ಓಖಿ: ನಾಲ್ಕು ದಿನ ಹಸಿ ಮೀನು ತಿಂದು, ಸಮುದ್ರದ ನೀರು ಕುಡಿದು ಬದುಕಿ ಬಂದ ಮೀನುಗಾರರು!

ಕಂಡಷ್ಟು ದೂರಕ್ಕೂ ಬರೀ ನೀರು... ನೆಲವಾಗಲಿ, ಮಾನವರಾಗಲೀ ಸುಳಿವಿಲ್ಲ. ಓಖಿ ಚಂದಮಾರುತದ ಸುಳಿಗೆ ಸಿಲುಕಿದ 13 ಮೀನುಗಾರರು ಸಮುದ್ರದ ನಡುವೆಯೇ ನಾಲ್ಕು ದಿನ ಕಳೆದಿದ್ದಾರೆ.
ಉಡುಪಿ ಮಲ್ಪೆಯಲ್ಲಿ 13 ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ
ಉಡುಪಿ ಮಲ್ಪೆಯಲ್ಲಿ 13 ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ
ಮಂಗಳೂರು: ಕಂಡಷ್ಟು ದೂರಕ್ಕೂ ಬರೀ ನೀರು... ನೆಲವಾಗಲಿ, ಮಾನವರಾಗಲೀ ಸುಳಿವಿಲ್ಲ. ಓಖಿ ಚಂಡಮಾರುತದ ಸುಳಿಗೆ ಸಿಲುಕಿದ 13 ಮೀನುಗಾರರು ಸಮುದ್ರದ ನಡುವೆಯೇ ನಾಲ್ಕು ದಿನ ಕಳೆದಿದ್ದಾರೆ. 
ನೀರು ತುಂಬಿದ ದೋಣಿ ನಿಧಾನವಾಗಿ ಮುಳುಗತೊಡಗಿತ್ತು. ಕೊಚ್ಚಿಯಿಂದ ಹೊರಡುವ ಮೊದಲು ಅವರು ಒಂದು ತಿಂಗಳಿಗಾಗುವಷ್ಟು ಆಹಾರವನ್ನು ಪ್ಯಾಕ್ ಮಾಡಿ ತಂದಿದ್ದರು. ಆದರೆ ಅದೀಗ ಅನುಪಯುಕ್ತವಾಗಿತ್ತು.  ಕಡೆಗೆ ಬೇರೆ ದಾರಿ ಇಲ್ಲದೆ  ಹಸಿ ಮೀನುಗಳನ್ನು ತಿಂದು, ಸಮುದ್ರದ ನೀರನ್ನು ಕುಡಿದು ಅವರು ನಾಲ್ಕು ದಿನಗಳ ಕಾಲ ತಮ್ಮ ಜೀವ ಹಿಡಿದಿಟ್ಟುಕೊಂಡಿದ್ದರು. ಕಡೆಗೊಮ್ಮೆ ಭಾರತೀಯ ಕರಾವಳಿ ರಕ್ಷಣಆ ಪಡೆ (ಐಎಸ್ ಜಿ) ಬುಧವಾರ ಆ ಮೀನುಗಾರರನ್ನು ರಕ್ಷಣೆ ಮಾಡಿದೆ.
ನಾಲ್ಕು ದಿನಗಳಿಂದ ನಿದ್ರೆ ಕಾಣದ ಆ ಮೀನುಗಾರರ ಕಣ್ಣುಗಳಲ್ಲಿ ಆ ಭಯಾನಕ ದಿನಗಳ ಕರಾಳ ನೆನಪು ದಟ್ಟವಾಗಿತ್ತು. "ಆಹಾರವು ನಮ್ಮ ಆದ್ಯತೆಯಾಗಿರಲಿಲ್ಲ, ಬದುಕಲಿಕ್ಕಾಗಿ ಕಚ್ಚಾ ಮೀನುಗಳನ್ನು ಸೇವಿಸಿದೆವು. ಮುಳುಗುತ್ತಿದ್ದ ದೋಣಿಯಲ್ಲಿಯೇ ಸಮುದ್ರದ ನೀರು ಕುಡಿದೆವು. ಹಾಗಿಲ್ಲವಾದರೆ ನಾವು ಮೊದಲ ಅಥವಾ ಎರಡನೇ ದಿನವೇ ಸಾವನ್ನಪ್ಪುತ್ತಿದ್ದೆವು." ಥೇವಿಸ್ ಎನ್ನುವ ಕನ್ಯಾಕುಮಾರಿ ಮೂಲದ ಮೀನುಗಾರರು ಹೇಳಿದರು.
"ನಾವು ನಿರಂತರವಾಗಿ ದೋಣಿಯಲ್ಲಿದ್ದ ನೀರನ್ನು ಹೊರ ಹಾಕಬೇಕಿತ್ತು. ಆದರೆ ನಾವು ಖಾಲಿ ಮಾಡಿದಂತೆಲ್ಲಾ ಅದರ ದುಪ್ಪಟ್ಟು ವೇಗದಲ್ಲಿ ನೀರು ದೋಣಿಯನ್ನು ಪ್ರವೇಶಿಸುತ್ತಿತ್ತು.  ನಾವು ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ನಾವು ಬದುಕಲು ಎಷ್ಟು ಪ್ರಯತ್ನ ಪಡಬಹುದೋ ಅಷ್ಟು ಪ್ರಯತ್ನ ಪಟ್ಟಿದ್ದೇವೆ. ಅದಕ್ಕಾಗಿ ದುಸ್ಸಾದ್ಯವಾದ ಎಲ್ಲವನ್ನೂ ಮಾಡಿದ್ದೇವೆ, ಇಶಃಟಾಗಿಯೂ ಅಂತಿಮವಾಗಿ ದೇವರಿಗೆ ಮೊರೆಯ್ಟ್ಟಿದ್ದೆವು. ಇದೀಗ ನಾವು ಜೀವಂತವಾಗಿ ಹಿಂತಿರುಗಿದ್ದೇವೆ, ನಾವು ಮತ್ತೆ ನೆಲವನ್ನು ನೋಡಿದೆವು." ಅರುಳ್ ದಾಸ್ ಎನ್ನುವ ಇನ್ನೋರ್ವ ಮೀನುಗಾರರು ವಿವರಿಸಿದರು.
"ಸಮುದ್ರ ಅಲೆಗಳು ರುದ್ರ ಭೀಕರವಾಗಿದ್ದವು. ನಾವು ಅಪಾಯಕ್ಕೆ ಸಿಲುಕಿದ ದಿನದಿಂದಲೂ ನಮ್ಮ ಕುಟುಂಬದವರು ನಿದ್ರೆ ಮಾಡಲಿಲ್ಲ. ಈಗ, ನಾವು ಮನೆಗೆ ಹಿಂದಿರುಗಿ ಸಂತೋಷವಾಗಿ ನಿದ್ದೆ ಮಾಡುತ್ತೇವೆ. ನಾವು ದೇವರ ಕೃಪೆಯಿಂದ ಮಾತ್ರ ಸಾದ್ಯವಾಗಿದೆ. " ಬೋಟ್ ವಾರಸುದಾರ ಸ್ಟ್ಯಾಲಿನ್ ಹೇಳಿದರು.
"ಪ್ರವಾಹವು ಹೆಚ್ಚಿತ್ತು ಮತ್ತು ದೋಣಿ ಬಂಡೆಗೆ ಹತ್ತಿರವಾಗಿತ್ತು. ಅದೇನಾದರೂ ಒಮ್ಮೆ ಬಂಡೆಯನ್ನು ಅಪ್ಪಳಿಸಿದ್ದರೆ ದೋಣಿ ಮುಳುಗಡೆಯಾಗುವುದು ಖಚಿತವಾಗಿತ್ತು.  ಇನ್ನು ನಾವೇನಾದರೂ ಸ್ಥಳಕ್ಕೆ ತೆರಳುವಲ್ಲಿ ಒಂದು ತಾಸು ವಿಳಂಬವಾಗಿದ್ದರೂ ದೋಣಿಯಲ್ಲಿದ್ದವರೆಲ್ಲಾ ಪ್ರಾಣ ಕಳೆದುಕೊಳ್ಳುವ ಸಂಭವವಿತ್ತು." ಐಸಿಜಿ ಕಮಾಂಡರ್ ಅನಿಕೇತ್ ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com