ವೇಶ್ಯಾವಾಟಿಕೆ ಜಾಲ: ಬೆಂಗಳೂರು ಯುವತಿ ದೆಹಲಿ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪತ್ತೆ

ಬೆಂಗಳೂರು ಮೂಲದ 17 ವರ್ಷದ ಹುಡುಗಿ ದೆಹಲಿಯ ವೇಶ್ಯಾವಾಟಿಕೆ ಸಡೆಸುತ್ತಿದ್ದ ಮನೆಯೊಂದರಲ್ಲಿ ಪತ್ತೆಯಾಗಿದ್ದು ಪೋಲೀಸರು ಆಕೆಯನ್ನು ರಕ್ಷಿಸಿ ಬೆಂಗಳೂರಿಗೆ ಕರೆತಂದಿದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಮೂಲದ 17 ವರ್ಷದ ಹುಡುಗಿ ದೆಹಲಿಯ  ವೇಶ್ಯಾವಾಟಿಕೆ ಸಡೆಸುತ್ತಿದ್ದ ಮನೆಯೊಂದರಲ್ಲಿ ಪತ್ತೆಯಾಗಿದ್ದು ಪೋಲೀಸರು ಆಕೆಯನ್ನು ರಕ್ಷಿಸಿ ಬೆಂಗಳೂರಿಗೆ ಕರೆತಂದಿದಾರೆ. ಇದೇ ವೇಳೆ ಪೋಲೀಸರು ಮಾನವ ಕಳ್ಳಸಾಗಣೆ ಆರೋಪದಡಿಯಲ್ಲಿ ಮೂವರನ್ನು ಬಂಧಿಸಿದ್ದಾರೆ.
ಆರು ತಿಂಗಳ ಹಿಂದೆ ಬೆಂಗಳೂರಿನ ಮಾರತ್ ಹಳ್ಳಿಯ ಯುವತಿಯನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ದೆಹಲಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯನ್ನು 70 ಸಾವಿರ ರೂ. ಗೆ ಕಾಜಲ್ ಎನ್ನುವಾಕೆಗೆ ಮಾರಾಟ ಮಾಡಿದ್ದ ಶಿವಶಂಕರ್  ಎನ್ನುವಾತನನ್ನು ಮಾರತ್ ಹಳ್ಳಿ ಪೋಲೀಸರು ಬಂಧಿಸಿದ್ದಾರೆ. ೈದರೊಡನೆ ಯುವತಿಯನ್ನು ದೆಹಲಿಯಲ್ಲಿ ಮನೆಯೊಂದರಲ್ಲಿ ಬಂಧಿಸಿಟ್ಟಿದ್ದ ರಾಜೇಶ್‌ ಕುಮಾರ್ ಮತ್ತು ಛೋಟು ರಾಮ್‌ದೇನ್‌ ಅವರುಗಳನ್ನು ಸಹ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ವಿವರ: ಏಳನೇ ತರಗತಿ ಓದಿದ್ದ ಯುವತಿ ಮನೆಯವರೊಡನೆ ಕೂಲಿ ಕೆಲಸದಲ್ಲಿ ತೊಡಗಿದ್ದಳು. ಕಳೆದ ಜೂನ್ ನಲ್ಲಿ ಶಿವಶಂಕರ್ ಆಕೆಯನ್ನು ಭೇಟಿಯಾಗಿ 'ದೆಹಲಿಯ ಅಪಾರ್ಟ್ ಮೆಂಟ್ ನಲ್ಲಿ ಸ್ವಚ್ಚತಾ ಕೆಲಸ ಕೊಡಿಸುತ್ತೇನೆ, ಸಾಕಷ್ಟು ಹಣ ಗಳಿಸುವ ಅವಕಾಶವಿದೆ. ಪೋಷಕರಿಗೆ ತಿಳಿಸದೆ ನನ್ನೊಂದಿಗೆ ಬಾ' ಎಂದು ಆಹ್ವಾನಿಸಿದ್ದ. ಅದನ್ನು ನಂಬಿದ ಯುವತಿ ಜೂನ್ 7ರಂದು ದೆಹಲಿಗೆ ತೆರಳಿದ್ದಳು.
ಇತ್ತ ಪೋಷಕರು ಪರಿಚಯದವರ ಮನೆಯಲ್ಲೆಲ್ಲಾ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ನೆರೆಯ ಆಂದ್ರ ಪ್ರದೇಶಕ್ಕೆ ಹೋಗಿ ಅಲ್ಲಿನ ನೆಂಟರ ಮನೆಯಲ್ಲಿಯೂ ವಿಚಾರಿಸಿದ್ದಾರೆ. ಆದರೆ ಮಗಳು ಪತ್ತೆಯಾಗಲಿಲ್ಲ. ನಿರಾಶರಾದ ಅವರು ಆಗಸ್ಟ್ 8ರಂದು ಮಾರತ್ ಹಳ್ಳಿ ಪೋಲೀಸರಿಗೆ ದೂರು ಕೊಟ್ಟಿದ್ದಾರೆ. 'ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು ಅವನೇ ಅವಳನ್ನು ಕರೆದೊಯ್ದಿದ್ದಾನೆ' ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರಿ.  ಆದರೆ ಪೋಲೀಸರು ಆಕೆ ಪ್ರೀತಿಸುತ್ತಿದ್ದ ಯುವಕನನ್ನು ವಿಚಾರಿಸಿದಾಗ ಆಕೆಯ ಮೊಬೈಲ್ ಹಲವು ದಿನಗಳಿಂದ ಸ್ವಿಚ್ ಆಫ್ ಇದೆ. ನನಗೆ ಅವಳ ಬಗೆಗೆ ಯಾವ ಮಾಹಿಇತಿ ಇಲ್ಲ ಎನ್ನುವ ಉತ್ತರ ನೀಡಿದ್ದಾನೆ. ಯುವತಿಯ ಬಳಿ ಮೊಬೈಲ್ ಇದ್ದದ್ದು ಸ್ವತಹ ಆಕೆಯ ಪೋಷಕರಿಗೂ ತಿಳಿದಿರಲಿಲ್ಲ. ಇದೀಗ ಪೋಲೀಸರು ಮೊಬೈಲ್ ಸಂಖ್ಯೆಯನ್ನು ಪಡೆದು ಅದರ ಕಾಲ್ ಲಿಸ್ಟ್ ಪರಿಶೀಲಿಸಲು ಮೊಬೈಲ್ ಜೂನ್  9ರಂದೇ ಸ್ವಿಚ್ ಆಫ್ ಆಗಿರುವುದು ತಿಳಿದಿರುತ್ತದೆ.
ಮೊಬೈಲ್ ಗೆ ಬಂದ ಕಡೆಯ ಕರೆಯ ವಿವರ ಪರಿಶೀಲಿಸಲು ಶಿವಶಂಕರ್ ಬಗ್ಗೆ ಮಾಹಿತಿ ಸಿಗುತ್ತದೆ. ಅವನನ್ನು ಬಂಧಿಸಿ ವಿಚಾರಿಸಲು ಆತ ಯುವತಿಯನ್ನು ದೆಹಲಿಗೆ ಕರೆದೊಯ್ದು ಮಾರಾಟ ಮಾಡಿ ಬಂದದ್ದಾಗಿ ಹೇಳುತ್ತಾನೆ. ಆತನ ಹೇಳಿಕೆ ಆಧಾರದ ಮೇಲೆ ದೆಹಲಿಗೆ ತೆರಳಿದ ಪೋಲೀಸರ ತಂಡ ದೆಹಲಿಯ ಜಿ.ಬಿ.ರಸ್ತೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಲ್ಲದೆ ಸಂತ್ರಸ್ತೆಯನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳಿಬ್ಬರನ್ನು ನಗರಕ್ಕೆ ಕರೆತಂದಿದ್ದಾರೆ.
ಪ್ರಮುಖ ಆರೋಪಿ ಶಿವಶಂಕರ್ ಹಿನ್ನೆಲೆಯನ್ನು ಕುರಿತಂದೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಹೇಳಿದ್ದಾರೆ. "ನಾವು ಮರ್ಯಾದೆಗೆ ಅಂಜಿ ಪೋಲೀಸ್ ದೂರು ನೀಡಲು ತಡ ಮಾಡಿದ್ದೆವು." ಎಂದ ಯುವತಿಯ ಪೋಷಕರು ಮಗಳನ್ನು ಸುರಕ್ಷಿತವಾಗಿ ಕರೆತಂದ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com