ಏರೋ-ಇಂಡಿಯಾ-2017 ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚಾಲನೆ

ಇಲ್ಲಿನ ಯಲಹಂಕ ವಾಯುನೆಲೆ ವಿಮಾನ ನಿಲ್ದಾಣದಲ್ಲಿ ಏರೋ ಇಂಡಿಯಾ-2017ಕ್ಕೆ ರಕ್ಷಣಾ ಸಚಿವ ಮನೋಹರ್...
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
Updated on
ಬೆಂಗಳೂರು: ಇಲ್ಲಿನ ಯಲಹಂಕ ವಾಯುನೆಲೆ ವಿಮಾನ ನಿಲ್ದಾಣದಲ್ಲಿ ಏರೋ ಇಂಡಿಯಾ-2017ಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾದ 11ನೇ ಆವೃತ್ತಿ ಇದಾಗಿದೆ.
ಉಕ್ಕಿನ ಹಕ್ಕಿಗಳ ಹಾರಾಟ, ಚಮತ್ಕಾರ ಪ್ರದರ್ಶನಕ್ಕೆ ಇಂದು ಬೆಳಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚಾಲನೆ ನೀಡಿದರು.
ಈ ವರ್ಷದ ಪ್ರದರ್ಶನದಲ್ಲಿ 270 ದೇಶೀಯ, 279 ವಿದೇಶಿ ಸೇರಿ 549 ಕಂಪೆನಿಗಳು ಭಾಗವಹಿಸುತ್ತಿವೆ. 70ಕ್ಕೂ ಹೆಚ್ಚು ವಿಮಾನಗಳು ಮೈನವಿರೇಳಿಸುವ ಪ್ರದರ್ಶನ ನೀಡಲಿವೆ. ಭಾರತದ ತೇಜಸ್, ಸಾರಂಗ್, ಸ್ವೀಡನ್ ನ ಸ್ಕ್ಯಾಂಡಿನೇವಿಯನ್, ಇಂಗ್ಲೆಂಡಿನ ಯಾಕೊವ್ ಲೇವ್ಸ್, ಫ್ರಾನ್ಸ್ ನ ರಫೇಲ್, ಸೂರ್ಯಕಿರಣ್ ಯುದ್ಧ ವಿಮಾನ ಪ್ರಮುಖ ಆಕರ್ಷಣೆಯಾಗಿದೆ.
ಇಂದಿನಿಂದ  ನಾಡಿದ್ದು 18ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಫ್ರಾನ್ಸ್, ರಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಸೇರಿ ಸುಮಾರು 51 ರಾಷ್ಟ್ರಗಳ ವಿವಿಧ ಸಂಸ್ಥೆಗಳು ಪ್ರದರ್ಶನದಲ್ಲಿ ತಾವು ಉತ್ಪಾದಿಸುವ ಯುದ್ಧೋಪಕರಣಗಳನ್ನು ಪ್ರದರ್ಶಿಸಲಿವೆ.
ಇವೆಲ್ಲದರ ಜತೆಗೆ ಕರ್ನಾಟಕ, ಕೇರಳ, ಆಂಧ್ರಪದೇಶ, ಗುಜರಾತ್ ರಾಜ್ಯಗಳು ಬಂಡವಾಳ ಆಕರ್ಷಿಸುವ ಸಲುವಾಗಿ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ. ಅದರಲ್ಲೂ ಆಂಧ್ರಪ್ರದೇಶ ಬೇರೆಲ್ಲ ರಾಜ್ಯಗಳಿಗಿಂತ ಮುಂದೆ ಹೋಗಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ವೈಮಾನಿಕ ಪ್ರದರ್ಶನದ ವೇಳೆ ನಡೆಸಲಿದೆ.
ಈ ಬಾರಿ 27,698 ಚದರ ಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ ಒಟ್ಟು 72 ವಿಮಾನಗಳು ಪ್ರದರ್ಶನ ನೀಡಲಿವೆ. ವೈಮಾನಿಕ ಪ್ರದಶನಕ್ಕೆ ಸುಮಾರು 2 ಲಕ್ಷ ವೀಕ್ಷಕರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಹಾಗೆಯೇ, 65 ದೇಶಗಳ ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ.
11ನೇ ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಈ ವರ್ಷ 'ಮೇಕ್ ಇನ್ ಇಂಡಿಯಾ' ಸ್ಪರ್ಶ ನೀಡಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com