ಹೊಸ ವರ್ಷಕ್ಕೆ ಸಿದ್ದು ಸರ್ಕಾರ ಕೊಡುಗೆ: ಯಲಹಂಕ ಸೇರಿದಂತೆ 50 ಹೊಸ ತಾಲ್ಲೂಕುಗಳ ರಚನೆ

ಉತ್ತಮ ಆಡಳಿತಕ್ಕೆ ಹೊಸ ತಾಲ್ಲೂಕುಗಳ ರಚನೆಗೆ ಮುಂದಾಗಿರುವ ಸಿದ್ದರಾಮಯ್ಯ ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಉತ್ತಮ ಆಡಳಿತಕ್ಕೆ ಹೊಸ ತಾಲ್ಲೂಕುಗಳ ರಚನೆಗೆ ಮುಂದಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ವರ್ಷಕ್ಕೆ 50 ಹೊಸ ತಾಲ್ಲೂಕುಗಳ ರಚನೆ ಮಾಡುವುದಾಗಿ ಹೇಳಿದ್ದಾರೆ. 
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನಿನ್ನೆ ಈ ವಿಷಯವನ್ನು ತಿಳಿಸಿದ್ದು, 50 ಹೊಸ ತಾಲ್ಲೂಕುಗಳಲ್ಲದೆ ಮತ್ತೆರಡು ಹೊಸ ತಾಲ್ಲೂಕುಗಳನ್ನು ರಚಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. ಎರಡು ಹೊಸ ತಾಲ್ಲೂಕುಗಳ ರಚನೆಗೆ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಪರೀಕ್ಷಿಸುವುದಾಗಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಹೊಸ ತಾಲ್ಲೂಕುಗಳ ರಚನೆಯಿಂದ ಹೆಚ್ಚಿನ ಲಾಭ ಪಡೆದುಕೊಳ್ಳಲಿದೆ. ಇಲ್ಲಿ ಬಬಲೇಶ್ವರ, ನಿಡಗುಂಡಿ, ಟಿಕೊಟಾ, ದೇವರಹಿಪ್ಪರಗಿ, ತಾಳಿಕೋಟ, ಚಡಚಾನ ಮತ್ತು ಕೊಲ್ಹರ ಎಂಬ ಏಳು ಹೊಸ ತಾಲ್ಲೂಕುಗಳು ರಚನೆಯಾಗಲಿವೆ. ಬೆಂಗಳೂರು ನಗರದಲ್ಲಿ ಯಲಹಂಕ ಹೊಸ ತಾಲ್ಲೂಕಾಗಿ ಪರಿವರ್ತನೆಯಾಗಲಿದೆ. ಹೊಸ ವರ್ಷಕ್ಕೆ ರಾಜ್ಯದ 1000 ಸಣ್ಣ ಹಳ್ಳಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತದೆ.ಬಗರ್ ಹುಕುಂ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರವನ್ನು ಫೆಬ್ರವರಿ ತಿಂಗಳಿನಿಂದ ವಿತರಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com