ಬೆಂಗಳೂರು: ಪ್ರಿಯಕರನೊಡನೆ ಬಾಳಲು ಮಗು ಅಡ್ಡಿ, ತಾಯಿಯಿಂದ ಮಗುವಿನ ಅಪಹರಣ, ಹತ್ಯೆ

ತಾನು ಪ್ರಿಅಯಕರನೊಂದಿಗೆ ಸುಖಜೀವನ ನಡೆಸಬೇಕೆನ್ನುವ ಕಾರಣಕ್ಕೆ ಹೆತ್ತ ಮಗುವನ್ನು ಕೊಲ್ಲಲು ತೀರ್ಮಾನಿಸಿದ ಆಕೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿಸಿದ್ದ ಮಗುವನ್ನು ಅಪಹರಿಸಿದ ಘಟನೆ........
ತಾಯಿಯಿಂದ ಮಗುವಿನ ಅಪಹರಣ, ಹತ್ಯೆ
ತಾಯಿಯಿಂದ ಮಗುವಿನ ಅಪಹರಣ, ಹತ್ಯೆ
Updated on
ಬೆಂಗಳೂರು: ತಾನು ಪ್ರಿಅಯಕರನೊಂದಿಗೆ ಸುಖಜೀವನ ನಡೆಸಬೇಕೆನ್ನುವ ಕಾರಣಕ್ಕೆ ಹೆತ್ತ ಮಗುವನ್ನು ಕೊಲ್ಲಲು ತೀರ್ಮಾನಿಸಿದ ಆಕೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿಸಿದ್ದ ಮಗುವನ್ನು ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಸ್ಪತ್ರೆಗೆ ಸೇರ್ಸಿದ್ದ ಮಗು ಕಾಣೆಯಾದ ಬಗೆಗೆ ಮಗುವಿನ ತಂದೆ ಪೋಲೀಸರಿಗೆ ದೂರು ಸಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು ಆನೆಕಲ್ ಪೋಲೀಸರು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಚಂದ್ರಶೇಖರ್ ಮತ್ತು ನಿವೇದಿತಾ ಅವರ ಏಕೈಕ ಪುತ್ರಿ ಅನ್ನಪೂರ್ಣ ಅನಾರೋಗ್ಯದಿಂದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಳು. ಭಾನುವಾರ, ನಿವೇದಿತಾ ಪ್ರಿಯಕರ ಸತೀಶ್ ಭಾನುವಾರ ಆಸ್ಪತ್ರೆಗೆ ಆಗಮಿಸಿ ನಿವೇದಿತಾಳನ್ನು ಭೇತಿಯಾಗುತ್ತಾನೆ. ಆಗ ಇಬ್ಬರೂ ಸೇರಿ ಆಸ್ಪತ್ರೆ ಸಿಬ್ಬಂದಿಗೂ ತಿಳಿಸದೆ ಮಗುವನ್ನು ಎತ್ತಿಕೊಂಡು ಪರಾರಿಯಾಗುತ್ತಾರೆ.
ಹಾಗೆ ಅಪಹರಿಸಿಕೊಂಡು ಹೋಗುವ ಸಮಯದಲ್ಲಿ ಮಗು ಎಂದಿದ್ದರೂ ತಮ್ಮ ಭವಿಷ್ಯಕ್ಕೆ ಮಾರಕ ಎಂದು ನಿರ್ಧರಿಸಿದ ಆರೋಪಿಗಳು ಅವಳ ಕತ್ತಿಗೆ ದುಪ್ಪಟ್ಟ ಬಿಗಿದು ಕೊಲೆ ಮಾಡಿದ್ದಾರೆ ಬಳಿಕ ಅತ್ತಿಬೆಲೆಯ ಎಕಿ ಲೇಔಟ್ ಬಳಿ ಆಕೆಯ ಮೃತದೇಹವನ್ನು ಎಸೆದಿದ್ದಾರೆ. ನಿವೇದಿತಾ ಮೂರು ವರ್ಷಗಳ ಹಿಂದೆ ಚಂದ್ರಶೇಖರನನ್ನು ವಿವಾಹವಾಗಿದ್ದಳು. ದಂಪತಿಗಳು ಆನೆಕಲ್ ನ ಅಪದದೇವನಹಳ್ಳಿಯಲ್ಲಿ ವಾಸವಿದ್ದರು. ಫ್ಯಾಬ್ರಿಕೇಷನ್ ವ್ಯಾಪಾರ ನಡೆಸುತ್ತಿದ್ದ ಚಂದ್ರಶೇಖರ್ ಪತ್ನಿ ಮತ್ತು ಮಗಳು ಇದ್ದಕ್ಕಿದ್ದಂತೆ ಕಾಣೆಯಾದಾಗ ಅಪಹರಣ ಪ್ರಕರಣ ದಾಖಲಿಸುವುದಾಗಿ ಚಂದ್ರಶೇಖರ್ ಆಸ್ಪತ್ರೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಆ ವೇಳೆ ಆಸ್ಪತ್ರೆಯ ಸಿಸಿಟಿವಿ ಕ್ಯಮಾರಾ ಪರಿಶೀಲಿಸಲುಲ್ಲೇ ಸನಿಹದ ಮನೆಯೊಂದರ ಎದುರು ಆರೋಪಿ ಸತೀಶ್ ದ್ವಿಚಕ್ರ ವಾಹನ ನಿಲ್ಲಿಸಿರುವುದು ಕಂಡುಬಂದಿದೆ.
"ಸತೀಶ್ ಮತ್ತು ನಿವೇದಿತಾ ಮದುವೆಯಾಗಲು ನಿರ್ಧರಿಸಿದ್ದರು ಎನ್ನುವುದು ವಿಚಾರಣೆ ವೇಳೆ ಬಹಿರಂಗವಾಗಿದೆ. ಸತೀಶ್, ನಿವೇದಿತಾ ಅವರ ನಿಕಟ ಸಂಬಂಧಿಯಾಗಿದ್ದು, ಆರು ತಿಂಗಳುಗಳ ಹಿಂದೆ ಇಬ್ಬರ ನಡುವೆ ಪ್ರೇಮ ಚಿಗುರಿತ್ತು. ಚಂದ್ರಶೇಖರ್ ಕೆಲಸದ ಮೇಲೆ ಮನೆಯಿಂದ ದೂರವಿದ್ದಾಗ ಅವರು ಆಗಾಗ್ಗೆ ತಮ್ಮ ಮನೆಯಲ್ಲಿ ಸೇರುತ್ತಿದ್ದರು. ಈಗ ಅವರು ಊರಿನಿಂದ ದೂರ ಹೋಗಿ ಮದುವೆಯಾಗಲು ನಿರ್ಧರಿಸಿದ್ದರು" ಹಿರಿಯ ಪೋಲೀಸ್ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.
ಇದಾಗಿ ನಿವೇದಿತಾ ತನ್ನ ಮಗುವಿನೊಡನೆ ಆಸ್ಪತ್ರೆಯಲ್ಲಿದ್ದಾಳೆಂದು ತಿಳಿದ ಸತೀಶ್ ತಾವು ಪರಾರಿಯಾಗಲು ಇದೇ ಒಳ್ಳೆಯ ಸಮಯ ಎಂದು ನಿರ್ಧರಿಸಿದ್ದು ಆಸ್ಪತ್ರೆಯಿಂದ ಮಗುವಿನ ಸಮೇತ ಪರಾರಿಯಾಗಿದ್ದಾರೆ. ಆದರೆ ಮ್ನಾರ್ಗ ಮದ್ಯದಲ್ಲಿ ತಮ್ಮ ಬಾಳಿನಲ್ಲಿ ಈ ಮಗು ಸಮಸ್ಯೆಯಾಗಬಹುದೆಂದು ತಿಳಿದ ಅವರು ಮಗುವನ್ನು ಕೊಲ್ಲಲು ನಿರ್ಧರಿಸಿದ್ದಾರೆ. ತಾನು ಚಂದ್ರಶೇಖರ್ ಅವರನ್ನು ವಿವಾಹವಾಗಲು ಮನೆ ಹಾಗೂ ಕುಟುಂಬದವರಿಂದ ಒತ್ತಡ ಹೇರಲಾಗಿತ್ತು. ಹೀಗಾಗಿ ನನಗೆ ಈ ವಿವಾಹವೇ ಇಷ್ಟವಿರಲಿಲ್ಲ ಎಂದು ನಿವೇದಿತಾ ಪೋಲೀಸರಿಗೆ ತಿಳಿಸಿದ್ದಾರೆ.
ಇದೀಗ ಬಂಧಿತ ಜೋಡಿಯನ್ನು ನಾಲ್ಕು ದಿನಗಳ ಮಟ್ಟಿಗೆ ಪೋಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸತೀಶ ಬೈಕ್ ನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com