ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳು ಸಂಕಷ್ಟ ದಲ್ಲಿವೆಯೆ?

ರಾಜ್ಯದಲ್ಲಿನ ಇಂಜಿನಿಯರಿಂಗ್ ಕಾಲೇಜುಗಳು ಸಂಕಷ್ಟದಲ್ಲಿವೆ. ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ನಿರ್ವಾಹಕರ ಪ್ರಕಾರ ಕಾಲೇಜುಗಳನ್ನು ನಡೆಸಿಕೊಂಡು ಹೋಗುವುದೇ ......
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಲಾಂಛನ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಲಾಂಛನ
ಬೆಂಗಳೂರು: ರಾಜ್ಯದಲ್ಲಿನ ಇಂಜಿನಿಯರಿಂಗ್ ಕಾಲೇಜುಗಳು ಸಂಕಷ್ಟದಲ್ಲಿವೆ. ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ನಿರ್ವಾಹಕರ ಪ್ರಕಾರ ಕಾಲೇಜುಗಳನ್ನು ನಡೆಸಿಕೊಂಡು ಹೋಗುವುದೇ ತ್ರಾಸದಾಯಕವಾಗಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ  ಬೆಂಗಳೂರಿನಲ್ಲಿ ಆಯೋಜಿಸಿದ ಶಿಖರದಲ್ಲಿ  ಅಧ್ಯಕ್ಷರು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಆಡಳಿತದ ಸದಸ್ಯರು, ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರುಗಳು ತಾವು ಆರ್ಥಿಕ ಹೊರೆಯಿಂದ ಕುಗ್ಗಿ ಹೋಗಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
"ಹೊಸ ಕಾಲೇಜು ತೆರೆಯಲು ಅನುಮತಿಗಾಗಿ ನೂರಾರು ಕಾರ್ಯವಿಧಾನಗಳನ್ನು ಅನುಸರಿಸಬೇಕು. ಕಾಲೇಜುಗಳನ್ನು ಮುಚ್ಚುವುದಕ್ಕೂ ಸಹ ಕಾಲೇಜು ಪ್ರಾರಂಭಿಸುವುದಕ್ಕಿಂತ ಹೆಚ್ಚು ಜಟಿಲ ನಿಯಮಗಳನ್ನು ಹೊಂದಿದೆ. ಎಲ್ಲಾ ಕಾಲೇಜು ಆಡಳಿತ ಮಂಡಳಿಗಳ ಪರವಾಗಿ ಈ ಕ್ರಮಗಳಿಗೆ ವಿನಾಯಿತಿ ನೀಡಬೇಕೆಂದು ನಾನು ವಿನಂತಿಸುತ್ತೇನೆ." ಅಂಗಡಿ ಇನ್ಸ್ಟಿಟ್ಯೂಟ್ ನ ಮಾಲೀಕರಾದ ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.
"ಕಾಲೇಜು ಮುಚ್ಚುವ ಕಾರ್ಯ ವಿಧಾನಗಳು ಸುಲಭವಾದಲ್ಲಿ, ನಾವು ಕಾಲೇಜನ್ನು ಮುಚ್ಚಿ ಹೋಟೆಲ್ ಅನ್ನು ಪ್ರಾರಂಭಿಸಬಹುದು. ಕಾಲೇಜನ್ನು ಪ್ರಾರಂಭಿಸಲು ಹೂಡಿಕೆ ಮಾಡಿದ ಬಂಡವಾಳವನ್ನು ಈ ಮೂಲಕ ಹಿಂಪಡೆಯಬಹುದು." ಎಂದು ಆಂಗಡಿ ಹೇಳಿದರು. ಆರ್ ಎಲ್ ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರತಿನಿಧಿ ಹೇಳುವಂತೆ, "ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ನಿಯಮದಂತೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 30% ರಷ್ಟು ಸೀಟುಗಳು ಖಾಲಿ ಉಳಿದರೆ, ಅಂತಹಾ ಕಾಲೇಜನ್ನು ಮುಚ್ಚಬಹುದು. ಆದರೆ ಅದು ಶೇ. 50 ರಷ್ಟು ಇರಬೇಕು ಎಂದು ನಮ್ಮ ವಾದ, ಏಕೆಂದರೆ ಅದು ಹಲವು ಕಾಲೇಜುಗಳಿಗೆ ಸಹಾಯ ಆಗಲಿದೆ. "
ವಿಟಿಯು ದಾಖಲೆಗಲಾ ಪ್ರಕಾರ, 2016-17 ಶೈಕ್ಷಣಿಕ ವರ್ಷದಲ್ಲಿ. ಶೇ.46.74 ರಷ್ಟು ಸೀಟುಗಳು ಖಾಲಿ ಉಳಿದಿವೆ.  ಕಾಲೇಜು ವ್ಯವಸ್ಥಾಪನೆಗಳ ಪ್ರಕಾರ, ಈ ವರ್ಷ, ರಾಷ್ಟ್ರೀಯ ಅರ್ಹತೆ ಪ್ರವೇಶ ಪರೀಕ್ಷೆ (ನೀಟ್) ಕಾರಣದಿಂದಾಗಿಿಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿ ಪ್ರಮಾಣದಲ್ಲಿ ಕುಸಿತವಾಗಿದೆ. ಇದರೊಡನೆ ಕ್ಯಾಂಪಸ್ ಸೆಲೆಕ್ಷನ್ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿರುವುದು ಪ್ರವೇಶಾತಿ ಕುಸಿತಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com