ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಡಿ. 12ಕ್ಕೆ ಉದ್ಘಾಟನೆ

ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ ಡಿ.12 ರಂದು ನನೆರವೇರಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಡಿ 12ಕ್ಕೆ ಉದ್ಘಾಟನೆ
ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಡಿ 12ಕ್ಕೆ ಉದ್ಘಾಟನೆ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ ಡಿ.12 ರಂದು ನನೆರವೇರಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ 142 ಕೋಟಿ ರೂ. ವೆಚ್ಚದಲ್ಲಿ ಈ ವಿಮಾನ ನಿಲ್ದಾಣವನ್ನು ಅಭಿವೃದ್ದಿಪಡಿಸಿದೆ. ಉದ್ಘಾಟನೆಯ ದಿನದಿಂದಲೇ ಬೆಂಗಳೂರು– ಹುಬ್ಬಳ್ಳಿ– ಮುಂಬೈ ವಿಮಾನ ಸಂಚಾರಕ್ಕೂ ಚಾಲನೆ ದೊರೆಯಲಿದೆ.
ಕೇಂದ್ರ ವಿಮಾನಯಾನ ಸಚಿವ ಅಶೋಕ ಗಜಪತಿ ರಾಜು ನೂತನ ಟರ್ಮಿನಲ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳೊದರು. 
3,600 ಚದರ ಮೀಟರ್‌ ವಿಸ್ತೀರ್ಣದಲ್ಲಿ ಹವಾನಿಯಂತ್ರಿತ ಟರ್ಮಿನಲ್‌ ಇದಾಗಿದ್ದು ಈ ಹಿಂದೆ 1,674 ಮೀ. ಇದ್ದ ರನ್ ವೇ ಅನ್ನು 2,600 ಮೀ. ಗೆ ವಿಸ್ತರಿಸಲಾಗಿದೆ. ಏರ್‌ ಟ್ರಾಫಿಕ್‌ ಕಂಟ್ರೋಲ್‌ (ಎಟಿಸಿ) ಜತೆಗೆ ಮೂರು ಏರ್‌ಬಸ್‌ ನಿಲುಗಡೆಗೆ ಸ್ಥಳಾವಕಾಶ ನಿರ್ಮಾಣವಾಗಿದೆ.
ಅಂದಿನಿಂದ ಪ್ರಾರಂಭವಾಗುವ ನೂತನ  ಏರ್ ಇಂಡಿಯಾ ಸಂಸ್ಥೆಯ ವಿಮಾನವು ಬೆಂಗಳೂರು– ಹುಬ್ಬಳ್ಳಿ– ಮುಂಬೈ ನಡುವೆ ಪ್ರತಿ ಮಂಗಳವಾರ, ಬುಧವಾರ ಮತ್ತು ಶನಿವಾರಗಳಂದು ಸಂಚಾರ ನಡೆಸಲಿದೆ.
"ಹುಬ್ಬಳ್ಳಿ– ಬೆಂಗಳೂರು ನಡುವೆ ವಿಮಾನ ಸಂಚಾರಕ್ಕೆ ಹಿಂದಿನಿಂದಲೂ ಬೇಡಿಕೆ ಇದೆ. ಶೀಘ್ರದಲ್ಲೇ ಈ ನಗರಗಳ ನಡುವೆ ಪ್ರತಿ ದಿನ ವಿಮಾನ ಸಂಚಾರ ಪ್ರಾರಂಭಿಸಲಾಗುವುದು" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com