ಬಿಡದಿ: 8 ವರ್ಷದ ಹಿಂದಿನ ಶಿಕ್ಷಕಿಯ ಅತ್ಯಾಚಾರ, ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಎಂಟು ವರ್ಷದ ಹಿಂದೆ ಬಿಡದಿಯಲ್ಲಿ ನಡೆದ ಶಾಲಾ ಶಿಕ್ಷಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬಿಡದಿ: 8 ವರ್ಷದ ಹಿಂದಿನ ಶಿಕ್ಷಕಿಯ ಅತ್ಯಾಚಾರ, ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಬಿಡದಿ: 8 ವರ್ಷದ ಹಿಂದಿನ ಶಿಕ್ಷಕಿಯ ಅತ್ಯಾಚಾರ, ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Updated on
ಬೆಂಗಳೂರು: ಎಂಟು ವರ್ಷದ ಹಿಂದೆ ಬಿಡದಿಯಲ್ಲಿ ನಡೆದ ಶಾಲಾ ಶಿಕ್ಷಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ರಾಮನಗರ ತಾಲೂಕಿನವರಾದ ಮಂಜುನಾಥ್ (34), ರವಿ (31), ರವಿಶ್ (28) ಮತ್ತು ನರಸಿಂಹ (29) ಎಂಬವರಿಗೆ 36 ವರ್ಷದ ಶಾಲಾ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಸಂಬಂಧ ರಾಮನಗರ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಬಿಡದಿ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 2009 ಈ ಪ್ರಕರಣ ನಡೆದಿದ್ದಾಗಿಅವರು ಹೇಳಿದರು
ಪ್ರಕರಣದ ವಿವರ
2009ರ ಪ್ರಾರಂಭದಲ್ಲಿ, ರವೀಶ್ ಮತ್ತು ನರಸಿಂಹ ಕುಣಿಗಲ್ ನಿಂದ ಮಾಗಡಿಗೆ ಹೊರಟಿದ್ದಾಗ ದಾರಿಯಲ್ಲಿ ಮಹಿಳೆಯೋರ್ವಳು ಲಿಫ್ಟ್ ಕೇಳಿದ್ದಳು. ಅವರು ಆಕೆಯನ್ನು ಹತ್ತಿಸಿಕೊಂಡು ನಂತ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದರು, ಆಕೆಯ ಚಿನ್ನದ ಸರವನ್ನು ಕಳವು ಮಾಡಿದ್ದರು ನಂತರ ಅವಳ ಮೃತದೇಹವನ್ನು ಘಟನಾ ಸ್ಥಳದಿಂದ ದೂರ ಎಸೆದರು.
ಅದಾಗಿ ಅವರಿಗೆ ಮತ್ತೊಮ್ಮೆ ಹಣದ ಅಗತ್ಯ ಕಂಡುಬಂದಾಗ ಅವರು  ಶಾಲಾ ಶಿಕ್ಷಕಿಯ ಅಪಹರಣಕ್ಕೆ ಸಂಚು ರೂಪಿಸಿದ್ದರು.  ಆಗಸ್ಟ್ 1, 2009 ರಂದು, ಶಿಕ್ಷಕಿ ಶಾಲೆಗೆ ತೆರಳುತ್ತಿದ್ದಾಗ ನರಸಿಂಹ ತನ್ನ ಸ್ನೇಹಿತನಿಂದ ಎರವಲು ತಂದ ಕಾರ್ ನಲ್ಲಿ ಅವರನ್ನು ಅಪಹರಿಸಿದ್ದನು. ಅಂದು ಬೆಳಗ್ಗೆ 7.15ಕ್ಕೆ ಶಿಕ್ಷಕಿಯನ್ನು ಶಾಲೆಗೆ ಬಿಡುವುದಾಗಿ ಹೇಳಿ ನರಸಿಂಹ ಅವರನ್ನು ಕಾರ್ ಹತ್ತಿಸಿಕೊಂಡ. ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಅದೇ ಶಾಲೆಯ ವಿದ್ಯಾರ್ಥಿಗಳಗಿದ್ದದ್ದರಿಂದ ಶಿಕ್ಷಕಿಗೂ ಯಾವ ಅನುಮಾನವಿರಲಿಲ್ಲ. ಆದರೆ ಆಕೆ ಕಾರ್ ಏರಿದ ಬಳಿಕ ರವಿ ಅತ್ಯಾಚಾರವೆಸಗಿ ಶಿಕ್ಷಕಿಯನ್ನು ಹತ್ಯೆ ಮಾಡಿ ಅವರ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ನಂತರ ಸುಮಾರು 100 ಕಿಮೀ ದೂರ ಪಯಣಿಸಿದ ಬಳಿಕ ಮೃತದೇಹವನ್ನುಈಸೆದು ಅಪರಾಧಿಗಳು ಊರಿಗೆ ಮರಳಿದ್ದರು. ಎಂದು ನಾಗಮಂಗಲ ಡಿವೈಎಸ್ ಪಿ ಧರ್ಮೇಂದ್ರ ಘಟನೆಯ ವಿವರ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com