ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಸ್ವಾಗತ ಕೇಂದ್ರ ಸ್ಥಾಪನೆ

ಸಾರ್ವಜನಿಕರ ಸಮಸ್ಯೆ ಆಲಿಸುವುದಕ್ಕಾಗಿ ಶೀಘ್ರದಲ್ಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತರಬೇತಿ ಪಡೆದ ಸ್ವಾಗತಕಾರರ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ನೀಲಮಣಿ ಎನ್ ರಾಜು
ನೀಲಮಣಿ ಎನ್ ರಾಜು
Updated on
ಬೆಂಗಳೂರು: ಸಾರ್ವಜನಿಕರ ಸಮಸ್ಯೆ ಆಲಿಸುವುದಕ್ಕಾಗಿ ಶೀಘ್ರದಲ್ಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತರಬೇತಿ ಪಡೆದ ಸ್ವಾಗತಕಾರರ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಪೊಲೀಸ್ ಠಾಣೆಗಳನ್ನು ಸಾರ್ವಜನಿಕ ಸ್ನೇಹಿಯಾಗಿ ಮಾಡುವ ಉದ್ದೇಶದಿಂದ 'ಜನ ಸ್ನೇಹಿ ಪೊಲೀಸ್ ಯೋಜನೆ' ಅಡಿ ಡಿಸೆಂಬರ್ 31ರೊಳಗೆ ಎಲ್ಲಾ ಪೊಲೀಸ್ ಠಾಣೆಯಲ್ಲಿ ಸ್ವಾಗತ ಕೇಂದ್ರ ಸ್ಥಾಪಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಸ್ವಾಗತಕಾರರ ಕೇಂದ್ರ ಸ್ಥಾಪಿಸಿದ ಬಗ್ಗೆ ಫೋಟೋ ಸಮೇತ ವರದಿ ಮಾಡುವಂತೆ ಸೂಚಿಸಿದ್ದಾರೆ.
ಪೊಲೀಸ್‌ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಇರಬಹುದಾದ ಅಪನಂಬಿಕೆ ತೊಡೆದು ಹಾಕಿ ಅವರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಠಾಣೆಯಲ್ಲಿ 3ರಿಂದ 4 ಸಿಬ್ಬಂದಿಗೆ ಮೃದು ಕೌಶಲ್ಯಗಳ ಬಗ್ಗೆ ಎರಡು ದಿನ ತರಬೇತಿ ನೀಡಲಾಗುತ್ತಿದೆ.
ಪ್ರತಿ ಸ್ವಾಗತ ಕೇಂದ್ರದಲ್ಲಿ ‘May I Help You’ ಎಂಬ ಬೋರ್ಡ್ ಅನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಾಕಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com