ಮೂರು ವರ್ಷಗಳಲ್ಲಿ 262 ಕಾಡು ಪ್ರಾಣಿಗಳ ಹತ್ಯೆ: ಅರಣ್ಯ ಸಚಿವ ರಮಾನಾಥ ರೈ

ಮೋಜು ಹಾಗೂ ಮಾಂಸಕ್ಕಾಗಿ ಕಳೆದ 3 ವರ್ಷಗಳಲ್ಲಿ 262 ಕಾಡು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲೇ ಅತಿ...
ರಮಾನಾಥ ರೈ
ರಮಾನಾಥ ರೈ

ಬೆಂಗಳೂರು: ಮೋಜು ಹಾಗೂ ಮಾಂಸಕ್ಕಾಗಿ ಕಳೆದ 3 ವರ್ಷಗಳಲ್ಲಿ 262 ಕಾಡು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡು ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ಅರಣ್ಯ ಸಚಿವ ರಮಾಮಾಥ ರೈ ಹೇಳಿದ್ದಾರೆ.

ಬಿಜೆಪಿ ಎಂಎಲ್ ಸಿ ಸುನೀಲ್ ಸುಬ್ರಮಣ್ಯ ಅವರ ಪ್ರಶ್ನೆಗೆ ವಿಧಾನ ಪರಿಷತ್ ನಲ್ಲಿ ಉತ್ತರಿಸಿದ ಸಚಿವ ರಮಾನಾಥ ರೈ ರಾಜ್ಯದ 11 ಅರಣ್ಯ ವಿಭಾಗಗಳಲ್ಲಿ ಪ್ರಾಣಿಗಳನ್ನು ಕೊಲ್ಲಲಾಗಿದೆ, ಚಾಮರಾಜನಗರದಲ್ಲಿ ಅತಿ ಹೆಚ್ಚಿನ ಅಂದರೆ 90 ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ,  ಅದೇ ರೀತಿ ಶಿವಮೊಗ್ಗ ಅರಣ್ಯ ಪ್ರದೇಶದಲ್ಲಿ 51 ಪ್ರಾಣಿಗಳು ಕೊಲ್ಲಲ್ಪಟ್ಟಿವೆ. ಚಿಕ್ಕಮಗಳೂರಿನಲ್ಲಿ 32 ಮತ್ತು ಉತ್ತರ ಕನ್ನಡದಲ್ಲಿ 26 ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ.

262 ಪ್ರಾಣಿಗಳ ಹತ್ಯೆ ಸಂಬಂಧ ಕೇಸು ದಾಖಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರಿನ ಬೇಟೆ ಪ್ರಕರಣ ಸಂಬಂಧ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ,

ಇನ್ನೂ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗು ಸಿಗರೇಟು ಮತ್ತು ಬೀಡಿ ಸೇವನೆ ಕಾರಣ ಎಂದು ರಮಾನಾಥ ರೈ ವಿವರಿಸಿದ್ದಾರೆ. ಅರಣ್ಯದಲ್ಲಿ ಬಿದಿರು ಹಾಗೂ ಹುಲ್ಲಿನ ಪೊದೆಗಳಿವೆ, ಬಿದಿರು ಬೊಂಬಿನ ತಿಕ್ಕಾಟದಿಂದಾಗಿ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳಲು ಒಂದು ಕಾರಣವಾಗಿದೆ. ಜೊತೆಗೆ ಪ್ರವಾಸಿಗರ ದೂಮಪಾನ ಕೂಡ ಕಾಡ್ಗಿಚ್ಚಿಗೆ ಕಾರಣ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com