ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ ವೇಳೆ ವಾಹನ ನಿಲುಗಡೆ, ಮೆಟ್ರೋ ನಿಗಮದ ನಿಯಮಗಳ ಉಲ್ಲಂಘನೆ ಬಹಿರಂಗ

ಹೆಚ್ಚು ಹಣ ಗಳಿಸುವ ಸಲುವಾಗಿ ಬೆಂಗಳೂರಿನ ಎರಡು ಮೆಟ್ರೋ ಕೇಂದ್ರಗಳಲ್ಲಿರುವ ಪಾರ್ಕಿಂಗ್ ಗುತ್ತಿಗೆದಾರರು ರಾತ್ರಿ ವೇಳೆಯಲ್ಲಿ ಸಹ ಸಾರ್ವಜನಿಕರಿಗೆ ಪಾರ್ಕಿಂಗ್ ಒದಗಿಸುವ ಮೂಲಕ........
ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ ನಿಲುಗಡೆ ಮಾಡಿರುವ ದ್ವಿಚಕ್ರ ವಾಹನಗಳು
ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ ನಿಲುಗಡೆ ಮಾಡಿರುವ ದ್ವಿಚಕ್ರ ವಾಹನಗಳು
Updated on
ಬೆಂಗಳುರು: ಹೆಚ್ಚು ಹಣ ಗಳಿಸುವ ಸಲುವಾಗಿ  ಬೆಂಗಳೂರಿನ ಎರಡು ಮೆಟ್ರೋ ಕೇಂದ್ರಗಳಲ್ಲಿರುವ ಪಾರ್ಕಿಂಗ್ ಗುತ್ತಿಗೆದಾರರು ರಾತ್ರಿ ವೇಳೆಯಲ್ಲಿ ಸಹ ಸಾರ್ವಜನಿಕರಿಗೆ ಪಾರ್ಕಿಂಗ್ ಒದಗಿಸುವ ಮೂಲಕ ನಿಯಮಗಳನ್ನು  ಉಲ್ಲಂಘಿಸುತ್ತಿದ್ದಾರೆ. ವಾರಾಂತ್ಯದಲ್ಲಿ ರಾತ್ರಿಯ ವೇಳೆ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳು ಮತ್ತು ನಾಲ್ಕು-ಚಕ್ರದ ವಾಹನಗಳನ್ನು ನಿಲುಗಡೆ ಮಾಡಿರುವುದು ಕಂಡು ಬಂದಿದೆ. ರಾತ್ರಿ ನಿಲುಗಡೆಗೆ ಅನುಮತಿ ನೀಡಲಾಗಿದೆಯೆ ಎಂದು ಕೇಳಿದಾಗ, ಕಾಂಟ್ರಾಕ್ಟ್ ಸಂಸ್ಥೆಯ ಉದ್ಯೋಗಿ, "ಏಕಿಲ್ಲ? ನಾವು 24 ಗಂಟೆಗಳ ಕಾಲ ಪಾರ್ಕಿಂಗ್ ಒದಗಿಸುತ್ತೇವೆ. " ಎಂದರು.
"ರಾತ್ರಿ ವೇಳೆ ದ್ವಿಚಕ್ರ ವಾಹನ ನಿಲುಗಡೆಗೆ 30 ರೂ. ಹಾಗೂ ಕಾರ್ ನಿಲುಗಡೆಗೆ 60 ರೂ. ಅಪ್ಡೆಯುತ್ತೇವೆ" ಎಂದು ಅವರು ಹೇಳಿದ್ದಾರೆ. ಇದು ಬೆಳಗ್ಗೆ ಐದರಿಂದ ರಾತ್ರಿ ಹನ್ನೊಂದರವರೆಗೆ ನಿಲುಗಡೆಗಿರುವ ಶುಲ್ಕವಾಗಿದೆ. ನೀವು ಎಂದಿನಿಂದ ರಾತ್ರಿ ನಿಲುಗಡೆ ಸೌಲಭ್ಯ ಒದಗಿಸುತ್ತಿದ್ದಿರಿ ಎಂದು ಕೇಳಲು "ನಾವು ನಿಲ್ದಾಣ ಚಾಲನೆಗೊಂಡಾಗನಿಂದಲೂ ಈ ಕಾಂಟ್ರಾಕ್ಟ್ ಪಡೆದಿದ್ದೇವೆ. ಅಂದಿನಿಂದಲೂ ನಿಲುಗಡೆಗೆ ಅವಕಾಶವಿತ್ತು" ಎಂದರು.
ವಿಪರ್ಯಾಸವೆಂದರೆ, ಜನರಲ್ ಮ್ಯಾನೇಜರ್ (ಹಣಕಾಸು) ಯು ಎ ವಸಂತ ರಾವ್ ಅವರು ಲಾಮಿನೇಟೆಡ್ ಮಾಡಿದ್ದ ಲೆಟರ್ ಒಂದನ್ನು ನಿಲ್ದಾಣದ ಪಾರ್ಕಿಂಗ್ ಜಾಗದ ಪ್ರವೇಶದ್ವಾರದಲ್ಲಿ ಪ್ರದರ್ಶಿಸಿದ್ದು ಅದು ಮಾರ್ಚ್ 1, 2017 ರ ದಿನಾಂಕದ ಆದೇಶವಾಗಿದೆ. ಅದರ ಅನುಸಾರ "ಸುರಕ್ಷತೆಯ ದೃಷ್ಟಿಯಿಂದ ವಾಹನಗಳ ರಾತ್ರಿ ನಿಲುಗಡೆ ಅನ್ನು ನಿಷೇಧಿಸಲಾಗಿದೆ. ಮೆಟ್ರೊ ರೈಲು ಸೇವೆಯ ಪ್ರಾರಂಭ ಮತ್ತು ಮುಕ್ತಾಯದ ಸಮಯಗಳ ನಡುವೆ ಮಾತ್ರ ಇಲ್ಲಿ ವಾಹನ ನುಇಲುಗಡೆಗೆ ಅವಕಾಶವಿದೆ. "
ಅಲ್ಲದೆ ಆ ಪತ್ರದಲ್ಲಿರುವಂತೆ 'ಕಾಂಟ್ರಾಕ್ಟ್ ಸಂಸ್ಥೆ ಈ ನಿಯಮವನ್ನು ಉಲ್ಲಂಘಿಸಿದರೆ ಅವರ ಲೈಸನ್ಸ್ ರದ್ದಾಗುತ್ತದೆ. ಬೆಂಗಳೂರು ಮೆಟ್ರೊ ರೈಲ್ವೆ ನಿಗಮ ನಿಯಮಿತಕ್ಕೆ ಪಾವತಿಸಿರುವ ಮರುಪಾವತಿ ಮಾಡಬಹುದಾದ ಠೇವಣಿ ಹಣವನ್ನು ಕಳೆದುಕೊಳ್ಳಬೇಕಾಗುವುದು. ಮತ್ತು ಇಲ್ಲಿ ನಿಲುಗಡೆ ಮಾಡಲಾದ ವಾಹನಗಳನ್ನು ಪೋಲಿಸ್ ಠಾಣೆಗೆ ಒಪ್ಪಿಸಲಾಗುವುದು' ಎಂದು ಸ್ಪಷ್ಟಪಡಿಸುತ್ತದೆ.ಆದರೆ ಯಾರೊಬ್ಬರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಏತನ್ಮಧ್ಯೆ, ಕೆಂಪೇ ಗೌಡ ಮೆಟ್ರೋ ನಿಲ್ದಾಣದಲ್ಲಿ ಸಹ ಸಾರ್ವಜನಿಕರಿಗೆ ಇರಾತ್ರಿ ವೇಳೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುವ ಆರೋಪವಿದ್ದು "ಬಿಎಂಆರ್ ಸಿ ಎಲ್ ನಿಂದ ನಾವು ಇದೇ ಎಂಟು ದಿನಗಳ ಹಿಂದೆ ಎಚ್ಚರಿಕೆ ಸಂದೇಶ ಪಡೆದಿದ್ದೇವೆ. ಅದಾಗಿ ನಾವು ರಾತ್ರಿ ನಿಲುಗಡೆಯನ್ನು ನಿಷೇಧಿಸಿದ್ದೇವೆ." ಎಂದು ನಿಲ್ದಾಣದ ಓರ್ವ ಸಿಬ್ಬಂದಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com