ಮಾನಸಿಕ ಸಮಸ್ಯೆಗಳ ಬಗೆಗೆ ಬಹಿರಂಗವಾಗಿ ಚರ್ಚೆಯಾಗಬೇಕು: ರಾಮನಾಥ ಕೋವಿಂದ್

"ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಬೇಕಿದೆ.
ಮಾನಸಿಕ ಸಮಸ್ಯೆಗಳ ಬಗೆಗೆ ಬಹಿರಂಗವಾಗಿ ಚರ್ಚೆಯಾಗಬೇಕು: ರಾಮನಾಥ ಕೋವಿಂದ್
ಮಾನಸಿಕ ಸಮಸ್ಯೆಗಳ ಬಗೆಗೆ ಬಹಿರಂಗವಾಗಿ ಚರ್ಚೆಯಾಗಬೇಕು: ರಾಮನಾಥ ಕೋವಿಂದ್
Updated on
ಬೆಂಗಳುರು: "ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಬೇಕಿದೆ. ಇದರಿಂದಾಗಿ ಖಿನ್ನತೆಯಂತಹ ಸಮಸ್ಯೆಯನ್ನು ತೊಡೆದುಹಾಕಬಹುದು." ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ(ನಿಮ್ಹಾನ್ಸ್) 22ನೇ ಘಟಿಕೋತ್ಸವ ಸಮಾರಂಭದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದ್ದರು. ಮಾನಸಿಕ ಆರೋಗ್ಯ ಸಮಸ್ಯೆಗಳಂತೆಯೇ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆ ಮನೋವಿಜ್ಞಾನಿಗಳು ಮತ್ತು ಮನೋವೈದ್ಯರ ಕೊರತೆ ವಿಚಾರಗಳಾನ್ನು ಸಹ ಅವರು  ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
"ದೇಶದ ಶೇ. 10ರಷ್ಟು  ಜನ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮ್ಹಾನ್ಸ್‌ ರಾಷ್ಟ್ರೀಯ ಮಾನಸಿಕ ಆರೋಗ್ಯದ ಬಗ್ಗೆ ನಡೆಸಿರುವ ಸಮೀಕ್ಷೆ ವರದಿ ಆತಂಕ ಹುಟ್ಟಿಸುವಂತಿದೆ.  ದೇಶದಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಯುಳ್ಳವರ ಸಂಖ್ಯೆ ಜಪಾನ್ ನ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ, ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿ ಯುವಕರು, ನಗರವಾಸಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. 
"ದೇಶದ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನಿಮ್ಹಾನ್ಸ್‌ ಕೊಡುಗೆ ಅನನ್ಯವಾದದ್ದು. ಪ್ರತಿ ವರ್ಷ ವಿದೇಶಿಯರು ಸೇರಿ 7 ಲಕ್ಷ ರೋಗಿಗಳು ನಿಮ್ಹಾನ್ಸ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ರೋಗಿಗಳಲ್ಲಿ ಇಬ್ಬರು ಬಡತನದಿಂದ ಬಂದಿದ್ದು ಅವರಿಗೆ ಇಲ್ಲಿ ಉಚಿತ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ" ರಾಷ್ಟ್ರಪತಿಗಳು ಹೇಳಿದರು.
ಘಟಿಕೋತ್ಸವ ಸಮಯದಲ್ಲಿ ರಾಷ್ಟ್ರಪತಿಗಳು ಅದ್ಭುತ ಸಾಧನೆ ಮಾಡಿದ್ದ ಒಟ್ಟು ಹನ್ನೊಂದು ವಿದ್ಯಾರ್ಥಿಗಳಿಗೆ ಪದಕ ಪ್ರಧಾನ ಮಾಡಿದರು. 
ಇದೇ ವೇಳೆ 100 ಕೋಟಿ ರೂ. ವೆಚ್ಚದ ಮೂರು ಎಂಆರ್ ಐ ಜತೆಗೆ ಆಪರೇಷನ್ ಥಿಯೇಟರ್ ಗಲನ್ನು, ವೈದ್ಯಕೀಯ ಸೈಕ್ಲೋಟ್ರಾನ್ ಹಾಗು ನರವಿಜ್ಞಾನಕ್ಕೆ ಸೀಮಿತವಾದ ವಿಶೇಷ ಬ್ಲಾಕ್ ನ್ನು ರಾಷ್ಟ್ರಪತಿ ಕೋವಿಂದ್ ಉದ್ಘಾಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com