ತೆಲಗಿ ಆಸ್ತಿ ಸ್ವಾಧೀನಪಡಿಸಿಕೊಂಡು ದೇಶಕ್ಕಾಗಿ ಬಳಸಿಕೊಳ್ಳಿ: ಕೋರ್ಟ್ ಗೆ ಪತ್ನಿ ಪ್ರಮಾಣಪತ್ರ

ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಯ ...
ಅಬ್ದುಲ್ ಕರೀಂ ತೆಲಗಿ
ಅಬ್ದುಲ್ ಕರೀಂ ತೆಲಗಿ
Updated on
ಬೆಂಗಳೂರು: ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಯ ರಾಜ್ಯದಲ್ಲಿರುವ 9 ಸ್ಥಿರಾಸ್ತಿಗಳನ್ನು ಪಡೆದುಕೊಂಡು ದೇಶದ ಹಿತಕ್ಕಾಗಿ ಬಳಸಿಕೊಳ್ಳುವಂತೆ ಆತನ ಪತ್ನಿ ವಿಶೇಷ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಕರೀಂ ತೆಲಗಿಯ ಪತ್ನಿ ಶಾಹಿದಾ, ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ (MCOCA) ವಿಶೇಷ ಕೋರ್ಟ್ ಗೆ ಮನವಿ ಮಾಡಿ, ಅಧಿಕಾರಿಗಳು ವಶಪಡಿಸಿಕೊಳ್ಳದಿರುವ ಸ್ಥಿರಾಸ್ತಿಗಳನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು. ಈ ಎಲ್ಲಾ ಆಸ್ತಿಗಳು ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿವೆ. ಈ ಆಸ್ತಿಗಳ ಬೆಲೆಯನ್ನು ಇನ್ನೂ ನಿರ್ಧರಿಸಿಲ್ಲ.
ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಶಾಹಿದಾ, ತೆಲಗಿಯವರು ತಮ್ಮ ಮತ್ತು ತಮ್ಮ ಸಂಬಂಧಿಕರ ಹೆಸರಿನಲ್ಲಿ ಖರೀದಿಸಿದ ಕೆಲವು ಆಸ್ತಿಗಳಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿಲ್ಲ. ತೆಲಗಿಯವರ ಕೊನೆಯ ಆಸೆಯಂತೆ, ನಕಲಿ ಛಾಪಾ ಕಾಗದ ತನಿಖೆ ಸಂದರ್ಭದಲ್ಲಿ ಖರೀದಿಸಿದ ಆಸ್ತಿಗಳನ್ನು ಸರ್ಕಾರ ಪಡೆದುಕೊಂಡು ಅದನ್ನು ಸಾರ್ವಜನಿಕ ಹಿತಕ್ಕಾಗಿ ಮತ್ತು ದೇಶದ ಒಳಿತಿಗಾಗಿ ಬಳಸಿಕೊಳ್ಳಬೇಕು. ನನ್ನ ಪತಿಯ ಕೊನೆಯ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿದ್ದು, ಇದನ್ನು ನ್ಯಾಯಾಲಯದ ಮತ್ತು ಪ್ರಾಸಿಕ್ಯೂಷನ್ ಸಂಸ್ಥೆಗಳ ಗಮನಕ್ಕೆ ತರುತ್ತೇನೆ. ಆದುದರಿಂದ ನಾನು ಈ ಅರ್ಜಿ ಸಲ್ಲಿಸುತ್ತೇನೆ ಎಂದಿದ್ದಾರೆ.
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿ ಅಪರಾಧಿ ಸಂಖ್ಯೆ 23 ಮತ್ತು ಶಾಹಿದಾ ಅಪರಾಧಿ ಸಂಖ್ಯೆ 67 ಆಗಿದ್ದರು. ತನಿಖೆ ನಡೆಸಿದ ಸಿಬಿಐ ಇಬ್ಬರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಿತ್ತು. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾತನಾಡಿದ ಶಾಹಿದಾ ಪರ ವಕೀಲ ಮಿಲಿಂಡ್ ಡಿ ಪವರ್, ಕಳೆದ ಅಕ್ಟೋಬರ್ ನಲ್ಲಿ ತೆಲಗಿ ಸಾವಿನ ನಂತರ ಅವರ ಕುಟುಂಬದವರು ನವೆಂಬರ್ ನಲ್ಲಿ ನನ್ನನ್ನು ಭೇಟಿ ಮಾಡಿ ಆಸ್ತಿಯನ್ನು ದಾನ ಮಾಡುವ ಆಸೆ ವ್ಯಕ್ತಪಡಿಸಿದರು. ಅವರ ಆಸೆಯಂತೆ ನಾನು ಶಾಹಿದಾ ಪರವಾಗಿ ಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿದ್ದೇನೆ ಎಂದರು.
ಈ ಬಗ್ಗೆ ಮಾತನಾಡಿದ ತೆಲಗಿಯ ಅಳಿಯ ಇರ್ಫಾನ್ ತಾಳಿಕೋಟೆ, ಶಾಹಿದಾ ಅವರು ಈಗ ಯಾರ ಜೊತೆ ಕೂಡ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಅವರು ಕೆಲವು ಸಂಪ್ರದಾಯಗಳನ್ನು ನೆರವೇರಿಸುತ್ತಿದ್ದಾರೆ. ಕುಟುಂಬಕ್ಕೆ ಆಸ್ತಿಯಾಗಿದ್ದ ತೆಲಗಿ ಸಾವಿನ ನಂತರ ಅವರು ಈ ನಿರ್ಧಾರ ತೆಗೆದುಕೊಂಡರು. ನಮಗೆಲ್ಲರಿಗೂ ಅವರು ತೆಗೆದುಕೊಂಡ ತೀರ್ಮಾನದ ಬಗ್ಗೆ ಖುಷಿಯಿದೆ ಎಂದರು.
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ತೆಲಗಿ ಅಪರಾಧಿ ಎಂದು ಸಾಬೀತಾಗಿ ನ್ಯಾಯಾಂಗ ಬಂಧನದಲ್ಲಿದ್ದಾಗ ಕಳೆದ ಅಕ್ಟೋಬರ್ 23ರಂದು ವಿಕ್ಟೋರಿಯಾ ಆಸ್ಪತ್ರೆಯನ್ನು ನಿಧನ ಹೊಂದಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com