ಆಡಳಿತ ಕೇಂದ್ರಬಿಂದು ವಿಧಾನಸೌಧವನ್ನು ಉದ್ಘಾಟಿಸಿದವರು ಯಾರು?

ಶಕ್ತಿಸೌಧ, ರಾಜ್ಯದ ಆಡಳಿತದ ಕೇಂದ್ರಬಿಂದು ವಿಧಾನ ಸೌಧದ ನಿರ್ಮಾಣ ಕೆಲಸ 1956 ರಲ್ಲಿ ಸಂಪೂರ್ಣಗೊಂಡಿತು. ಆದರೆ ಕಟ್ಟ ನಿರ್ಮಾಣದ ನಂತರ ಅದನ್ನು ...
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ಶಕ್ತಿಸೌಧ, ರಾಜ್ಯದ ಆಡಳಿತದ ಕೇಂದ್ರಬಿಂದು ವಿಧಾನ ಸೌಧದ ನಿರ್ಮಾಣ ಕೆಲಸ 1956 ರಲ್ಲಿ ಸಂಪೂರ್ಣಗೊಂಡಿತು. ಆದರೆ ಕಟ್ಟ ನಿರ್ಮಾಣದ ನಂತರ ಅದನ್ನು ಯಾರು ಉದ್ಘಾಟಿಸಿದರು ಯಾವಾಗ ಉದ್ಘಾಟಿಸಿದರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.
ವಿಧಾನ ಸೌಧ ಯಾರಿಂದ, ಯಾವಾಗ ಉದ್ಘಾಟನೆಯಾಯಿತು ಎಂಬುದರ ಸಂಬಂಧ ರಾಜ್ಯ ಸರ್ಕಾರದ ಬಳಿಯೂ ಯಾವುದೇ ಮಾಹಿತಿಯಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ವಿಧಾನ ಸೌಧ ಮತ್ತು ವಿಕಾಸ ಸೌಧವನ್ನು ಯಾರು ಉದ್ಘಾಟಿಸಿದರು ಎಂಬ ಮಾಹಿತಿ ಕೋರಿದ್ದರು. ಇದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆ ಆ ಸಂಬಂಧ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.
ವಿಧಾನ ಸೌಧ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ ಬಗ್ಗೆ ಮಾಹಿತಿಯಿದೆ. ಆದರೆ ಯಾವಾಗ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣವಾಯಿತು, ಆ ವೇಳೆ ಯಾರು ಮುಖ್ಯಮಂತ್ರಿಯಾಗಿದ್ದರು, ಯಾರು ಕಟ್ಟಡ ಉದ್ಘಾಟಿಸಿದರು ಎಂಬ ಬಗ್ಗೆ ಎಲ್ಲಿಯೂ ನವಿಖರ ಮಾಹಿತಿ ಇಲ್ಲ ಎಂದು ಉಗ್ರಪ್ಪ ತಿಳಿಸಿದ್ದಾರೆ.
ಇಂಥ ಐತಿಹಾಸಿಕ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ. ನಾನು ಕೇವಲ ಕುತೂಹಲಕ್ಕಾಗಿ ವಿಧಾನಸೌಧ ಉದ್ಘಾಟನೆಯಾದ ದಿನಾಂಕ ಕೇಳಿದೆ, ಆದರೆ ಇಲಾಖೆಯಿಂದ ಬಂದ ಉತ್ತರ ನನಗೆ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ. ಸಂಸತ್ತು ಬಿಟ್ಟರೇ ದೇಶದ ಅತ್ಯುತ್ತಮ ಸ್ಮಾರಕ ಇದಾಗಿದೆ. ಶಂಕುಸ್ಥಾಪನೆ ದಿನಾಂಕ ನಮೂದಿಸಿದವರಿಗೆ ಉದ್ಘಾಟನೆ ಬಗ್ಗೆ ಮಾಹಿತಿ ಇಲ್ಲ ಎಂದರೇ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com