ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಮತ್ತಿತ್ತರ ಆರೋಪಿಗಳಿಗೆ ಪೂರ್ತಿ 4 ವರ್ಷ ಜೈಲು ಶಿಕ್ಷೆಯಿಲ್ಲ

ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿರುವ ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ, ಆಕೆಯ ನಾದಿನಿ ಇಳವರಸಿ ಮತ್ತು ಸೋದರಳಿಯ ಸುಧಾಕರನ್ ...
ಶಶಿಕಲಾ, ಇಳವರಸಿ ಮತ್ತು ಸುಧಾಕರನ್
ಶಶಿಕಲಾ, ಇಳವರಸಿ ಮತ್ತು ಸುಧಾಕರನ್

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿರುವ ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ, ಆಕೆಯ ನಾದಿನಿ ಇಳವರಸಿ ಮತ್ತು ಸೋದರಳಿಯ ಸುಧಾಕರನ್ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಇರುವಂತಿಲ್ಲ, ಬಹುಬೇಗನ ತಮಿಳುನಾಡು ರಾಜಕೀಯಕ್ಕೆ ಅವರು ಮರಳಬಹುದು.

ಜೊತೆಗೆ ಮೂವರು ಜೈಲಿನಿಂದ ಹೋಗುವಾಗ ಖಾಲಿ ಕೈಯ್ಯಿಂದ ಹೋಗದೇ ತಮ್ಮ ಜೇಬಿನಲ್ಲಿ ಹಣ ತುಂಬಿಸಿಕೊಡು ಹೋಗಬಹುದಾಗಿದೆ.
ಮೂವರು ತಮ್ಮ 4 ವರ್ಷದ ಜೈಲುವಾಸ ಅವಧಿಯಲ್ಲಿ ಹೆಚ್ಚು ಕಡಿಮೆ ಒಂದು ವರ್ಷ ಕಡಿತಗೊಳ್ಳಲಿದೆ.

ಅಪರಾಧಿಗಳು ಜೈಲಿನಲ್ಲಿ ಉತ್ತಮ ನಡತೆ ತೋರಿದರೇ ಅವರಿಗೆ ತಿಂಗಳಲ್ಲಿ ಆರು ದಿನಗಳ ಶಿಕ್ಷೆ ಕಡಿಮೆಯಾಗುತ್ತದೆ. ಇದನ್ನು ಹೊರತು ಪಡಿಸಿ ಸನ್ನಡತೆಗಾಗಿ 20 ದಿನಗಳ ಶಿಕ್ಷೆ ಕೂಡ ಕಡಿಮೆಯಾಗುತ್ತದೆ. ಈ ಮೊದಲು ಶಶಿಕಲಾ 35 ದಿನ ಹಾಗೂ ಇಳವರಸಿ ಮತ್ತು ಸುಧಾಕ್ರರ್ 22 ದಿನ ಜೈಲು ವಾಸ ಅನುಭವಿಸಿದ್ದ ಹಿನ್ನೆಲೆಯಲ್ಲಿ ಅವರ ಜೈಲು ಶಿಕ್ಷೆ ಅವಧಿ ಮತ್ತಷ್ಟು ಕಡಿಮೆಯಾಗಲಿದೆ.

ಕರ್ನಾಟಕ ಜೈಲು ಕಾಯ್ದೆ ಅನುಗುಣ ಅಪರಾಧಿಗಳು ಪ್ರತಿದಿನ ಕೆಲಸ ಮಾಡಿ ಕೂಲಿ ಹಣ ಸಂಗ್ರಹಿಸಬಹುದು. ಪ್ರತಿದಿನ ಕೆಲಸ ಮಾಡಲೇಬೆಕು ಎಂಬುದು ಕಡ್ಡಾಯವಿಲ್ಲ, ಶಿಕ್ಷೆ ಸರಳವಾಗಿದ್ದಾರೆ ಕೆಲಸ ಮಾಡುವುದಕ್ಕೆ ಅವರಿಗೆ ತಡೆಯಿಲ್ಲ.

ಕೆಲಸ ಮಾಡುವ ಆಸಕ್ತಿ ಇರುವವರು ಜೈಲು ಸೂಪರಿಂಟೆಂಡ್ ಅವರಿಗೆ ಮನವಿ ಸಲ್ಲಿಸಿದರೇ ಅಧಿಕಾರಿಗಳು ಅದಕ್ಕೆ ಅನುಮೋದನೆ ನೀಡುತ್ತಾರೆ, ನಂತರ ವೈದ್ಯಕ4ಯ ಪರೀಕ್ಷೆ ನಂತರ ಕೆಲಸ ಮಾಡಬಹುದು. ಜೈಲು ಸೇರಿದ 1 ತಿಂಗಳ ನಂತರ ಅಪರಾಧಿಗಳಿಗೆ ತಕೂಬೇತಿ ನೀಡಲಾಗುತ್ತದೆ.

ಉತ್ತಮವಾಗಿ ಕೆಲಸ ಮಾಡಿ ಸನ್ನಡತೆ ಹೊಂದಿದ ಅಪರಾಧಿಗಳಿಗೆ ತಿಂಗಳಿಗೆ 6 ದಿನಗಳ ಕಾಲ ಶಿಕ್ಷೆ ಅವಧಿ ಕಡಿತಗೊಳ್ಳುತ್ತದೆ. 1 ವರ್ಷಕ್ಕೆ 27 ದಿನಗಳ  ಜೈಲು ಶಿಕ್ಷೆ ಕಡಿಮೆಯಾಗುತ್ತದೆ. ಕೈದಿಗಳು ಮಾಡುವ ಕೆಲಸಗಳಿಗೆ ಅನುಗುಣವಾಗಿ 30, 40 ಹಾಗೂ 50 ರುಪಾಯಿ ಕೂಲಿ ಸಿಗುತ್ತದೆ.

ಕೈದಿಗಳು ಹೆಚ್ಚಿನ ಕೆಲಸ ಮಾಡಿ, ಸಂರಕ್ಷಣೆ, ಶುಚಿತ್ವ. ಅಡುಗೆ ಮಾಡುವುದು, ರೋಗಗಳಿಂದ ನರಳುತ್ತಿರುವ ರೋಗಿಗಳ ಸೇವೇ ಮಾಡಿದರೇ ಅಂತರಿಗೆ ತಿಂಗಳಲ್ಲಿ 7 ದಿನಗಳ ಕಾಲ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಕಾರಾಗೃಹ ಇಲಾಖೆಯ ಮಾಜಿ ಡಿಐಜಿ ಜಯಸಿಂಹ ಹೇಳಿದ್ದಾರೆ. ಒಂದು ವೇಳೆ ಕೈದಿಗಳ ವರ್ತನೆಯಲ್ಲಿ ಸುಧಾರಣೆ ಇಲ್ಲದಿದ್ದರೇ ಅಂತವರ ಶಿಕ್ಷೆ ಪ್ರಮಾಣ ಕಡಿತದ ಅವಧಿಯನ್ನು ವಾಪಸ್ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ವಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com