ಬೆಂಗಳೂರು: ಕಲುಷಿತ ನೀರು ಸೇವನೆ, ಇಬ್ಬರು ಕಾರ್ಮಿಕರು ಸಾವು, 30 ಜನ ಆಸ್ಪತ್ರೆಗೆ ದಾಖಲು

ಕಲುಷಿತ ನೀರು ಸೇವಿಸಿಿಬ್ಬರು ಕಾರ್ಮಿಕರು ಮೃತಪಟ್ಟು ಸುಮಾರು 30 ಮಂದಿ ಅನಾರೋಗ್ಯಕ್ಕೀಡಾದ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಲುಷಿತ ನೀರು ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟು ಸುಮಾರು 30 ಮಂದಿ ಅನಾರೋಗ್ಯಕ್ಕೀಡಾದ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ಶುಕ್ರವಾರ ಈ ಘಟನೆ ನಡೆದಿದ್ದರೂ ಕೆಲ ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಬಳಿಕ ಶನಿವಾರದಂದು ಬೆಳಕಿಗೆ ಬಂದಿದೆ. ಬೆಳಗೆರೆ ರಸ್ತೆಯಲ್ಲಿರುವ ಶೋಭಾ ಡ್ರೀಮ್ ಏಕರ್ಸ್ ನಲ್ಲಿ ನೀರು ಸೇವನೆ ಮಾಡಿದ ನಂತರ ಕೆಲವರಿಗೆ ಅತಿಸಾರ ಹಾಗೂ ವಾಂತಿಯಾಗಿದೆ ಎಂದು ಅನಾರೋಗ್ಯಕ್ಕೀಡಾದಾ ಕಾರ್ಮಿಕರು ಪೋಲೀಸರಿಗೆ ತಿಳಿಸಿದ್ದಾರೆ.
ತೀವ್ರತರವಾದ ಅತಿಸಾರದ ಪರಿಣಾಮ ಶ್ರೀಕಾಂತ್ ಸಾಹು (20) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗ, ಇಹಾಗೆಯೇ ಇನ್ನೊಬ್ಬ ಕಾರ್ಮಿಕರೂ ಮೃತಪಟ್ಟಿದ್ದು ಆತನ ಗುರುತು ಪತ್ತೆಯಾಗಿಲ್ಲ.
ಘಟನೆಯ ಸಂಬಂಧ ಸಾಹು ಅವರ ಸಹೋದರ ಶೋಭಾ ಡೆವಲಪರ್ಸ್ ವಿರುದ್ಧ ವರ್ತೂರು ಪೋಲೀಸರಿಗೆ ದೂರು ಸಲ್ಲಿಸಿದ್ದು ಆ ದುರಿನ ಕುರಿತಂತೆ ರ್ಯಲ್ ಎಸ್ಟೇಟ್ ಏಜನ್ಸಿ ಹೇಳಿಕೆಯನ್ನು ನೀಡಿ "ನಾವು ಈ ಘಟನೆ ಕುರಿತಂತೆ ತ್ವರಿತವಾಗಿ ಪರಿಶೀಲನೆ ನಡೆಸುತ್ತೇವೆ. ಅನಾರೋಗ್ಯಕ್ಕೀಡಾದ ಕಾರ್ಮಿಕರ ಕಾಳಜಿ ನಮಗಿದೆ." ಎಂದಿದ್ದಾರೆ.
ಕಾಲರಾದಿಂದಾಗಿ ಇಬ್ಬರು ಕಾರ್ಮಿಕರು ನಿಧನರಾಗಿದ್ದಾರೆ, ಕಟ್ಟಡ ಕಾರ್ಮಿಕರು ಗಂಭೀರವಾದ ಬ್ಯಾಕ್ಟೀರಿಯಾದ ಸೋಂಕು ಹೊಂದಿರುವುದು ಕಂಡುಬಂದಿದೆ ಇದು ಕಲುಷಿತ ನೀರಿನ ಕಾರಣದಿಂದ ಉಂತಾಗಿದೆ ಎಂದು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಸಂಜೀವ್ ಲೆವಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com