ಬೆಳಗಾವಿ: ಮರಾಠ ಕ್ರಾಂತಿ ಮೌನ ಮೆರವಣಿಗೆಯಲ್ಲಿ 3ಲಕ್ಷ ಮಂದಿ ಭಾಗಿ

ಬೆಳಗಾವಿಯಲ್ಲಿ ಮರಾಠ ಸಮುದಾಯ ಆಯೋಜಿಸಿದ್ದ ಮರಾಠ ಕ್ರಾಂತಿ ಮೋರ್ಚಾ ಮೌನ ಮೆರವಣಿಗೆಯಲ್ಲಿ ಸುಮಾರು 3 ಲಕ್ಷ ಜನ ಭಾಗಿಯಾಗಿ ಐತಿಹಾಸಿಕ...
ಬೆಳಗಾವಿಯಲ್ಲಿ ಆಯೋಜಿಸಿದ್ದ ಮರಾಠ ಕ್ರಾಂತಿ ಮೌನ ಮೆರವಣಿಗೆ
ಬೆಳಗಾವಿಯಲ್ಲಿ ಆಯೋಜಿಸಿದ್ದ ಮರಾಠ ಕ್ರಾಂತಿ ಮೌನ ಮೆರವಣಿಗೆ

ಬೆಳಗಾವಿ: ಬೆಳಗಾವಿಯಲ್ಲಿ ಮರಾಠ ಸಮುದಾಯ ಆಯೋಜಿಸಿದ್ದ ಮರಾಠ ಕ್ರಾಂತಿ ಮೋರ್ಚಾ ಮೌನ ಮೆರವಣಿಗೆಯಲ್ಲಿ ಸುಮಾರು 3 ಲಕ್ಷ ಜನ ಭಾಗಿಯಾಗಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು. ದೇಶದ 60 ನೇ ಹಾಗೂ ರಾಜ್ಯದಲ್ಲಿ ನಡೆದ 4ನೇ ಮರಾಠ ಕ್ರಾಂತಿ ಮೋರ್ಚಾ ಇದಾಗಿತ್ತು.

ಮರಾಠ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಿ ಶಿಕ್ಷಣದಲ್ಲಿ ಮೀಸಲಾತಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಮೋರ್ಚಾ ಹಮ್ಮಿಕೊಳ್ಳಲಾಗಿತ್ತು.

ದಲಿತರ ಜಾತನಿಂದನೆ ಕಾಯಿದೆಯನ್ನು ನಿರ್ಮೂಲಗೊಳಿಸಬೇಕು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಛತ್ರಪತಿ ಶಿವಾಜಿ ಭಾವಿಚಿತ್ರ ಹಾಕುವುದು ಹಾಗೂ ಶಾಲಾ ಪಠ್ಯ ಪುಸ್ತಕಗಳಲ್ಲಿ ಶಿವಾಜಿ ಬಗ್ಗೆ ಮಾಹಿತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮರಾಠ ಸಮುದಾಯವನ್ನು ಈಗಾಗಲೇ ಕರ್ನಾಟಕದಲ್ಲಿ ಪ್ರವರ್ಗ2ಎ ಗೆ ಸೇರಿಸಲಾಗಿದೆ, ಶಿವಾಜಿ ಗಾರ್ಡನ್ ನಿಂದ ಆರಂಭವಾದ ಮೆರವಣಿಗೆ ಬೋಗಾರ್ವೆ ವೃತ್ತದವರೆಗೂ ನಡೆಯಿತು. ಈ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಬಾಗವಹಿಸಿದ್ದರು, ಯಾವುದೇ ಅಹಿತರರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

ಮೆರವಣಿಗೆಯಲ್ಲಿ ಭಗವಾ ಧ್ವಜ, ಶಿವಾಜಿ ಭಾವಚಿತ್ರವುಳ್ಳ ಧ್ವಜಗಳು ರಾರಾಜಿಸಿದವು. ಪುಟ್ಟ ಮಕ್ಕಳು ಶಿವಾಜಿ ಮಹಾರಾಜರ ವೇಷಭೂಷಣಗಳನ್ನು ತೊಟ್ಟಿದ್ದರು. ಯುವಕ– ಯುವತಿಯರು ಕಪ್ಪು ಟಿ–ಶರ್ಟ್‌, ಪೇಟಾ ಧರಿಸಿದ್ದರು.

ಮೆರವಣಿಗೆ ನೇತೃತ್ವವನ್ನು ವಹಿಸಿಕೊಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂ.ಇ.ಎಸ್‌) ಮುಖಂಡರು ಬರೆದುಕೊಟ್ಟ ಭಾಷಣವನ್ನು ಬಾಲಕಿಯರು ಓದಿದರು.
ಲಿಖಿತ ಭಾಷಣ ಓದಿದ ಐವರು ಬಾಲಕಿಯರು ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಅದರಲ್ಲಿ ಕರ್ನಾಟಕ– ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಎಲ್ಲರೂ ಸಹಕರಿಸಬೇಕು ಎಂಬ ಅಂಶವೂ ಸೇರಿತ್ತು.ಜೊತೆಗೆ ಮರಾಠಿಯಲ್ಲಿ ಎಲ್ಲಾ ದಾಖಲಾತಿಗಳನ್ನು ಒದಗಿಸಬೇಕು ನಮಗೆ ಕನ್ನಡ ಅರ್ಥವಾಗುವುದಿಲ್ಲ ಎಂಬುದಾಗಿ ಸೇರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com