ಗ್ರಾಮೀಣ ಪ್ರದೇಶಗಳ ಸರ್ಕಾರಿ ಭೂಮಿಯಲ್ಲಿನ ಅಕ್ರಮ ಮನೆಗಳ ಸಕ್ರಮ: ಕಾಗೋಡು ತಿಮ್ಮಪ್ಪ

ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ ಭೂಮಿಯಲ್ಲಿ ಆಕ್ರಮವಾಗಿ ಕಟ್ಟಿರುವ ಮನೆಗಳನ್ನು....
ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ
ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ ಭೂಮಿಯಲ್ಲಿ ಆಕ್ರಮವಾಗಿ ಕಟ್ಟಿರುವ ಮನೆಗಳನ್ನು ಮಾರ್ಚ್ ಅಂತ್ಯದೊಳಗಾಗಿ ಸಕ್ರಮಗೊಳಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ಇಪ್ಪತ್ತೈದು ಲಕ್ಷ ಮಂದಿ ಸರ್ಕಾರಿ ಭೂಮಿಯಲ್ಲಿ ಆಕ್ರಮವಾಗಿ ಮನೆ ಕಟ್ಟಿಕೊಂಡಿದ್ದಾರೆ ಎಂಬ ಅಂದಾಜಿದ್ದು, ಮಾರ್ಚ್ ಅಂತ್ಯದೊಳಗಾಗಿ ಅವರೆಲ್ಲರಿಗೂ ವಾಸಿಸುತ್ತಿರುವ ಮನೆಯ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು.
ಆಕ್ರಮ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಪುನ: ವಿಸ್ತರಿಸಲಾಗಿದ್ದು ಫೆಬ್ರವರಿ ಅಂತ್ಯದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು. 
ಗ್ರಾಮೀಣ ಅಕ್ರಮ-ಸಕ್ರಮ (94ಸಿ), ಬಗರ್‌ಹುಕುಂ ಸಾಗುವಳಿ ಚೀಟಿ, ವಾಸಿಸುವವನೇ ಮನೆಯೊಡೆಯ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಮಾರ್ಚ್ 31ರ ಗಡುವು ವಿಧಿಸಲಾಗಿದೆ ಎಂದು ಕೂಡ ಹೇಳಿರುವ ಕಾಗೋಡು ತಿಮ್ಮಪ್ಪ, ಈ ನಿಟ್ಟಿನಲ್ಲಿ ಜಿಲ್ಲಾವಾರು ಸಭೆಗಳನ್ನು ನಡೆಸಲು ಇದೇ 15ರ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com