ಸಕಾಲ ಯೋಜನೆ ಬಗೆಗೆ ಅಜ್ಞಾನ, ಬಡ ವಿದ್ಯಾರ್ಥಿಗಳಿಂದ ಜಾತಿ ಪ್ರಮಾಣಪತ್ರಕ್ಕೆ ಸಾವಿರ ರೂ. ಪಾವತಿ

ಕಲಬುರ್ಗಿ ಜಿಲ್ಲೆಯ ಬಡ ಪೋಷಕರಿಗೆ ಸರ್ಕಾರದ ಸಕಾಲ ಯೋಜನೆಯ ಕುರಿತಂತೆ ಸರಿಯಾದ ತಿಳುವಳಿಕೆ ಇಲ್ಲದೆಇರುವ ಮಾಹಿತಿ ಸಿಕ್ಕಿದೆ.
ಸಕಾಲ ಯೋಜನೆ ಲೋಗೋ
ಸಕಾಲ ಯೋಜನೆ ಲೋಗೋ
Updated on
ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಬಡ ಪೋಷಕರಿಗೆ ಸರ್ಕಾರದ ಸಕಾಲ ಯೋಜನೆಯ ಕುರಿತಂತೆ ಸರಿಯಾದ ತಿಳುವಳಿಕೆ ಇಲ್ಲದೆಇರುವ ಮಾಹಿತಿ ಸಿಕ್ಕಿದೆ. ಅವರು ಉಚಿತವಾಗಿ ಪಡೆಯಬೇಕಾದ ಪ್ರಮಾಣಪತ್ರಗಳಿಗೂ 1,000 ರೂ. ನೀಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್ಎಲ್ಎಸ್ಐಯು) ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ಕರ್ನಾಟಕ ವಿದ್ಯಾರ್ಥಿ ಸಕಾಲ ವಾಚ್ ನ  ಕೋ-ಆರ್ಡಿನೇಟರ್ ಎಸ್.ಎಸ್.ಹಿರೇಮಠ್  ಅವರು ತಾವು ಅಳಂದ ಹಾಗೂ ಕಲಬುರ್ಗಿ ತಾಲೂಕುಗಳಲ್ಲಿ ಸಕಾಲ ಮಾಹಿತಿ ಕುರಿತ ಎರಡು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
"ನಾವು ಸುಮಾರು 500 ಪಿಯು ವಿದ್ಯಾರ್ಥಿಗಳನ್ನು ನವೆಂಬರ್ ತಿಂಗಳ ಕೊನೆಯಲ್ಲಿ ಭೇಟಿಯಾಗಿದ್ದು ಸಕಾಲ ಯೀಓಜನೆ ಕುರಿತು ಅರಿವು ಮೂಡಿಸಿದ್ದೇವೆ.ಎಸ್.ಎಸ್.ಎಲ್.ಸಿ.ಯಿಂದ  ಪಿಯು ತರಗತಿಗೆ ಪ್ರವೇಶ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಅಗತ್ಯವಿದ್ದು ಅವುಗಳನ್ನು ಪಡೆಯಲು 50 ಕ್ಕೂ ಹೆಚ್ಚು ಪೋಷಕರು 1,000 ರೂ.ನೀಡಿದ್ದಾರೆ ಎಂದು ತಿಳಿದು ಆಘಾತವಾಗಿದೆ. ಈ ಭಾಗದ ವಿದ್ಯಾರ್ಥಿಗಳು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಾಗಿದ್ದು ಅವರುಗಳಿಗೆ ಈ ಹಣವೂ ಸಹ ಅತ್ಯಂತ ದೊಡ್ಡ ಮೊತ್ತವಾಗಿರುತ್ತದೆ." ಆರ್ ಟಿಇ ಕಾರ್ಯಕರ್ತರೂ ಆಗಿರುವ ಹಿರೇಮಠ್ ಹೇಳಿದರು.
ಈ ಭಾಗದ ಅದೆಷ್ಟೋ ಜನರು ’ಸಕಾಲ’ ಎನ್ನುವ ಪದದ ಬಗೆಗೆ ಕೇಳಿಯೇ ಇಲ್ಲ! ಕಲಬುರ್ಗಿ ತಾಲೂಕಿನ ಪಿಡಬ್ಲ್ಯೂ ಡಿ ಇಲಾಖೆಯಲ್ಲಿ ಗುತ್ತಿಗೆದಾರರ ಪರವಾನಗಿ ಪಡೆಯುವ ಪ್ರಯತ್ನವನ್ನು ವಿವರಿಸಿದ ಸಣ್ಣ  ಉದ್ಯಮಿ ಸಂತೋಷ್, "ನಾಣು ಲೈಸನ್ಸ್ ಬೇಕೆಂದು ಕಛೇರಿಯ ಸಿಬ್ಬಂದಿಯೊಬ್ಬರನ್ನು ಕೇಳಿದಾಗ ಅವರು ಅದಕ್ಕೆ 5,000. ಖರ್ಚು ತಗುಲುವುದಾಗಿ ಹೇಳಿದರು. ಆಗ ನಾನು ಅವರಿಗೆ ಸಕಾಲ ಯೋಜನೆಯಲ್ಲಿ ನಾನು ಈ ಲೈಸನ್ಸ್ ಹೊಂದಲು ಇಚ್ಚಿಸಿದ್ದೇನೆ ಎಂದು ತಿಳಿಸಿದೆ. ಆದರೆ ಅದಕ್ಕವರು ಈ ಪರವಾನಗಿಗೆ 2,500 ಖರ್ಚು ತಗಲಬಹುದು, ಅಷ್ಟನ್ನು ಸರಿಯಾಗಿ ನೀಡಿ ಎಂದರು"
ಸಕಾಲ ಯೋಜನೆ ಸರ್ಕಾರದ  ಪ್ರಮುಖ ಯೋಜನೆಯಾಗಿದ್ದು ಈ ಯೋಜನೆಯಡಿಯಲ್ಲಿ ದೇಶದ ನಾಗರಿಕರಿಗೆ ಸರ್ಕಾರಿ ಸೇವೆಯನ್ನು ಸಕಾಲದಲ್ಲಿ ಒದಗಿಸಲು ಕ್ರಮ ಕೈಗೊಳ್ಲಲಾಗುತ್ತದೆ. ಆಡಳಿತಾತ್ಮಕ ಹೊಣೆಗಾರಿಕೆ ಭರವಸೆ ನೀಡುವ ಈ ಯೋಜನೆಯಡಿಯಲ್ಲಿ ವಿವಿಧ ಇಲಾಖೆಗಳ 729 ಸೇವೆಗಳು ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com