ಬಿಡದಿ, ಹೊಸೂರು ವರಗೆ ನಮ್ಮ ಮೆಟ್ರೊ ವಿಸ್ತರಣೆ ಕೋರಿ ಬಿಡಿಎ ಪ್ರಸ್ತಾವನೆ

ಮೆಟ್ರೊ 3ನೇ ಹಂತದ ಭಾಗಗಳನ್ನು ಗುರುತಿಸಲು ನಗರ ಭೂಮಿ ಸಂಚಾರ ನಿರ್ದೇಶನಾಲಯ(ಡಲ್ಟ್) ಮತ್ತು ...
ನಮ್ಮ ಮೆಟ್ರೊ
ನಮ್ಮ ಮೆಟ್ರೊ
ಬೆಂಗಳೂರು: ಮೆಟ್ರೊ 3ನೇ ಹಂತದ ಭಾಗಗಳನ್ನು ಗುರುತಿಸಲು ನಗರ ಭೂಮಿ ಸಂಚಾರ ನಿರ್ದೇಶನಾಲಯ(ಡಲ್ಟ್) ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಸಮೀಕ್ಷೆ ನಡೆಸಿ ಸಂಚಾರ ಅಧ್ಯಯನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಸಮೀಕ್ಷೆ ನಡೆಸಿದ ಪ್ರದೇಶಗಳಲ್ಲಿ ಸರ್ಜಾಪುರ ರಸ್ತೆ, ಹೊಸೂರು, ಬಿಡದಿ ಮತ್ತು ನೆಲಮಂಗಲಗಳು ಸೇರಿಕೊಂಡಿವೆ. ಮೆಟ್ರೊ ಸಂಚಾರ ಅಧ್ಯಯನವನ್ನು ಡಲ್ಟ್ ಗೆ ವಹಿಸಲಾಗಿದೆ. ಮೆಟ್ರೊ ಮೂರನೇ ಹಂತದ ಕಾಮಗಾರಿಗೆ ಇನ್ನೂ ಸಮಯವಿದ್ದರೂ ಕೂಡ ಮೊದಲೇ ಮೆಟ್ರೊ ಹಾದಿಗಳನ್ನು ಗುರುತಿಸಬೇಕು. ಆ ಮೂಲಕ ಅಂತರ ಬದಲಾವಣೆ ನಿಲ್ದಾಣಗಳಲ್ಲಿ ಮೆಟ್ರೊ 2ನೇ ಹಂತದ ಕಾಮಗಾರಿ ನಡೆಯುವಾಗ ಮೂರನೇ ಹಂತದ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಬಹುದು. ನಿಲ್ದಾಣಗಳ ಕಾಮಗಾರಿ ಮುಗಿದ ನಂತರ ಅದರ ಮರು ಮಾದರಿ ಕೆಲಸ ಕಷ್ಟ ಎಂದು ಹೇಳಿದರು.
ನಗರದಲ್ಲಿರುವ ಅನೇಕ ಕಿರಿದಾದ ಪ್ರದೇಶಗಳನ್ನು ಮೆಟ್ರೊ ಸಂಪರ್ಕ ಕಲ್ಪಿಸಿದರೆ ಲಾಭವಾಗುತ್ತದೆಯೇ ಎಂದು ಗುರಿತಿಸಲಾಗುತ್ತದೆ. ಇಬ್ಲರ್ ಜಂಕ್ಷನ್, 
ಸರ್ಜಾಪುರ ರಸ್ತೆಗೆ ವಿಸ್ತರಿಸುವ ಔಟರ್ ರಿಂಗ್ ರಸ್ತೆಯಲ್ಲಿರುವ ನಿಲ್ದಾಣಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಿಐಇಸಿ ನಿಲ್ದಾಣವನ್ನು ನೆಲಮಂಗಲದವರೆಗೆ ಮತ್ತು ಗೊಟ್ಟಿಗೆರೆ ನಿಲ್ದಾಣವನ್ನು ಹೊಸೂರುವರೆಗೆ ವಿಸ್ತರಿಸುವುದು ಕೂಡ ಇದರಲ್ಲಿ ಸೇರಿಕೊಂಡಿದೆ. ಮಾರ್ಗಗಳನ್ನು ಗುರುತಿಸಿದ ನಂತರ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತದೆ.
ವಿಮಾನ ನಿಲ್ದಾಣ ಮಾರ್ಗ ಮತ್ತು ಒಆರ್ಆರ್ ಮಾರ್ಗಗಳನ್ನು ಮೆಟ್ರೊ ಎರಡನೇ ಹಂತದ ಕಾಮಗಾರಿಗೆ ಸೇರಿಸಲಾಗುವುದು ಎಂಬ ವರದಿಯನ್ನು ಜೈನ್ ತಳ್ಳಿಹಾಕಿದ್ದಾರೆ. ಎರಡನೇ ಹಂತದ ಕಾಮಗಾರಿಗೆ ಹಣಕಾಸಿನ ನೆರವು ಸಂಪೂರ್ಣಮಾಡಲಾಗಿದೆ. ಇನ್ನು ಯಾವುದೇ ಮಾರ್ಗಗಳಿದ್ದರೂ ಕೂಡ ಮುಂದಿನ ಹಂತಕ್ಕೆ ಸೇರಿಸಲಾಗುವುದು ಎಂದರು.
ಕಾಣ್ಮಿನಿಕೆ ಮತ್ತು ಕೆಂಪೇ ಗೌಡ ಲೇ ಔಟ್ ನಲ್ಲಿ ಸಾವಿರಾರು ಸೈಟುಗಳ ವಸತಿ ಯೋಜನೆ ಕೈಗೊಂಡಿರುವ ಬಿಡಿಎ ಬಿಡದಿಯನ್ನು ಮೂರನೇ ಹಂತದ ಕಾಮಗಾರಿಯಲ್ಲಿ ಸೇರಿಸಲು ಪರಿಗಣಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ. 
ಬಿಡದಿಯಲ್ಲಿ ಅನೇಕ ಕೈಗಾರಿಕೆಗಳು ಇರುವುದಲ್ಲದೆ ಬಿಡಿಎ ನಿವೇಶನ ಮತ್ತು ಮನೆಗಳನ್ನು ಬಿಡದಿಗೆ ಸುಲಭವಾಗಿ ಸಂಪರ್ಕಿಸಬಹುದು. ನಾವು ಈಗಾಗಲೇ ಮೆಟ್ರೊ ಅಧಿಕಾರಿಗಳನ್ನು ಭೇಟಿ ಮಾಡಿ ಮೂರನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ ಬಿಡದಿಯನ್ನು ಸೇರಿಸುವಂತೆ ಮನವಿ ಮಾಡಿದ್ದೇವೆ. ಬಿಡಿಎ ನಿವೇಶನಗಳ ಹತ್ತಿರ ಮೆಟ್ರೊ ಜಾಲ ವಿಸ್ತರಣೆಯಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನಮ್ಮ ಪ್ರಸ್ತಾವನೆಗೆ ಮೆಟ್ರೊ ನಿಗಮದ ಅಧಿಕಾರಿಗಳು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com