಬಲವಾದ ಮಾಧ್ಯಮವಾಗಿದ್ದು, ಸಂದೇಶವನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಆದ್ದರಿಂದ ನಾವು ಸಾಮಾಜಿಕ ಸಾಮರಸ್ಯದ ಕುರಿತು ಅರಿವು ಮೂಡಿಸಲು ಇವುಗಳನ್ನು ಬಳಸಿಕೊಳ್ಳುತ್ತಿದ್ದೇವೆ" ಹಿರಿಯ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವಾರ, ಚಿಕ್ಕಮಗಳೂರು ಎಸ್ ಪಿ ಅಣ್ಣಾಮಲೈ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರನ್ನು ಜನ ಸಾಮಾನ್ಯರ ನಡುವೆ ಕೋಮು ಸಾಮರಸ್ಯ ಮೂಡಿಸುವ ವ್ಯಂಗ್ಯಚಿತ್ರ ಸರಣಿಯನ್ನು ರಚಿಸುವಂತೆ ಕೋರಿದ್ದರು. ಚಿಕ್ಕಮಗಳೂರು ಸಹ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಈ ತಿಂಗಳಲ್ಲಿ ದತ್ತಮಾಲಾ ಅಭಿಯಾನವೂ ಇರುವುದು ಅಲ್ಲಿನ ಪೋಲೀಸರು ಹೆಚ್ಚಿನ ಭದ್ರತೆ ಒದಗಿಸುವಲ್ಲಿ ನಿರತರಾಗಿದ್ದಾರೆ.

"ಇದು ಒಂದು ಒಳ್ಳೆಯ ಕಾರ್ಯವಾಗಿದೆ ಮತ್ತು ಅದರ ಭಾಗವಾಗಿ ನಾನು ಕೆಲಸ ನಿರ್ವಹಿಸುವುದು ಖುಷಿ ಇದೆ. ನಾನು ವಿವಿಧ ಪೊಲೀಸ್ ವಿಭಾಗಗಳೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಜಾಗೃತಿ ಶಿಬಿರಗಳನ್ನು ಮಾಡುತ್ತಿದ್ದೇನೆ. ನಾನು ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು 2016 ರಲ್ಲಿ ಬೆಳಗಾವಿಯಲ್ಲಿ ವಿಶೇಷ ಕಾರ್ಟೂನ್ ಕಾರ್ಯಾಗಾರವನ್ನು ನಡೆಸಿದ್ದೆನು" ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com