ಸಫಾಯಿ ಕರ್ಮಚಾರಿಗಳಿಗೆ ಪಾಲಿಗೆ ಸಿಹಿ ತಂದ ನೂತನ ವರ್ಷ

ಸಫಾಯಿ ಕರ್ಮಚಾರಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ, ಅವರ ಏಳಿಗೆಗೆ ಸಹಾಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಸಫಾಯಿ ಕರ್ಮಚಾರಿಗಳು
ಸಫಾಯಿ ಕರ್ಮಚಾರಿಗಳು
ಬೆಂಗಳೂರು: ಸಫಾಯಿ ಕರ್ಮಚಾರಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ, ಅವರ ಏಳಿಗೆಗೆ ಸಹಾಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಈ ಸಮುದಾಯವನ್ನು ಸಾರ್ವತ್ರಿಕ ಆರೋಗ್ಯ ಯೋಜನೆಯಡಿಯಲ್ಲಿ ತರುವುದು ಹಾಗೂ ಕೈನಿಂದ ಶುಚಿಮಾಡುವ ಕ್ರಮವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಆಶಯ ಸರ್ಕಾರದ ಕ್ರಮದಲ್ಲಿದೆ. ಸಫಾಯಿ ಕರ್ಮಚಾರಿಗಳು ಗೌರವಾನ್ವಿತ ಜೀವನ ನಡೆಸುವಂತೆ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತರಬೇಕಿದೆ ಎಂದು ಡಿ.27 ರಂದು ಮುಖ್ಯ ಕಾರ್ಯದರ್ಶಿ ನೇತೃತ್ವದ ನಡೆದ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.
ರಾಜ್ಯದ ನೌಕರ ಸಂಘಟನೆಗಳಿಗೆ ಕರ್ನಾಟಕ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮವು ಕ್ರೆಡಿಟ್ ನೀಡಲಿದ್ದು ನಿಗಮಕ್ಕೆ ಸಬ್ಸಿಡಿ ದರದಲ್ಲಿ ಸ್ವಚ್ಚತಾ ಯಂತ್ರಗಳನ್ನು ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದೇ ವೇಳೆ  ಲೋಡ್ ಅನ್ ಲೋಡ್ ಮಾಡುವ ಕಾರ್ಮಿಕರು, ಚಾಲಕರು ಮತ್ತು ಸಪಾಯಿ ಕರ್ಮಚಾರಿಗಳುಗಳಿಗೆ ಕನಿಷ್ಠ ವೇತನ ಯೋಜನೆ ಮತ್ತು ಸಾಮಾಜಿಕ ಮತ್ತು ವಿತ್ತೀಯ ಸುರಕ್ಷತೆ ಯೋಜನೆಗಳಾದ ಭಾವಿಷ್ಯ ನಿಧಿ ಮತ್ತು ಇಎಸ್ಐ ಯೋಜನೆಗಳಿಗೆ ಇವರನ್ನು ಪರಿಗಣಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
"ರಕ್ಷಣಾತ್ಮಕ ಗೇರ್ ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪೂರೈಸುವ ಮೂಲಕ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಈ ಸುರಕ್ಷತಾ ಲಭ್ಯವಾಗಿವಂತೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡುತ್ತಿದ್ದೇವೆ" ಮುಖ್ಯ ಕಾರ್ಯದರ್ಶಿಯವರ ಕಛೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com