ಮಹಿಳೆಯರ ಸುರಕ್ಷತೆಗೆ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸುತ್ತಿರುವ ಬಿಎಂಟಿಸಿ

ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಯಾಣಿಕರು ಸಲಹೆ ಸೂಚನೆಗಳನ್ನು ನೀಡಲು ಕೋರಲಾಗಿದೆ. ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯಡಿ ಹಣಕಾಸಿನ ನೆರವು ಸಿಕ್ಕಿದ ನಂತರ ಬಿಎಂಟಿಸಿ ಇದೀಗ ಬೆಂಗಳೂರು ರಾಜಕೀಯ ಕಾರ್ಯ  ಸಮಿತಿ(ಬಿ.ಪಾಕ್)ಜೊತೆಗೆ ಸಮೀಕ್ಷೆ ನಡೆಸಿ, ನಾಗರಿಕರು ಯಾವುದೆಲ್ಲ ಅಗತ್ಯವಾಗಿದೆ ಎಂದು ಹೇಳುತ್ತಾರೆಯೋ ಅವುಗಳನ್ನು ಮಹಿಳೆಯರ ಸುರಕ್ಷತಾ ಕ್ರಮಗಳಿಗೆ ಹಣವನ್ನು ಬಳಸಿಕೊಳ್ಳಲಾಗುವುದು ಎಂದರು. 
ಕೇಂದ್ರದಿಂದ ಸಿಕ್ಕಿರುವ 57 ಕೋಟಿ ರೂಪಾಯಿಗಳನ್ನು ಹಲವು ಉಪಕ್ರಮಗಳನ್ನು ಅಭಿವೃದ್ಧಿಪಡಿಸಲು ಬಿಎಂಟಿಸಿ ಉತ್ಸುಕವಾಗುತ್ತಿದೆ. ಸಿಸಿಟಿವಿ ಕ್ಯಾಮರಾಗಳ ನಿಯೋಜನೆ, ಕಣ್ಗಾವಲು ವ್ಯವಸ್ಥೆಯನ್ನು ಬಿಎಂಟಿಸಿಯ ಹೊಸ ಬಸ್ಸುಗಳಿಗೆ ಅಳವಡಿಸುವುದು, ವಾರ್ಷಿಕ ಸಾಮರ್ಥ್ಯ ಪ್ರಮಾಣಪತ್ರ ತಪಾಸಣೆ ಸಂದರ್ಭದಲ್ಲಿ ಬಸ್ಸುಗಳನ್ನು ಮೇಲ್ದರ್ಜೆಗೇರಿಸುವುದು ಇತ್ಯಾದಿ ಕ್ರಮಗಳನ್ನು ಒಳಗೊಂಡಿರುತ್ತದೆ.
ಇದಕ್ಕೆ ಹೊರತಾಗಿ ಬೇರೆ ಯೋಜನೆಗಳು ಕೂಡ ಇರುತ್ತವೆ. ಬಿಎಂಟಿಸಿಯಲ್ಲಿ ಸುಮಾರು 35,000 ನೌಕರರಿದ್ದು ಅವರಲ್ಲಿ ಕನಿಷ್ಠ 10,000 ಕೂಡ ಮಹಿಳಾ ನೌಕರರಿಲ್ಲ. ಚಾಲಕರು, ನಿರ್ವಾಹಕ ಹುದ್ದೆಗಳನ್ನು ಹೆಚ್ಚು ಹೆಚ್ಚಾಗಿ ಮಹಿಳೆಯರಿಗೆ ನೀಡಲು ಅವರಿಗೆ ತರಬೇತಿ ನೀಡಲು ಕೂಡ ಬಿಎಂಟಿಸಿ ಕ್ರಮ ಕೈಗೊಳ್ಳುತ್ತಿದೆ.
ಸಿಸಿಟಿವಿ ಕ್ಯಾಮರಾ ಮತ್ತು ಚಾಲನಾ ತರಬೇತಿಯನ್ನು ಮಹಿಳಾ ನೌಕರರಿಗೆ ನೀಡುವುದು ಮಾತ್ರವಲ್ಲದೆ ಮಹಿಳೆಯರಿಗೆ ನಿರ್ದಿಷ್ಟವಾದ ಆಪ್ ಗಳು, ಬಿಎಂಟಿಸಿ ಸಿಬ್ಬಂದಿಗೆ ಲಿಂಗ ಸೂಕ್ಷ್ಮತೆ ಕಾರ್ಯಕ್ರಮಗಳು, ಮಹಿಳಾ ಪ್ರಯಾಣಿಕರಿಗೆ ಲಾಂಜ್ ಗಳನ್ನು ಕೂಡ ಒಳಗೊಂಡಿರುತ್ತದೆ. ಸಮೀಕ್ಷೆ ನಡೆಸುವುದರಿಂದ ಪ್ರಯಾಣಿಕರಿಗೆ ಯಾವೆಲ್ಲಾ ಸೇವೆಗಳು ಅಗತ್ಯವಾಗಿರುತ್ತದೆ ಎಂದು ತಿಳಿದುಕೊಳ್ಳಬಹುದಾಗಿದೆ. ಆನ್ ಲೈನ್ ಮೂಲಕ ಮತ್ತು ಹಲವು ಬಸ್ ನಿಲ್ದಾಣಗಳಲ್ಲಿ ಸಮೀಕ್ಷೆ ನಡೆಸಲಾಗುವುದು. 2,000 ಮಂದಿಯಿಂದ ಪ್ರತಿಕ್ರಿಯೆ ಪಡೆದ ನಂತರ ಫಲಿತಾಂಶವನ್ನು ಬಿಎಂಟಿಸಿಗೆ ಸಲ್ಲಿಸಲಾಗುವುದು ಎನ್ನುತ್ತಾರೆ ಬಿ.ಪಾಕ್ ವಕ್ತಾರರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com