ಬೆಂಗಳೂರು: ಟ್ಯುಟೋರಿಯಲ್ ಮಾಲೀಕರಿಂದ 1.25 ಲಕ್ಷ ವಂಚನೆ, ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ

ಖಾಸಗಿ ಟ್ಯುತೋರಿಯಲ್ ಮಾಲೀಕರಿಂದ 1.25 ಲಕ್ಷ ರೂ. ವಂಚನೆಗೊಳಗಾದ ಸಾಫ್ಟ್ ವೇರ್ ಇಂಜಿನಿಯರ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಬೆಂಗಳೂರು: ಟ್ಯುಟೋರಿಯಲ್ ಮಾಲೀಕರಿಂದ 1.25 ಲಕ್ಷ ವಂಚನೆ, ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ
ಬೆಂಗಳೂರು: ಟ್ಯುಟೋರಿಯಲ್ ಮಾಲೀಕರಿಂದ 1.25 ಲಕ್ಷ ವಂಚನೆ, ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ
ಬೆಂಗಳೂರು: ಖಾಸಗಿ ಟ್ಯುತೋರಿಯಲ್ ಮಾಲೀಕರಿಂದ 1.25 ಲಕ್ಷ ರೂ. ವಂಚನೆಗೊಳಗಾದ ಸಾಫ್ಟ್ ವೇರ್ ಇಂಜಿನಿಯರ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಜೆಪಿ ನಗರದಲ್ಲಿ ಈ ದುರ್ಘಟನೆ ನಡೆದಿದ್ದು ರಿತೇಶ್ ಕುಮಾರ್ (35) ಆತ್ಮಹತ್ಯೆಗೆ ಶರಣಾದ ನತದೃಷ್ಟ ವ್ಯಕ್ತಿ. ಏಳು ವರ್ಷದ ಮಗುವಿಗೆ ಪ್ರಸಿದ್ದ ಶಾಲೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಟ್ಯ್ಟೋರಿಯಲ್ ಮಾಲೀಕ ಆದಿತ್ಯ ಬಜಾಜ್, ರಿತೇಶ್ ರಿಂದ 1.25 ಲಕ್ಷ ರೂ. ಪಡೆದಿದ್ದರು. ಆದರೆ ಅವರ ಮಾತಿನಂತೆ ಶಾಲೆಯಲ್ಲಿ ಸೀಟು ಸಿಗಲಿಲ್ಲ, ಅವರು ಹಣವನ್ನೂ ಹಿಂತಿರುಗಿಸಲಿಲ್ಲ.
ಮಾರತ್ ಹಳ್ಳಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ ರಿತೇಶ್ ಹಣ ಹಿಂಪಡೆಯಲು ಸಾಕಷ್ಟು ಪ್ರಯತ್ನಿಸಿದ್ದರೂ ಟ್ಯುಟೋರಿಯಲ್ ಮಾಲೀಕರು ಹಣ ವಾಪಾಸ್ ಮಾಡಲಿಲ್ಲ.  ಇದೇ ಕಾರಣಕ್ಕೆ ಆತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರಿತೇಶ್ ನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಸಂದರ್ಭ ಬೆಂಕಿ ನಂದಿಸಲು ಮುಂದಾದ ಆದಿತ್ಯ ಬಜಾಜ್ ಅವರಿಗೂ ಸಣ್ಣ ಪುಟ್ಟ ಸುಟ್ಟಗಾಯಗಳಾಗಿದ್ದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
"ರಿತೇಶ್ ಕುಮಾರು ಅವರು 2.5 ಲಕ್ಷ ಕೊಡುವುದಾಗಿ ಹೇಳಿ 1.25 ಲಕ್ಷ ಅಷ್ಟೇ ನೀಡಿದ್ದರು" ಎಂದು ಟ್ಯುಟೋರಿಯಲ್ ಮಾಲೀಕ  ಬಜಾಜ್ ಹೇಳಿದ್ದಾರೆ. 
ಪ್ರಕರಣ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಮತ್ತು ಬಜಾಜ್ ಅವರ ಮೇಲೆ ಆತ್ಮಹತ್ಯೆ ಗೆ ಕಾರಣ ಮತ್ತು ವಂಚನೆ ಪ್ರಕರಣ ದಾಖಲಾಗಿದೆ. ಪಾರುಲ್ ಮಹೇನ್ಸಿರಿಯಾ, ರಿತೇಶ್ ಅವರ ಪತ್ನಿ ಹೇಳುವಂತೆ ಆಕೆಗೆ ಪೋಲೀಸರ ಮೇಲೆ ನಂಬಿಕೆ ಇಲ್ಲ. ಆದರೆ ಬಜಾಜ್ ತನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದೊಸೊದರು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com