ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಳ್ಳಬೇಟೆಗಾರರಿಗೆ ವರವಾಗಿರುವ ಹೊಸ ಅಸ್ತ್ರ ಯೂರಿಯಾ!

ಪ್ರಾಣಿಗಳನ್ನು ಕೊಲ್ಲಲು ಆಯುಧಗಳನ್ನು ಬಳಸುವುದು ಹಳೇಯದಾಗಿದೆ. ರೈತರು ಕೃಷಿಗಾಗಿ ಬಳಸುವ ಯೂರಿಯಾವನ್ನ ಬಳಸುವುದು ಕಳ್ಳ ಬೇಟೆಗಾರರ ಹೊಸ ..
Published on

ಬೆಂಗಳೂರು: ಪ್ರಾಣಿಗಳನ್ನು ಕೊಲ್ಲಲು ಆಯುಧಗಳನ್ನು ಬಳಸುವುದು ಹಳೇಯದಾಗಿದೆ.  ರೈತರು ಕೃಷಿಗಾಗಿ ಬಳಸುವ ಯೂರಿಯಾವನ್ನ ಬಳಸುವುದು ಕಳ್ಳ ಬೇಟೆಗಾರರ ಹೊಸ ಅಸ್ತ್ರವಾಗಿದೆ. ಪ್ರಾಣಿಗಳ ಹತ್ಯೆಗಾಗಿ ಹಂತಕರು ಯೂರಿಯಾ ಬಳಸುತ್ತಿರುವುದು ತಿಳಿದು ಬಂದಿದೆ.

ಚಿರತೆ ಮತ್ತು ಜಿಂಕೆಗಳನ್ನು ರಸಗೊಬ್ಬರ ಯೂರಿಯಾದಿಂದ ಕೊಲ್ಲುವ ಹೊಸ ಟೆಕ್ನಿಕ್ ಬಳಕೆ ಮಾಡಲಾಗುತ್ತಿದೆ. ಮಲೈ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ನಾಯಿಗಳ ಗುಂಪೊಂದು ಜಿಂಕೆ ತಲೆಯೊಂದನ್ನು ಎಳೆದು ತಂದಿದ್ದವು. ಈ ವೇಳೆ ಅದನ್ನು ಪರೀಕ್ಷೆ ನಡೆಸಿದಾಗ ಯೂರಿಯಾ ಬೆರೆಸಿದ ನೀರು ಕುಡಿದು ಜಿಂಕೆ ಸಾವನ್ನಪ್ಪಿರುವುದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲಿನ ಸ್ಥಳೀಯ ನಿವಾಸಿಗಳ ಪ್ರಕಾರ ಕೇವಲ ಜಿಂಕೆ ಮಾತ್ರವಲ್ಲ, ಯೂರಿಯಾ ಬೆರೆಸಿದ ವಿಷಪೂರಿತ ನೀರನ್ನು ಕುಡಿದು ಹಲವು ಕುರಿಗಳು ಕೂಡ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಕುದುರೆಮುಖ ನ್ಯಾಷನಲ್ ಪಾರ್ಕ್ ನಲ್ಲಿ ಲಕ್ಯ ಹೊಳ್ಳೆಯಲ್ಲಿದ್ದ ಮೀನುಗಳಿಗೆ  ಕಾಫರ್ ಸಲ್ಫೇಟ್ ಹಾಕಿ ಕೊಲ್ಲಲು ಯತ್ನಿಸಿದ್ದ ಮೂವರನ್ನು ಬಂಧಿಸಿದ್ದಾಗಿ ಮಲೈ ಮಹದೇಶ್ವರ ಬೆಟ್ಟ ವನ್ಯಜೀವಿ ಅರಣ್ಯಧಾಮ ಅರಣ್ಯಾಧಿಕಾರಿ ಸುಂದರ್ ತಿಳಿಸಿದ್ದಾರೆ.

ಪ್ರಾಣಿಗಳನ್ನು ಶೂಟ್ ಮಾಡಿ ಕೊಲ್ಲಲು ಕಷ್ಟವಾದ ಸಮಯದಲ್ಲಿ ಕಳ್ಳಬೇಟೆಗಾರರು ಈ ರೀತಿಯ ವಿಧಾನ ಬಳಸಿ ಕೊಲ್ಲುತ್ತಾರೆ, ಆದರೆ ಬಳಕೆಯ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟ ಎಂದು ವನ್ಯಜೀವಿ ಸಂರಕ್ಷಕ ಡಾ.ವಿ ಗಿರೀಶ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com