ಬೆಂಗಳೂರು: ಬಿಬಿಎಂಪಿ ಕೌನ್ಸಿಲರ್ ಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ, ದೂರು ದಾಖಲು

ಬಿಬಿಎಂಪಿ ಕೌನ್ಸಿಲರ್ ಓರ್ವರಿಗೆ 'ಅಜ್ಞಾತ ವ್ಯಕ್ತಿಯಿಂದ' ಜೀವ ಬೆದರಿಕೆ ಕರೆ ಬಂದಿದೆ. ಭೂಗತ ಪಾತಕಿ ರವಿ ಪೂಜಾರಿ ಕಡೆಯಿಂದ ಬಂದ ಕರೆ ಇದಾಗಿತ್ತೆಂದು......
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಬಿಬಿಎಂಪಿ ಕೌನ್ಸಿಲರ್ ಓರ್ವರಿಗೆ 'ಅಜ್ಞಾತ ವ್ಯಕ್ತಿ'ಯಿಂದ' ಜೀವ ಬೆದರಿಕೆ ಕರೆ ಬಂದಿದೆ. ಭೂಗತ ಪಾತಕಿ ರವಿ ಪೂಜಾರಿ ಕಡೆಯಿಂದ ಬಂದ ಕರೆ ಇದಾಗಿತ್ತೆಂದು ಪಾದರಾಯನಪುರ ವಾರ್ಡ್ ನ ಕೌನ್ಸಿಲರ್ ಇಮ್ರಾನ್ ಪಾಶಾ ಹೇಳಿದ್ದಾರೆ. ಅವರು ಈ ಸಂಬಂಧ ಜಗಜೀವನ್ ರಾಮ್ ನಗರ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅವರು ಡಿಸೆಂಬರ್ 10 ಮತ್ತು ಡಿಸೆಂಬರ್ 11 ರ ಮಧ್ಯರಾತ್ರಿಯ ಸಮಯದಲ್ಲಿ ಅಂತರರಾಷ್ಟ್ರೀಯ ದೂರವಾಣಿ ಸಂಖ್ಯೆಯಿಂದ ಕರೆ ಸ್ವೀಕರಿಸಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ರವಿ ಪೂಜಾರಿ ಆಗಿದ್ದನೆಂದು ಅವರು ಎಕ್ಸ್ ಪ್ರೆಸ್ ಗೆ ತಿಳಿಸಿದರು. ತನ್ನ ರಾಜಕೀಯ ವಿರೋಧಿಗಳು ನನ್ನನ್ನು ಮುಗಿಸಲು ಅವನಿಗೆ ಸುಪಾರಿ ನೀಡಿದ್ದಾರೆ ಎಂದು ಪಾಶಾ ಆರೋಪಿಸಿದರು.
ಕರೆ ಮಾಡಿದ್ದ ವ್ಯಕ್ತಿ ಪಾಶ ಅವರಿಗೆ ವಾರ್ಡ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸ್ಥಾನದಿಂದ ದೂರ ಸರಿಯಲು ಹೇಳಿದ್ದಲ್ಲದೆ ಎರಡು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದನು. ಆಗ ಪಾಶಾ ಅಂತಹಾ ಕರೆಗಳನ್ನು ಸ್ವೀಕರಿಸುವುದನ್ನು ಬಿಟ್ಟರು. ಆಗ ಆ ವ್ಯಕ್ತಿ ಇವರಿಗೆ 'ನಾವು ನಿಮ್ಮನ್ನು ಹತ್ಯೆ ಮಾಡುವುದಾಗಿ' ಸಂದೇಶವನ್ನು ಕಳಿಸಿದ್ದನು.
ಅಂತರ್ಜಾಲ ಬಳಸಿ ಕರೆ ಮಾಡಿರುವ ಕಾರಣ ಕರೆಯ ಮೂಲವನ್ನು ಪತ್ತೆ ಮಾಡುವುದು ಕಠಿಣವಾಗಿದೆ.ದೂರವಾಣಿ ಸಂಖ್ಯೆಗಳನ್ನು ನಾವು ಇದಾಗಲೇ ಸೈಬರ್ ಕ್ರೈಂ ವಿಭಾಗದವರಿಗೆ ನೀಡಿದ್ದೇವೆ. ಅವರು ಹೆಚ್ಚಿನ ತನಿಖೆ ಕೈಗೊಳ್ಳುತ್ತಾರೆ ಎಂಡು ಹಿರಿಯ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com